ಸುಳ್ಯ ಚೆನ್ನಕೇಶವ ದೇವರಿಗೆ ಬ್ರಹ್ಮ ರಥ ಸಮರ್ಪಣೆ

 ಅಚ್ಚುಕಟ್ಟಾದ ಮೆರವಣಿಗೆ,ರಸ್ತೆಯ ಇಕ್ಕೆಲಗಳಲ್ಲಿ ಬ್ರಹ್ಮ ರಥ ಕಣ್ಣುತುಂಬಿಕೊಂಡ ಭಕ್ತರು



ಸುಳ್ಯ: ಸುಳ್ಯದ ಚೆನ್ನಕೇಶವ ದೇವರಿಗೆ ಬ್ರಹ್ಮ ರಥ ಸಮರ್ಪಣೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಿತು. ಮದ್ಯಾಹ್ನ ಪುತ್ತೂರಿನಿಂದ ಹೊರಟ ಬ್ರಹ್ಮ ರಥಕ್ಕೆ ಕನಕಮಜಲು ಅತ್ಮರಾಮ ಭಜನಾ ಮಂದಿರ ದಲ್ಲಿ ಸ್ವಾಗತಿಸಲಾಯಿತು ಅಲ್ಲಿಂದ ವಾಹನ ಜಾಥಾ ಮೂಲಕ ಹೊರಟ ರಥಕ್ಕೆ ಜಾಲ್ಸುರು,ಅಡ್ಕಾರು ವಿನೋಭನಗರ ಬಳಿ ಭಕ್ತಾದಿಗಳು ಸ್ವಾಗತಿಸಿದರು. ಸುಳ್ಯದ ಓಡಾಬೈ ಯಿಂದ ಕಾಲ್ನಡಿಗೆ ಮೂಲಕ ಸಾವಿರಾರು ಭಕ್ತ ಸಮೂಹ ಹೆಜ್ಞೆ ಹಾಕಿದರು,ಚೆಂಡೆ,ವಾಲಗ, ಕುಣಿತ ಭಜನೆ,ಅನೇಕ ಕಲಾ ಪ್ರದರ್ಶನ ಮೂಲಕ ಅದ್ದೂರಿಯಾಗಿ ಸುಳ್ಯ ನಗರಕ್ಕೆ ಪ್ರವೇಶಿಸಿತು ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ಹಣತೆ ಹಚ್ಚಿ,ಪುಷ್ಪಾರ್ಚನೆ ಮಾಡಿ ಬ್ರಹ್ಮ ರಥದ ಪುಣ್ಯ ಕಾರ್ಯದಲ್ಲಿ ಭಾಗಿಯಾದರು. ಮೆರವಣಿಗೆ ಸಾಗವಾಗಿ ನೆರೆವೇರಿದ್ದು , ತುರ್ತು ಆಂಬುಲೆನ್ಸ್ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥಿತ ಸಂಚಾರಕ್ಕೆ ಸ್ವಯಂ ಸೇವಕರು ಅನುವು ಮಾಡಿಕೊಟ್ಟಿರುವುದು ಸಾರ್ವಜನಿಕರು ಪ್ರಶಂಸಿದ್ದಾರೆ. 



 ಮೆರವಣಿಗೆಯಲ್ಲಿ ಬ್ರಹ್ಮ ರಥ ಸೇವಾದರರಾದ ಡಾ. ಕೆವಿ ಚಿದಾನಂದ,ಶೋಭಾ ಚಿದಾನಂದ, ಡಾ.ಅಕ್ಷಯ್ ಕೆಸಿ ಮತ್ತು ಮನೆಯವರು,ಶಾಸಕಿ ಭಾಗೀರಥಿ ಮುರುಳ್ಯ, ಬ್ರಹ್ಮ ರಥ ಸಮಿತಿಯ ನಾರಾಯಣ ಕೇಕಡ್ಕ, ಡಾ. ಲೀಲಾಧಾರ ಡಿ.ವಿ, ಕೃಷ್ಣ ಕಾಮತ್, ಕೆ.ವಿ ಹೇಮನಾಥ್, ಸುಧಾಕರ ಕಾಮತ್,ಹರೀಶ್ ಕಂಜಿಪಿಲಿ, ಜಯಪ್ರಕಾಶ್ ರೈ,ಮತ್ತು ಬ್ರಹ್ಮ ರಥ ಮೆರವಣಿಗೆಯ ಸಂಚಾಲಕರಾದ ಅವಿನಾಶ್ ಡಿ.ಕೆ ನೇತೃತ್ವದಲ್ಲಿ ನೂರಾರು ಸ್ವಯಂ ಸೇವ ಸಂಘಟನೆಯ ಕಾರ್ಯಕರ್ತರ ಜೊತೆಗೂಡಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget