ಡಿ.1ರಂದು ರಾತ್ರಿ ಸುಬ್ರಹ್ಮಣ್ಯದಲ್ಲಿ ಕಾಡಾನೆ ಸಂಚಾರ ನಡೆಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ ನೀಡಿದೆ.
ಡಿ.2ರಂದು ಬೆಳಗ್ಗಿನಿಂದ ಸುಬ್ರಹ್ಮಣ್ಯ ಹಾಗೂ ಕಿದು ಮೀಸಲು ಅರಣ್ಯ ಭಾಗಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ಸಂಚರಿಸಿ ಕಾಡಾನೆ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇದರ ಪ್ರಕಾರ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಆನೆಯು ಸುಬ್ರಹ್ಮಣ್ಯದಿಂದ ಹೊರಟು ಕೆದಿಲ- ಕೋಟೆ ಮಾರ್ಗವಾಗಿ ಕಿದು ಮೀಸಲು ಅರಣ್ಯ ಭಾಗದಲ್ಲಿ ಕಡೆಯದಾಗಿ ಕಂಡು ಬಂದಿರುತ್ತದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಕತ್ತಲು ಪ್ರದೇಶದಲ್ಲಿ, ನದಿ ತೀರದಲ್ಲಿ ಹಾಗೂ ಕಾಡಂಚಿನಲ್ಲಿ ಅನವಶ್ಯಕವಾಗಿ ಹೋಗದಿರಲು ಕೋರಿದೆ. ಅರಣ್ಯ ಇಲಾಖೆಯ 4 ಸಿಬ್ಬಂದಿಗಳು ಸಂಜೆ 6 ಗಂಟೆಯಿಂದ ಸುಬ್ರಹ್ಮಣ್ಯದಲ್ಲಿ ರಾತ್ರಿ ಗಸ್ತು ಕೆಲಸ ನಿರ್ವಹಿಸುತ್ತಾರೆ. ಕಾಡಾನೆ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಇಂದಿನ ಗಸ್ತು ಸಿಬ್ಬಂದಿಗಳನ್ನು ಕೂಡಲೇ ಸಂಪರ್ಕಿಸಬೇಕಾಗಿ ಕೋರಿದೆ.
ಸದಾಶಿವ Dyrfo: +919482633483
ಬಸಪ್ಪ ಗುರಿಕಾರ್:
+919164248532
ಸತ್ಯ ನಾರಾಯಣ್:
+919449904151
Post a Comment