ಬೆಂಗಳೂರು : ಭಾರತದಲ್ಲಿ ಅರಣ್ಯ ಹಾಗೂ ಹಸಿರು ಹೊದಿಕೆ ಪ್ರಮಾಣವು 2021 ರಿಂದ 2023ರ ಅವಧಿಯಲ್ಲಿ 1445 ಚದರ ಕಿ.ಮೀ.ನಷ್ಟು ವೃದ್ಧಿಸಿದೆ. ಅಂದರೆ ದೇಶದ ಒಟ್ಟು ಭೂಭಾಗದಶೇ.25.17 ಪ್ರದೇಶದಲ್ಲೀಗ ಅರಣ್ಯವಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ ಕಳವಳಕಾರಿ ವಿಷಯವೆಂದರೆ, ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಅರಣ್ಯ ಪ್ರದೇಶ ಕುಸಿತದ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನ ಪಡೆದಿದೆ.
ಹೌದು ಈ ಕುರಿತಂತೆ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ (ISFR) ಬಿಡುಗಡೆ ಮಾಡಿರುವ ವರದಿ ಅನ್ವಯ, 'ಕಳೆದ 2 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅರಣ್ಯ ಮತ್ತು ಮರಗಳು ನಾಶವಾದ ರಾಜ್ಯಗಳ ಮೇಲೆ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. 2021-23ರ ಅವಧಿಯಲ್ಲಿ ಕರ್ನಾಟಕದಲ್ಲಿ 459.36 ಚದರ ಕಿ.ಮೀ.ನಷ್ಟು ಅರಣ್ಯ ನಾಶವಾಗಿದೆ. ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 612.41 ಚ.ಕಿ.ಮೀ. ಮತ್ತು ಲಡಾಖ್‌ನಲ್ಲಿ 159.26 ಚ.ಕಿ.ಮೀ. ಅರಣ್ಯ ನಾಶವಾಗಿದೆ.
ಇವು ಟಾಪ್ 3 ರಾಜ್ಯ
ಛತ್ತೀಸ್‌ಗಢ, ಉತ್ತರಪ್ರದೇಶ, ಒಡಿಶಾ ಅತಿ ಹೆಚ್ಚು ಪ್ರಮಾಣದಲ್ಲಿ ಅರಣ್ಯ ಮತ್ತು ಮರಗಳು ವೃದ್ಧಿಯಾದ ರಾಜ್ಯಗಳಾಗಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಮಧ್ಯಪ್ರದೇಶ,ಅರುಣಾಚಲ ಪ್ರದೇಶ ಹಾಗೂ ಮಹಾರಾಷ್ಟ್ರ ಗಳಲ್ಲಿ ಅರಣ್ಯಗಳ ಗಾತ್ರ ದೊಡ್ಡದಿದೆ. ಅತ್ತ ಪಶ್ಚಿಮ ಘಟ್ಟಗಳು ಹಾಗೂ ಪೂರ್ವದ ರಾಜ್ಯಗಳಲ್ಲಿ 58.22 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
Post a Comment