‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯಿತು. ಆರಂಭದಲ್ಲಿ ಅವರ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅದು ಸುಳ್ಳು ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬಂದಿದ್ದೇ ಸಾಲಬಾಧೆ ವಿಚಾರ. ಅವರು ಸಾಲ ಮಾಡಿಕೊಂಡಿದ್ದಕ್ಕೆ ಹೊರ ಬಂದರು ಎಂದು ಹೇಳಲಾಯಿತು. ಈಗ ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ನಲ್ಲಿ ಲೈವ್ನಲ್ಲಿ ಬಂದ ಸುರೇಶ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ನಿಂದ ಆಫರ್ ಬಂದಾಗ ಶಾಕ್ ಹಾಗೂ ಖುಷಿ ಎರಡೂ ಆಯಿತು. ಅವರು ಯಾಕೆ ನನಗೆ ಆಫರ್ ಕೊಟ್ಟರು ಗೊತ್ತಿಲ್ಲ. ಆದರೆ, ಈ ಜರ್ನಿ ರೋಚಕ ಆಗಿತ್ತು. ಎಲ್ಲೋ ಇದ್ದವನನ್ನು ಗುರುತಿಸಿ, ಕರೆದಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗಿ ಸುಮಾರು ದಿನ ಆಡಿ ಬಂದಿದ್ದೇನೆ’ ಎಂದು ಖುಷಿ ಹೊರಹಾಕಿದರು ಗೋಲ್ಡ್ ಸುರೇಶ್. ಹೊರ ಬಂದ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ನಾನು ಹೊರಗೆ ಬಿಸ್ನೆಸ್ ಹ್ಯಾಂಡಲ್ ಮಾಡ್ತಾ ಇದ್ದೆ. ಅದನ್ನು ನಾನೇ ನೋಡಿಕೊಳ್ಳುತ್ತಾ ಇದ್ದೆ. ನಾನು ಬಿಗ್ ಬಾಸ್ಗೆ ಹೋಗುವಾಗ ಅದನ್ನು ಪತ್ನಿಗೆ ವಹಿಸಿ ಬಂದಿದ್ದೆ. ಆದರೆ, ಅದನ್ನು ಹ್ಯಾಂಡಲ್ ಮಾಡೋಕೆ ಅವರಿಗೆ ಆಗಿಲ್ಲ. ಒತ್ತಡ ಜಾಸ್ತಿ ಆಯ್ತು. ಎಲ್ಲಿ ನಿರ್ಧಾರ ತಗೊಳ್ಳುವಾಗ ಎಡವುತ್ತೇನೋ ಎನ್ನುವ ಭಯ ಇತ್ತು. ಹೀಗಾಗಿ ನಾನು ಹೊರ ಬಂದೆ. ನಾನು ಹೊರಗೆ ಪತ್ನಿಗೆ ಸಹಾಯ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಉದ್ಯಮವೂ ಸರಿಹಾದಿಗೆ ಬಂದಿದೆ’ ಎಂದಿದ್ದಾರೆ ಅವರು. ಬಿಗ್ ಬಾಸ್ ಮನೆ ಎಷ್ಟು ಮುಖ್ಯವೋ ಹೊರಗಿರುವ ಉದ್ಯಮ ಕೂಡ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ. ‘ನನಗೆ ಉದ್ಯಮ ಕೂಡ ಮುಖ್ಯ. ನನ್ನ ನಂಬಿರುವ ಸುಮಾರು ಕುಟುಂಬದವರಿಗೆ ನಾನು ಸಹಾಯ ಮಾಡಬೇಕಿತ್ತು’ ಎಂದಿದ್ದಾರೆ ಸುರೇಶ್.
Post a Comment