ವಾಟ್ಸಾಪ್ ಹೇಗೆ ಹ್ಯಾಕ್ ಆಗುತ್ತದೆ
ಭಾರತದಲ್ಲಿ 596 ಮಿಲಿಯನ್ ನಷ್ಟು ವಾಟ್ಸಾಪ್ ಬಳಕೆದಾರರಿದ್ದಾರೆ. ದೇಶದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಇದನ್ನು ಬಳಸುತ್ತಿದ್ದಾರೆ. ಈ ಅಂಕಿ-ಅಂಶ ದೇಶದಲ್ಲಿ ಫೇಸ್‌ಬುಕ್ ಮೇಸೆಂಜಿಂಗ್ ಆ್ಯಪ್ ನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಹುತೇಕ ಭಾರತೀಯರಿಗೆ WhatsApp ಮೆಸೇಜಿಂಗ್ ಆ್ಯಪ್ ಗಿಂತ ಹೆಚ್ಚಾಗಿದೆ. ಜೀವನದ ಒಂದು ಭಾಗವಾಗಿದೆ. ಇದು ಇಲ್ಲದೆ ಬದುಕುವ ಕನಸೇ ಕಾಣದಂತಾಗಿದೆ. ಜೀವನದ ಗಂಭೀರ ಬಿಕ್ಕಟ್ಟು ಚರ್ಚಿಸುವುದರಿಂದ ಹಿಡಿದು, ಜೋಕ್ ಹೊಡೆಯುವುದು, ಮೇಮ್‌ಗಳ ಹಂಚಿಕೆ, ಕುಟುಂಬ, ಸ್ನೇಹಿತರೊಂದಿಗೆ ಮಾತುಕತೆ, ನೆನಪುಗಳನ್ನು ಹಂಚಿಕೊಳ್ಳುವುದರೊಂದಿಗೆ ಸಂಪರ್ಕತೆ ಹೆಚ್ಚಿಸುತ್ತದೆ.
ಆದರೆ ಇದನ್ನೂ ಊಹಿಸಿಕೊಳ್ಳಿ; ಒಂದೊಮ್ಮೆ ಯಾರೋ ಒಬ್ಬರಿಗೆ ನಿಮ್ಮ ವಾಟ್ಸಾಪ್ ವೈಯಕ್ತಿಕ ಸಂದೇಶಗಳು, ಹಂಚಿಕೊಂಡ ನೆನಪುಗಳು ಸಿಕ್ಕಿದರೆ ಹೇಗಾಗಬೇಡ. ನಿಜಕ್ಕೂ ಭಯವಾಗುತ್ತದೆ? ಇದು ಕೇವಲ ಕಾಲ್ಪನಿಕ ಕಥೆ ಅಥವಾ ದುಃಸ್ವಪ್ನವಲ್ಲ - WhatsApp ಹ್ಯಾಕಿಂಗ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಇದು ವಾಸ್ತವವಾಗಿದೆ. ನೀವು ನಿಮ್ಮ ಮೊಬೈಲ್ ಫೋನ್ ನೋಡುತ್ತಾ WhatsApp ಸಂದೇಶಗಳನ್ನು ವೀಕ್ಷಿಸುತ್ತಿದ್ದಂತೆಯೇ ಹ್ಯಾಕಿಂಗ್ ಬಲೆಗೆ ಬೀಳಬಹುದು. ಇದ್ದಕ್ಕಿದ್ದಂತೆ ಬಹುಕಾಲದ ಸ್ನೇಹಿತ, ಅನೇಕ ವರ್ಷಗಳಿಂದ ಗೊತ್ತಿರುವ ಗೆಳೆಯ ಎಂಬಂತಹ ನೋಟಿಫಿಕೇಷನ್ ಬರುತ್ತದೆ. ನೀವು ಅಲ್ಲಿ ಚಾಟ್ ಮಾಡಲು ಶುರು ಮಾಡುತ್ತಿದ್ದಂತೆಯೇ ಶುಭಾಶಯ ಹೇಳುವುದರೊಂದಿಗೆ ನಿಧಾನವಾಗಿ ಬಲೆಗೆ ಬೀಳಿಸುವ ಪ್ರಯತ್ನ ನಡೆಯುತ್ತದೆ. ಹೇ, ನಾನು ಹೊಸ ಫೋನ್ ಪಡೆದುಕೊಂಡಿದ್ದೇನೆ. ಅಚಾನಕ್ಕಾಗಿ ಕೋಡ್ ವೊಂದನ್ನು ನಿಮ್ಮ ನಂಬರ್ ಗೆ ಕಳುಹಿಸಿದ್ದೇನೆ. ಅದನ್ನು ನನಗೆ ವಾಪಸ್ ಕಳುಹಿಸಬಹುದೇ? ಎಂದು ಕೇಳಲಾಗುತ್ತದೆ. ಯಾವುದೇ ಎಚ್ಚರಿಕೆ ಸಂದೇಶ ಬರಲ್ಲ. ನೀವು ಎಲ್ಲಾ ವಿಷಯಗಳನ್ನು ಹೇಳಿಕೊಂಡ ನಂತರ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಿದರೆ ಹ್ಯಾಕಿಂಗ್ ಬಲೆಗೆ ಬಿದ್ದೀರಿ ಎಂಬುದು ಸ್ಪಷ್ಟ.
ಆ ನಯವಾದ ಸಂದೇಶ, ವಿಶ್ವಾಸದ ಕ್ಷಣ, ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಕ್ಕೆ ಎಡೆ ಮಾಡಿಕೊಡುತ್ತದೆ. ತಣ್ಣನೆಯ ಸತ್ಯ ಮುಳುಗುತ್ತದೆ. ಅಗತ್ಯವಿರುವ ಸ್ನೇಹಿತ.. ನಿಜವಾಗಿಯೂ ಸ್ನೇಹಿತನಲ್ಲ!
Post a Comment