ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ವ್ಯವಸ್ಥಾಪನ ಸಮಿತಿಯು ರಚಿಸಿದೆ.ಧಾರ್ಮಿಕ ದತ್ತಿ ಇಲಾಖೆಯ ಪ್ರವರ್ಗ 'ಎ' ದೇವಸ್ಥಾನವಾದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 39 ಅರ್ಜಿಗಳು ಸ್ವೀಕೃತವಾಗಿದ್ದವು.
ವ್ಯವಸ್ಥಾಪನ ಸಮಿತಿಗೆ ಸದಸ್ಯತ್ವವನ್ನು ಕೋರಿ ಸ್ವೀಕೃತವಾಗಿರುವ 39 ಅರ್ಜಿಗಳ ಬಗ್ಗೆ, ಸತ್ಯಾಪನೆ ಮಾಡಿ ದ.ಕ ಪೋಲೀಸ್ ಅಧೀಕ್ಷಕರು ವರದಿಗಳನ್ನು ಸಲ್ಲಿಸಿದ್ದರು.
ವ್ಯವಸ್ಥಾಪನಾ ಸಮಿತಿಗೆ 9 ಸದಸ್ಯರ ಆಯ್ಕೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರಧಾನ ಅರ್ಚಕರು, ಶಾಸಕ ಅಶೋಕ್ ರೈ ಸಹೋದರಿ ನಳಿನಿ ಪಿ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ದಿನೇಶ್ ಕುಲಾಲ್, ಈಶ್ವರ ನಾಯ್ಕ ಸಾಮೇತ್ತಡ್ಕ, ಕೃಷ್ಣವೇಣಿ ವಿಶ್ವನಾಥ ನಾಯ್ಕ, ಮಹಾಬಲ ರೈ ಒಳತ್ತಡ್ಕ, ಸುಭಾಷ್ ರೈ ಕಲಿಮಾರು, ವಿನಯ ಕುಮಾರ್ ನರಿಮೊಗರು ರವರನ್ನು ಆಯ್ಕೆ ಮಾಡಲಾಗಿದೆ.
Post a Comment