ಈ ಬಾರಿ ಗರಿಷ್ಠ ಅಭ್ಯರ್ಥಿಗಳು, ಬಿಜೆಪಿ,ಮನ್ಮಥ ಬಳಗ,ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ
ಐವರ್ನಾಡು ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಗ್ರಾಮ ಸಮಿತಿಯ ನೇತೃತ್ವದ ತಂಡ ಮತ್ತು ಬಿಜೆಪಿ ನಾಯಕ ಎಸ್.ಎನ್.ಮನ್ಮಥರ ನೇತೃತ್ವದ ತಂಡ ಪರಸ್ಪರ ಎದುರಾಳಿಗಳಾಗಿ ಸೆಣಸಾಡಲು ನಿರ್ಧರಿಸಿರುವುದರಿಂದ ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಗ್ರಾಮದಲ್ಲಿ ಮತ್ತೊಮ್ಮೆ ಬಿ.ಜೆ.ಪಿ. ಇಬ್ಭಾಗಗೊಂಡಿದೆ.
ಸೊಸೈಟಿಯ ಹಾಲಿ ಅಧ್ಯಕ್ಷ ಎಸ್.ಎನ್.ಮನ್ಮಥರ ನೇತೃತ್ವದಲ್ಲಿ ಎಸ್.ಎನ್ .ಮನ್ಮಥ, ಸತೀಶ್ ಎಡಮಲೆ, ಮಹೇಶ್ ಜಬಳೆ, ಅನಂತಕುಮಾರ್ ಖಂಡಿಗೆಮೂಲೆ, ನಟರಾಜ ಸಿ ಕೂಪ್, ಮಧುಕರ ನಿಡುಬೆ, ರವಿನಾಥ ಮಡ್ತಿಲ, ಗೋಪಾಲಕೃಷ್ಣ ಚೆಮ್ನೂರು, ಚಂದ್ರಶೇಖರ, ಭವಾನಿ ಮಡ್ತಿಲ, ದಿವ್ಯಾ ರಮೇಶ್, ಪುರಂದರ ಕಣದಲ್ಲಿದ್ದಾರೆ.
ಬಿಜೆಪಿ ಗ್ರಾಮ ಸಮಿತಿ ಅಭ್ಯರ್ಥಿಗಳಾಗಿ ಶ್ರೀನಿವಾಸ ಮಡ್ತಿಲ, ಕಿಶನ್ ಜಬಳೆ, ಅಜಿತ್ ಐವರ್ನಾಡು, ದೇವದಾಸ್ ಕತ್ಲಡ್ಕ, ಗಣೇಶ್ ಕೊಚ್ಚಿ, ಅನಿಲ್ ದೇರಾಜೆ, ಪ್ರದೀಪ್ ಪಾಲೆಪ್ಪಾಡಿ, ನವೀನ್ ಸಾರಕರೆ, ಪ್ರವೀಣ್ ಕುಮಾರ್, ಮಾಯಿಲಪ್ಪ, ಲೀಲಾವತಿ ಸಿ.ಎಸ್, ರಾಜೀವಿ ಪರ್ಲಿಕಜೆ ಇವರು ಕಣದಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ರಾಜೇಶ್ ಎಂ.ಜಿ, ಸತೀಶ್ ಕತ್ಲಡ್ಕ, ಪ್ರಮೋದ್ ಆರಿಕಲ್ಲು, ಆಶಾ ಎಂ.ಎಸ್., ದೇವಿ ಕುಮಾರಿ, ಚಂದ್ರಕುಮಾರೇಶನ್,ಕೇಶವ ನಾಯ್ಕ ಉದ್ದಂಪಾಡಿ , ಮಂಜುನಾಥ ಮಡ್ತಿಲ, ಕಣ್ಣ ಪಾಟಾಳಿ, ಕರುಣಾಕರ ಮಡ್ತಿಲ ಮತ್ತು ಅಶ್ವಥ್ ಕುಮಾರ್ ಕಣದಲ್ಲಿದ್ದಾರೆ.
Post a Comment