81 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗಿದೆ ಎಂದು ಸರಕಾರ ಮಾಹಿತಿ
ಹೊಸದಿಲ್ಲಿ: ''ಜನರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಲು ಉದ್ಯೋಗ ಸೃಷ್ಟಿಸುವ ಬದಲು ಎಷ್ಟು ದಿನಗಳವರೆಗೆ ನಿಮ್ಮ ಉಚಿತ ಯೋಜನೆಗಳ ವ್ಯವಸ್ಥೆಯನ್ನು ಮುಂದುವರಿಸಿ ಕೊಂಡು ಹೋಗುತ್ತೀರಿ,'' ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ನೀಡುತ್ತಿರುವ ಉಚಿತ ಪಡಿತರ ವ್ಯವಸ್ಥೆಯಿಂದ ವಲಸಿಗ ಕಾರ್ಮಿಕರನ್ನು ಕೈಬಿಟ್ಟ ಕ್ರಮ ಪ್ರಶ್ನಿಸಿ ಎನ್‌ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆ - ನಡೆಸಿದ ಸುಪ್ರೀಂ ಕೋರ್ಟ್ ನ್ಯಾ, ಸೂರ್ಯಕಾಂತ್ ಹಾಗೂ ನ್ಯಾ. ಮನಮೋಹನ್ ಅವರಿದ್ದ ನ್ಯಾಯಪೀಠ, "ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಯೋಜನೆ ಯಿಂದ ವಲಸಿಗ ಕಾರ್ಮಿಕರಿಗೆ ಪಡಿತರ ವಿತರಣೆ ಮಾಡ ಬೇಕು. ಆದರೆ, ರಾಜ್ಯ ಸರಕಾರಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ವಲಸಿಗರ ತುಷ್ಟಿಕರಣಕ್ಕೆ ಪಡಿತರ ಚೀಟಿ ನೀಡುತ್ತಿರುವ ರಾಜ್ಯಗಳು ಕೈ ತೊಳೆದುಕೊಳ್ಳುತ್ತಿವೆ. ಇದರಿಂದ ಕೇಂದ್ರ ಸರಕಾರ ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ,'' ಎಂದು ಅಭಿಪ್ರಾಯಪಟ್ಟಿದೆ.
ಭೂಷಣ್-ಮೆಹ್ರಾ ವಾಗ್ವಾದ
"ಕೋವಿಡ್ ಕಾಲದಲ್ಲಿ ಕೆಲಸ ಮಾಡದ ಕೆಲವೊಂದು ಎನ್‌ಜಿಒಗಳು ಸರಕಾರಕ್ಕೆ ಕೆಟ್ಟ ಹೆಸರು ತರಲು ಕೋರ್ಟ್‌ನಲ್ಲಿ ದಾವೆ ಹೂಡುವುದನ್ನೇ ಕಾಯಕ ಮಾಡಿಕೊಂಡಿದ್ದವು,'' ಎಂದು ಮಹಾ ವಾದಿಸಿದರು. ಈ ವೇಳೆ ಮೆತ್ತಾ ಹಾಗೂ ಭೂಷಣ್ ನಡುವೆ ವಾಗ್ವಾದ ನಡೆಯಿತು. ಇಬ್ಬರನ್ನು ಸಮಾಧಾನಪಡಿಸಿದ ನ್ಯಾ ಸೂರ್ಯಕಾಂತ್, "ವಲಸೆ ಕಾರ್ಮಿಕರ ಬಗ್ಗೆ ಪೂರ್ಣ ಮಾಹಿತಿ ಬೇಕಿದೆ. 2025ರ ಜನವರಿ 8ಕ್ಕೆ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸೋಣ'' ಎಂದು ಹೇಳಿ ವಾಗ್ಯುದ್ದಕ್ಕೆ ತೆರೆ ಎಳೆದರು.
ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, '2013ರ ಆಹಾರ ಭದ್ರತಾ ಕಾಯಿದೆಯಡಿ ಕೇಂದ್ರ ಸರಕಾರ ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿದೆ. ಕೋವಿಡ್. ಸಾಂಕ್ರಾಮಿಕ ರೋಗ ಆರಂಭವಾದ 2020ರಿಂದ ಇಲ್ಲಿಯ ವರೆಗೂ ಉಚಿತವಾಗಿ ಪಡಿತರ ನೀಡಲಾಗುತ್ತಿದೆ,'' ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಸರಕಾರದ ಮಾಹಿತಿಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, "ಇಷ್ಟೊಂದು ಜನರಿಗೆ ಉಚಿತ ನೀಡುತ್ತಿರುವಾಗ ತೆರಿಗೆ ಪಾವತಿದಾರರು ಮಾತ್ರ ಹೊರಗುಳಿದಿದ್ದಾರೆ ಎಂದರ್ಥವೇ,'' ಎಂದು ಪ್ರಶ್ನಿಸಿತು.
ಎನ್‌ಜಿಒ ಪರ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, "ಕೋವಿಡ್ ಕಾಲದಲ್ಲಿ ವಲಸಿಗರಿಗೆ ಉಚಿತ ಪಡಿತರ ನೀಡಲು ಕೋರ್ಟ್ ನಿರ್ದೇಶನ ನೀಡಿತ್ತು. ಇ-ಶ್ರಮ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಪಡಿತರ ನೀಡಲು ಕಾಲಕಾಲಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಬದಲಾದ ನಿಯಮಗಳಿಂದ ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾಗಿದೆ. 2011ರ ಜನಗಣತಿ ಆಧರಿಸಿ ವಲಸಿಗ ಕಾರ್ಮಿಕರ ಸಂಖ್ಯೆ ಬಗ್ಗೆ ಕೇಂದ್ರ ಸುಳ್ಳು ಮಾಹಿತಿ ನೀಡಿದೆ. ಇದರಿಂದ 3 ಕೋಟಿ ವಲಸೆ ಕಾರ್ಮಿ ಕರು ಪಡಿತರ ವಿತರಣೆಯಿಂದ ವಂಚಿತರಾಗಿದ್ದಾರೆ,'' ಎಂದು ಆಪಾದಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, "ಕೇಂದ್ರ - ರಾಜ್ಯಗಳ ನಡುವೆ ಒಡಕು ಮೂಡಿಸಬೇಡಿ. ಇದರಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ತಲೆದೋರಬಹುದು,'' ಎಂದು ಎಚ್ಚರಿಸಿತು.
Post a Comment