ವಾಯುಭಾರ ಕುಸಿತ: ತಮಿಳುನಾಡಿನಲ್ಲಿ ಭಾರೀ ಮಳೆ; 22 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ



ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ 22 ಜಿಲ್ಲೆಗಳಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಒಂದರಿಂದ 5 ನೇ ತರಗತಿಗಳಿಗೆ ರಜೆ ಘೋಷಿಸಿದ್ದಾರೆ.

ಕಾಂಚೀಪುರಂ, ಪುದುಚೇರಿ, ರಾಮನಾಥಪುರಂ, ತಂಜಾವೂರು, ಪುದುಕೊಟ್ಟೆ ಮತ್ತು ಅರಿಯಲೂರ್ ಸೇರಿದಂತೆ ಎಲ್ಲೆಡೆ ಶಾಲೆಗಳನ್ನು ಮುಚ್ಚಲಾಗುತ್ತದೆ.


ವಾಯುಬಾರ ಕುಸಿತದ ಪರಿಣಾಮ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಕಾರೈಕಲ್‌ನಲ್ಲಿ 8 ಸೆ.ಮೀ, ಆದಿರಾಮಪಟ್ಟಣಂ, ನಾಗಪಟ್ಟಣಂ, ಕಡಲೂರು ಹಾಗೂ ಚೆನ್ನೈ ಭಾಗದಲ್ಲಿ 5-7 ಸೆಂ.ಮೀ ಮಳೆಯಾಗಿದೆ.

ಭಾರೀ ಮಳೆಯ ಪರಿಣಾಮ ಹಲವು ಭಾಗಗಳಲ್ಲಿ ಜನ ಜೀವನವನ್ನು ಅಸ್ತವ್ಯಸ್ತಗೊಂಡಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಮತ್ತು ಜನರಿಗೆ ಮನೆಯೊಳಗೆ ಇರುವಂತೆ ಸರ್ಕಾರದ ಅಧಿಕಾರಿಗಳು ಸೂಚಿಸಿದ್ದಾರೆ.


ಡಿ.13 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಾಗೂ ಕರ್ನಾಟಕ, ಕೇರಳ, ಪುದುಚೇರಿ, ಮತ್ತು ಆಂಧ್ರಪ್ರದೇಶಕ್ಕೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget