ಕಳೆದ ವರುಷ ಫೆಬ್ರವರಿ 27 ರಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದೀಯವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದು, ಅಂದಿನಿಂದ ಇಂದಿನವರೆಗೆ ಇಂಡಿಗೋ ಏರ್ ಲೈನ್ಸ್, ಸ್ಪೇಸ್ ಜೆಟ್ ಏರ್ ಲೈನ್ಸ್ ಮತ್ತು ಸ್ಟಾರ್ ಏರ್ ಲೈನ್ಸ್ ಸಂಸ್ಥೆಗಳು ಶಿವಮೊಗ್ಗದಿಂದ ಚೆನ್ನೈ, ಹೈದ್ರಾಬಾದ್, ಬೆಂಗಳೂರು, ತಿರುಪತಿ, ಗೋವಾ, ನಗರಗಳಿಗೆ ಪ್ರತಿನಿತ್ಯ ವಿಮಾನಯಾನ ಸೇವೆಯನ್ನು ನೀಡುವ ಮೂಲಕ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಉಳಿತಾಯ ಮಾಡುವುದರ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಅತಿಥ್ಯ ಮತ್ತು ಸೇವೆಯನ್ನು ಒದಗಿಸುವುದರ ಮೂಲಕ ಜನಮೆಚ್ಚುಗೆ ಗಳಿಸಿದೆ.
ಇನ್ನೂ ಹಲವು ಪ್ರದೇಶಗಳಿಗೆ ವಿಮಾನಯಾನ ಸೌಕರ್ಯ ಕಲ್ಪಿಸುವಂತೆ ಜನರಿಂದ ಬೇಡಿಕೆ ಬರುತ್ತಿದ್ದು, ಮುಂಬೈ ಮತ್ತು ಶಿರಡಿ ಸ್ಥಳಗಳಿಗೆ ಅತ್ಯಂತ ಬೇಗನೆ ವಿಮಾನಯಾನ ಸೇವೆಯನ್ನು ಒದಗಿಸುವಂತೆ ಅಂತರಿಕ ಸಮೀಕ್ಷೆ ಮೂಲಕ ತಿಳಿದು ಬಂದಿದ್ದು, ಈ ಹಿನ್ನಲೆಯಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಮುಖ್ಯಸ್ಥರಿಗೆ ಆದಷ್ಟು ಬೇಗನೆ ಶಿವಮೊಗ್ಗದಿಂದ ಮುಂಬೈ ಮತ್ತು ಶಿರಡಿಗೆ ವಿಮಾನಯಾನ ಸೌಕರ್ಯವನ್ನು ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲಾಗಿದ್ದು, ಅದಕ್ಕೆ ಸಂಸ್ಥೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
Post a Comment