ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ₹85,520 ಕೋಟಿ ಲಾಭ ಗಳಿಸಿವೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸುರಕ್ಷತೆ, ಸ್ಥಿರ ಮತ್ತು ಆರೋಗ್ಯದಾಯಕವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದ ಅವರು, 2023-24ರ ಹಣಕಾಸು ವರ್ಷದಲ್ಲಿ ₹1.41 ಲಕ್ಷ ಕೋಟಿ ದಾಖಲೆಯ ಲಾಭ ಗಳಿಸಿದ್ದವು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಜನ್‌ಧನ್ ಖಾತೆಗಳಲ್ಲಿ ಒಟ್ಟು ಠೇವಣಿ ₹2.37 ಲಕ್ಷ ಕೋಟಿಯಷ್ಟಿದೆ. 2014ರಲ್ಲಿ ಸರಾಸರಿ ಈ ಖಾತೆಗಳಲ್ಲಿನ ಬ್ಯಾಲೆನ್ಸ್ ₹1,065 ಆಗಿತ್ತು. ಅದು ಈಗ ₹4,397ಕ್ಕೆ ಏರಿದೆ ಎಂದು ಸಚಿವರು ತಿಳಿಸಿದರು.
Post a Comment