ರಷ್ಯಾದ ಪ್ರಮುಖ ನಗರ ಕಜಾನ್‌ನ ಬೃಹತ್ ಕಟ್ಟಡಗಳ ಮೇಲೆ 9/11 ಮಾದರಿ ಉಕ್ರೇನ್ ದಾಳಿ

 


ಕೀವ್, ಉಕ್ರೇನ್: ರಷ್ಯಾದ ಪ್ರಮುಖ ನಗರವಾದ ಕಜಾನ್‌ನ ದೊಡ್ಡ ದೊಡ್ಡ ವಾಣಿಜ್ಯ, ವಸತಿ ಕಟ್ಟಡಗಳ ಮೇಲೆ ಉಕ್ರೇನ್ ದ್ರೋಣ್‌ ದಾಳಿ ಮಾಡಿದೆ.

ಅಮೆರಿಕದ WTO ವಾಣಿಜ್ಯ ಕಟ್ಟದ ಮೇಲೆ 2001 ನವೆಂಬರ್ 9 ರಂದು (9/11) ನಡೆದಿದ್ದ ವೈಮಾನಿಕ ದಾಳಿಯ ಮಾದರಿಯಲ್ಲಿ ಈ ದಾಳಿ ನಡೆದಿದೆ.


ಇದರಿಂದ ಬೆದರಿದ ರಷ್ಯಾ ಕೂಡಲೇ ಕಜಾನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಗಿತ ಮಾಡಿತ್ತು. ಸದ್ಯ ವಿಮಾನ ನಿಲ್ದಾಣವನ್ನು ಪುನಃ ತೆರೆಯಲಾಗಿದೆ ಎಂದು ವರದಿಗಳು ಹೇಳಿವೆ.



8 ವಿಮಾನ ಮಾದರಿಯ ಡೋಣ್‌ಗಳನ್ನು ಕಜಾನ್‌ ನಾಲ್ಕು ವಾಣಿಜ್ಯ, ವಸತಿ ಕಟ್ಟಡಗಳಿಗೆ ಡಿಕ್ಕಿ ಹೊಡೆಸಲಾಗಿದೆ. ಸಾವು- ನೋವಿನ ವರದಿಯಾಗಿಲ್ಲ. ಆದರೆ ಕಟ್ಟಡಗಳಿಗೆ ಅಪಾರ ಹಾನಿಯಾಗಿದೆ ಎಂದು ಹೇಳಿವೆ. ಸ್ಥಳದಿಂದ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.


ಕಝಾನ್‌ನಲ್ಲಿ ಇತ್ತೀಚೆಗೆ ಬ್ರಿಕ್ಸ್ ಶೃಂಗಸಭೆ ನಡೆದಿತ್ತು. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget