ನಗರ ಸಭೆ ಅಧ್ಯಕ್ಷರನ್ನು ನಿಂದಿಸಿದ ಪ್ರಕರಣ : ಅದ್ದು ಪಡೀಲ್ ವಿರುದ್ಧ ಅಟ್ರಾಸಿಟಿ ಕೇಸ್ – ಪೊಲೀಸ್ ವಶಕ್ಕೆ

 


ಪುತ್ತೂರು ನಗರ ಸಭೆ ಅಧ್ಯಕ್ಷರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಪ್ರಕರಣದ ಆರೋಪದಡಿ ಅದ್ದು ಪಡೀಲು ಎಂಬಾತನನ್ನು ಡಿ | ರಂದು ಸಂಜೆ ವಶಕ್ಕೆ ಪಡೆದಿರುವ ಪುತ್ತೂರು ನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.



ಆರೋಪಿ ಅದ್ದು ಪಡೀಲ್ ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ನಗರ ಸಭೆ ಅಧ್ಯಕ್ಷರಾದ ಲೀಲಾವತಿ ಅಣ್ಣು ನಾಯ್ಕರನ್ನು ತೇಜೋವಧೆ ಮಾಡಿದ್ದು, ಅವರನ್ನು ತಕ್ಷಣ ಬಂಧಿಸಬೇಕು ಎಂದು ಇಂದು ಮಧ್ಯಾಹ್ನ ಪುತ್ತೂರು ಬಿಜೆಪಿ ಮುಖಂಡರು ಮಾಜಿ ಶಾಸಕ ಸಂಜೀವ ಮಠಂದೂರು ಸಾರಥ್ಯದಲ್ಲಿ ಠಾಣೆಯ ಜಗಲಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪೊಲೀಸ್ ಅಧಿಕಾರಿಗಳ ವಿರುದ್ದ ಮಠಂದೂರು ಹರಿಹಾಯ್ದರೇ, ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಸೈಗಳಾದ ಅಂಜನೇಯ ರೆಡ್ಡಿ ಹಾಗೂ ಸೇಸಮ್ಮನವರು ಬಿಜೆಪಿ ಮುಖಂಡರ ಮನವೊಲಿಸಿದು, ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅದರಂತೆ ಸಂಜೆ ಅದ್ದು ಪಡೀಲ್ ನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget