ಸುಳ್ಯ: ಸುಳ್ಯ ತಾಲೂಕಿನಲ್ಲಿ ಸಹಕಾರ ಸಂಘಗಳ ಚುನಾವಣೆ ರಂಗೇರಿದೆ ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಹಕಾರ ಕ್ಷೇತ್ರದಲ್ಲಿ ಹೊಸ ಮುಖ,ವಿವಿಧ ಪರಿಣಿತರಿಗೆ ಅವಕಾಶ ನೀಡಿದ್ದು ಆರಂತೋಡು ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಯಲ್ಲಿ ಜನಸ್ನೇಹಿ ಯುವ ವೈದ್ಯ ಡಾ. ಲಕ್ಷ್ಮೀ ಶ ಕಲ್ಲುಮುಟ್ಲು ಹಾಗೂ ಎಂ.ಟೆಕ್ ಶಿಕ್ಷಣ ಪಡೆದಿರುವ ಶಿವಾನಂದ ಕುಕ್ಕುಂಬಳ ಅವರನ್ನು ಕಣಕ್ಕಿಳಿಸಿದೆ.ಹಾಗೆ ಕನಕಮಜಲು -ಜಾಲ್ಸೂರು ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಪರಿಶಿಷ್ಟ ಮೀಸಲಾತಿ ಕ್ಷೇತ್ರದಿಂದ M.A ಅರ್ಥಶಾಸ್ತ್ರ ಮತ್ತು ಮಾಸ್ಟರ್ ಆಫ್ ಕಾಮರ್ಸ್ ಸ್ನಾತಕೋತ್ತರ ಪದವಿ ಪಡೆದಿರುವ ಉಪನ್ಯಾಸಕ ರಾಗಿ ಅನುಭವಿರುವ ನಿರಂಜನ್ ಬೋಳುಬೈಲು ರನ್ನು ಕಣಕ್ಕೆ ಇಳಿಸಿದೆ.ಐವರ್ನಾಡು ಕೃಷಿ ಪತ್ತಿನ ಚುನಾವಣೆಗೆ ಬಿಜೆಪಿ ಬೆಂಬಲಿತ ಬಹುಪಾಲು ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದು,ಉಪನ್ಯಾಸಕರು,ವಕೀಲರು, ಕೃಷಿ ಪರಿಣಿತರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ.
ಸುಳ್ಯದ ಹಲವಾರು ಕೃಷಿ ಪತ್ತಿನ ಸಹಕಾರಿ ರಂಗದಲ್ಲಿ ಅನೇಕ ವರ್ಷಗಳಿಂದ ಯುವಕರು ವಿಮುಖರಾಗಿದ್ದು ಈ ಬಾರಿ ಹೊಸ ಪ್ರತಿಭಾನ್ವಿತರನ್ನೂ ಗುರುತಿಸುವ ಕಾರ್ಯ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮಾಡಿದ್ದು "ಪರಸ್ಪರ ಸಹಕಾರ "; ಕೂಡಿ ಬಾಳುವ ಯೋಗ್ಯ ಚಿಂತನೆ
ತಾಲೂಕಿನಲ್ಲಿ ವೈದ್ಯರು, ಉಪನ್ಯಾಸಕರು, ಇಂಜಿನಿಯರಿಂಗ್, ವಕೀಲರಿಗೆ ಇತ್ಯಾದಿ ವೃತ್ತಿ ಕ್ಷೇತ್ರ ಪರಿಣತರಿಗೆ ಸ್ಪರ್ಧಿಸಲು ಸಹಕಾರ ಭಾರತಿ ಅವಕಾಶ ನೀಡಿದ್ದು ಸಹಕಾರ ಕ್ಷೇತ್ರದಲ್ಲಿ ಹೊಸ ಪರಿವರ್ತನೆಗೆ ದಾರಿಯಾಗಲಿದೆಯೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Post a Comment