ಪಿಎಂ ಸೂರ್ಯ ಘರ್- ಮುಫ್ತ್ ಬಿಜಿಲಿ ಯೋಜನೆಯ, "ಸೋಲರ್ ಕಾರ್ಯಗಾರ"ವು ಜ. 2 ರಂದು ಬೆಳಗ್ಗೆ 11.30ಕ್ಕೆ ಕಾವೂರಿನ ಸಹಕಾರಿ ಸೌದಾ ಸೊಸೈಟಿ ಹಾಲ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಭಾರತ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ವಿತರಣಾ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರಿನ 'INERGEIA Solar Pvt. Ltd. ತಿಳಿಸಿದೆ.
Post a Comment