ಬಡವರ ಬಾದಾಮಿ ಎಂದು ಕರೆಯುವ ಶೇಂಗಾ (Peanuts) ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಪ್ರೋಟೀನ್, ಕ್ಯಾಲಿಯಂ, ಫೈಬರ್, ವಿಟಮಿನ್ ಎ, ವಿಟಮಿ ಬಿ1, ಬಿ3, ಮೆಗ್ನೇಸಿಯಂ, ಪೊಟ್ಯಾಸಿಯಂ, ಮತ್ತು ಆರೋಗ್ಯಕ ಕೊಬ್ಬುಗಳಿಂದ ಸಮೃದ್ಧವಾಗಿದೆ.
ಶೇಂಗಾ ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು (Polyunsaturated and monounsaturated fats) ಸಮೃದ್ಧವಾಗಿದೆ. ಇವು ಹೃದಯಕ್ಕೆ ಆರೋಗ್ಯಕರ ಕೊಬ್ಬುಗಳಾಗಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ (Lower bad cholesterol levels), ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶೇಂಗಾ ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಈ ಶೇಂಗಾವನ್ನು ನೇರವಾಗಿ ಸೇವಿಸುವುದಕ್ಕಿಂತ ನೆನಸಿಟ್ಟು ತಿನ್ನುವುದರಿಂದ ಇನ್ನು ಹೆಚ್ಚು ಆರೋಗ್ಯ ಪ್ರಯೋಜನಗಳು ಪಡೆಯಬಹುದಾಗಿದೆ.
ಹಾಗಾದರೆ ಶೇಂಗಾವನ್ನು ನೆನಸಿಟ್ಟು (soaking peanuts) ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.? ಅಂತ ತಿಳಿಯೋಣ.
* ಶೇಂಗಾದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಕಾರಿಯಾಗಿವೆ.
* ಪ್ರತಿದಿನ ಬೆಳಿಗ್ಗೆ ನೆನೆಸಿದ ಶೇಂಗಾ ತಿನ್ನುವುದರಿಂದ ರಕ್ತ ಪರಿಚಲನೆ (blood circulation) ಸುಧಾರಿಸುವುದು.
* ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆಯಾಗುವುದು
* ಹಲವಾರು ರೋಗಗಳು ಮತ್ತು ಸೋಂಕುಗಳನ್ನು ನಿಯಂತ್ರಿಸಬಹುದಾಗಿದೆ (Diseases and infections can be controlled).
* ಶೇಂಗಾದಲ್ಲಿ ದೃಷ್ಟಿ ಸುಧಾರಣೆಗೆ (Vision improvement) ಸಹಾಯ ಮಾಡುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ಗಳಿವೆ.
* ಶೇಂಗಾ ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವೆಂದು ಹೇಳಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
* ನೆನಸಿದ ಶೇಂಗಾ ತಿನ್ನುವುದರಿಂದ ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸಬಹುದು.
* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೂಳೆಗಳು ಬಲವಾಗುತ್ತವೆ. ಅಲ್ಲದೇ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
Post a Comment