ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕಮಲ್
11 ಬಿಜೆಪಿ, ಒಂದು ಸ್ಥಾನಕ್ಕೆ ತೃಪ್ತಿ ಪಟ್ಟ ಕಾಂಗ್ರೆಸ್
ಬೆಳ್ಳಾರೆ: ಬೆಳ್ಳಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 12 ಸ್ಥಾನಗಳ ಪೈಕಿ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಕ್ಕೇರಿದೆ. ಕಾಂಗ್ರೆಸ್ ಬೆಂಬಲಿತ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದು ಬಿಜೆಪಿಗೆ ಆಡಳಿತ ಬಿಟ್ಟುಕೊಟ್ಟಿದೆ
ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಪದ್ಮನಾಭ ಶೆಟ್ಟಿ ಪೆರುವಾಜೆ, ರಾಮಕೃಷ್ಣ ಭಟ್(ಆರ್.ಕೆ.ಭಟ್ ಕುರುಂಬಡೇಲು), ಜನಾರ್ಧನ ಗೌಡ, ಭಾಸ್ಕರ ಗೌಡ, ನಾರಾಯಣ ಕೊಂಡೆಪಾಡಿ, ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕರುಣಾಕರ ಆಳ್ವ ಗೆಲುವು ಸಾಧಿಸಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಾಸುದೇವ ನಾಯಕ್, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಬಿಜೆಪಿಯ ಐತ್ತಪ್ಪ ರೈ ಅಜ್ರಂಗಳ, ಮಹಿಳಾ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಭಾರತಿ ಕೊಚ್ಚಿ ಹಾಗೂ ವನಿತಾ ಸಾರಕೆರೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಬಿಯಾಳು, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸುಂದರ ನಾಯ್ಕ ನಾಗನಮಜಲು ಗೆಲುವು ಕಂಡಿದ್ದಾರೆ.
Post a Comment