ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಪಟ್ಟಿ ಡಿ.17ರಂದು ರಾತ್ರಿ ಪ್ರಕಟಗೊಂಡಿದ್ದು, ನೂತನ ಸದಸ್ಯರು ಡಿ.18 ರಂದು ದೇವಳದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಪಟ್ಟಿ ಡಿ.17ರಂದು ರಾತ್ರಿ ಪ್ರಕಟಗೊಂಡಿದ್ದು, ನೂತನ ಸದಸ್ಯರು ಡಿ.18 ರಂದು ದೇವಳದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ನೂತನ ಸಮಿತಿ ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ್ ಭಟ್ ಅವರನ್ನು ನೇಮಕ ಮಾಡಲಾಯಿತು.
ನೂತನ ಸಮಿತಿ ಸದಸ್ಯರಾಗಿ ಸಾಮೆತ್ತಡ್ಕ ನಿವಾಸಿ ಈಶ್ವ’ರ್ ನಾಯ್ಕ, ಮಂಜಲಡ್ಡು ನಿವಾಸಿ ಕೃಷ್ಣವೇಣಿ, ಸಾಮೆತ್ತಡ್ಕ ನಿವಾಸಿ ನಳಿನಿ ಪಿ ಶೆಟ್ಟಿ, ಪಂಜಿಗುಡ್ಡೆ ನಿವಾಸಿ ಈಶ್ವ’ರ್ ಭಟ್, ಮುರ ದಿನೇಶ್ ಕುಲಾಲ್ ಪಿ ವಿ, ವಳತ್ತಡ್ಕ ನಿವಾಸಿ ಮಹಾಬಲ ರೈ, ಕಲಿಮಾರ್ ನಿವಾಸಿ ಸುಭಾಷ್ ರೈ, ನರಿಮೊಗರು ನಿವಾಸಿ ವಿನಯ್ ಕುಮಾರ್ ಬಿ. ಆಯ್ಕೆ ಮಾಡಲಾಗಿದೆ.
ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಎಂಬಿ ವಿಶ್ವನಾಥ ರೈ ಸಹಿತ ಹಲವು ಗಣ್ಯರು ನೂತನ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು
Post a Comment