ಹೊಸಪೇಟೆ(ವಿಜಯನಗರ): ‘ನಮ್ಮದು ಯತ್ನಾಳ ಬಣವಲ್ಲ. ನಾವೆಲ್ಲರೂ ಬಿಜೆಪಿ ಬಣ. ಆದರೆ, ಕೆಲ ಮಾಧ್ಯಮಗಳು ಅಂಥದ್ದು ಸೃಷ್ಟಿಸುತ್ತಿವೆ' ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
'ವಕ್ಸ್ ಕಾಯ್ದೆ ಸಂಪೂರ್ಣ ರದ್ದಾಗಬೇಕು ಎಂಬ ಬೇಡಿಕೆಯೊಂದಿಗೆ ليه ಪಕ್ಷಾತೀತ ಮತ್ತು ಜಾತ್ಯತೀತ ಹೋರಾಟದ ಭಾಗವಾಗಿ, ಜನವರಿ 4ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಆನಂದ ಸಿಂಗ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರೂ ಬರಲಿ. ಕಾಂಗ್ರೆಸ್‌ನವರೂ ಬರಲಿ' ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
'ವಕ್ಸ್ ಕರಾಳ ಕಾನೂನಾಗಿದ್ದು, ಸಂಪೂರ್ಣ ರದ್ದಾಗಬೇಕು. ಇದಕ್ಕಾಗಿ ಜನವರಿ 6ರಂದು ಸಹ ಹೋರಾಟ ಮುಂದುವರಿಯಲಿದೆ. ಸದ್ಯಕ್ಕೆ ವಿಜಯೇಂದ್ರ ಅವರ ವಿಚಾರ ಪ್ರಸ್ತಾಪ ಮಾಡಬೇಡಿ' ಎಂದರು.
'ಸಿ.ಟಿ.ರವಿ ಹಾಗೂ ಮುನಿರತ್ನ ಪ್ರಕರಣಗಳ ವಿಚಾರವಾಗಿ ರಾಜಕಾರಣದಲ್ಲಿ ಎಲ್ಲವೂ ಎದುರಿಸಬೇಕಿದೆ. ತನಿಖೆ ನಡೆದಿದೆ. ಈ ವಿಷಯದಲ್ಲಿ ಪಕ್ಷದ ವರಿಷ್ಠರು ಮಾತನಾಡಿದ್ದಾರೆ. ಅವರೊಂದು ನಾವೊಂದು ಮಾತನಾಡೋದು ಸರಿಯಲ್ಲ' ಎಂದರು.
Post a Comment