ಸುಳ್ಯಕ್ಕೆ ಪುರಪ್ರವೇಶ ಮಾಡಿದ ಶ್ರೀ ಚೆನ್ನಕೇಶವ ದೇವರ ನೂತನ ಬ್ರಹ್ಮರಥ



ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ‌. ಚಿದಾನಂದ ಮತ್ತು ಮನೆಯವರಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವರಿಗೆ ಸಮರ್ಪಣೆ ಮಾಡಲಿರುವ ನೂತನ ಬ್ರಹ್ಮರಥವು ಉಡುಪಿಯ ಕೋಟೇಶ್ವರದಿಂದ ಹೊರಟು ಸುಳ್ಯ ಕ್ಕೆ ಪುರಪ್ರವೇಶ ಮಾಡಿದೆ.



ಕನಕಮಜಲಿನ ಶ್ರೀ ಆತ್ಮಾರಾಮ ದೇವರಿಗೆ ವಿಶೇಷ ಮಹಾ ಮಂಗಳಾರತಿ ನೆರವೇರಿಸಿ, ನೂತನ ಬ್ರಹ್ಮರಥಕ್ಕೆ ಆರತಿ ಬೆಳಗುವ ಮೂಲಕ ಬ್ರಹ್ಮರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ನಂತರ ಜಾಲ್ಸೂರು,ಪೈಚಾರು



ಮೂಲಕ ಸುಳ್ಯ ತಾಲೂಕಿಗೆ ಬ್ರಹ್ಮರಥ ಆಗಮಿಸುವ ಹಿನ್ನೆಲೆಯಲ್ಲಿ ಸುಳ್ಯದಿಂದ ಹಲವಾರು ಮಂದಿ ಭಕ್ತಾದಿಗಳು ಆಗಮಿಸಿ, ಸ್ವಾಗತ ಕೋರಿದರು.

ನೂತನ ಬ್ರಹ್ಮರಥಕ್ಕೆ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಭಕ್ತಾದಿಗಳು ಸೇರಿ ಬ್ರಹ್ಮರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.



 ಬ್ರಹ್ಮರಥ ಸುಳ್ಯ ಕ್ಕೆ ಪುರಪ್ರವೇಶ ಮಾಡುವ ಕಾರಣ ಸುಳ್ಯ ನಗರ ಕೇಸರಿ ಬಂಟಿಂಗ್ಸ್ ಹಾಗೂ ಭಗವಾದ್ವಜದ ಮೂಲಕ ಸಿಂಗರಿಸಲಾಗಿತ್ತು.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget