ಸಿಟಿ ರವಿ ಕೇಸ್​ ಬೆಳೆಸುವುದು ಬೇಡವೆಂದು ಸಿಎಂ, ಗೃಹ ಸಚಿವರು ಹೇಳಿಲ್ವಾ? ವಿ ಸೋಮಣ್ಣ ಹೊಸ ಬಾಂಬ್



ಮೈಸೂರು: ಸಿಟಿ ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣ ನಾನಾ ಸ್ವರೂಪ ಮತ್ತು ಪೊಲಿಟಿಕಲ್ ಟರ್ನ್​ ಪಡೆದುಕೊಳ್ಳುತ್ತಿರುವ ಮಧ್ಯೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್​ ಅವರಿಗೆ ಪ್ರಕರಣ ಬೆಳಸಬಾರದು ಎಂಬ ನಿಲ್ಲುವಿತ್ತು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಪ್ರಕರಣ ವಿಚಾರವಾಗಿ ಅವರ ನಿಲ್ಲುವು ಏನಿತ್ತು ಎಂಬುದನ್ನು ತಮ್ಮ ಆತ್ಮಸಾಕ್ಷಿಯಾಗಿ ಹೇಳಿ ಎಂದು ಸವಾಲು ಹಾಕಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಶುರು ಮಾಡಿದೆ. ಸ್ಪೀಕರ್​​​ ತನಿಖೆ ಮಾಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿ ನಮ್ಮದೇನು ಅಭ್ಯಂತರ ಇಲ್ಲ. ನಮ್ಮದೇ ತಪ್ಪಾಗಿದ್ದರು ನಾವು ಅದನ್ನು ಸ್ವೀಕರಿಸುತ್ತೇವೆ‌. ಅದು ಬಿಟ್ಟು ಸಿ.ಟಿ.ರವಿಗೆ ಟಾರ್ಚರ್​ ಕೊಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ರಾಜ್ಯ ಸರ್ಕಾರದಲ್ಲಿ ಬಹಳಷ್ಟು ಹುಳುಕು ಶುರುವಾಗಿವೆ. ಹುಳುಕು ಮುಚ್ಚಿಕೊಳ್ಳಲು ಈ ವಿಚಾರ ದೊಡ್ಡದು ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್​ ಕೇಂದ್ರದಲ್ಲಿ ಯಾರಿಗಾದರೂ ದೂರು ಕೊಡಲಿ ತೊಂದ್ರೆ ಇಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ರೀತಿಯ ರಾಜಕಾರಣ ಶುರುವಾಗಿರುವುದು ನನಗೆ ಬೇಸರ ಮೂಡಿಸುತ್ತಿದೆ. ಸದನದ ವಿಚಾರ ಸ್ಪೀಕರ್ ತೀರ್ಮಾನವೇ ಅಂತಿಮ. ಪ್ರಕರಣದಲ್ಲಿ ಯಾರದು ತಪ್ಪಿದೆ ಎಂಬುದನ್ನ ಸ್ಪೀಕರ್ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಲಿ. ಇದು ಸದನದ ವಿಚಾರ ಅದನ್ನು ಎಲ್ಲಿ, ಹೇಗೆ ಮಾತನಾಡಬೇಕು ಎಂಬುದಕ್ಕೆ ಕಾನೂನು ಇದೆ. ಅದರ ವ್ಯಾಪ್ತಿಯಲ್ಲಿ ಎಲ್ಲರೂ ಇರಬೇಕು ಎಂದಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಅಮಿತ್​ ಶಾ ಹೇಳಿಕೆ ತಿರುಚಿ ಕಾಂಗ್ರೆಸ್​ ಹೋರಾಟ ಮಾಡುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ಬಗ್ಗೆ ಅವರಿಗೆ ಏನು ವಿಚಾರ ಇಲ್ಲ. ಬಿಜೆಪಿ ವಿರುದ್ಧ ಜನರನ್ನ ಎತ್ತಿಕಟ್ಟಲು ಈ‌ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget