ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆ

Recent Post

ಜನವರಿ 31ರಿಂದ ಏಪ್ರಿಲ್ 4ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ; ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ

1/19/2025
ನವದೆಹಲಿ: ಜನವರಿ 31ರಿಂದ ಏಪ್ರಿಲ್ 4ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ...

 

ಗೆಲುವಿನ ಅಶಾವಾದದಲ್ಲಿ ಬಿಜೆಪಿ ನೇತೃತ್ವದ ಸಹಕಾರ ಭಾರತಿ ಅಭ್ಯರ್ಥಿಗಳು



ಐವರ್ನಾಡು ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಗೆ ಎರಡು ದಿನಗಳು ಬಾಕಿ ಉಳಿದಿದ್ದು ಬಿಜೆಪಿ ನೇತೃತ್ವದ ಸಹಕಾರ ಭಾರತಿ ಎಲ್ಲಾ 12 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ಈ ಬಾರಿ ಹೊಸ ಮುಖಗಳಿಗೆ ಅದ್ಯತೆ ನೀಡಿದ್ದು ಸಹಕಾರ ಕ್ಷೇತ್ರ ದಲ್ಲಿ ಯುವ ಸಮುದಾಯ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ನೀಡಲಾಗಿದ್ದು ಸ್ನಾತಕೋತ್ತರ ಪದವಿ,ಎಂಜಿನಿಯರಿಂಗ್,ಉಪನ್ಯಾಸಕ,ಪ್ರಗತಿಪರ ಕೃಷಿ ಅನುಭವಿಗಳು,ವಕೀಲ ವೃತ್ತಿ ಮಾಡುತ್ತಿರುವರು ಈ ತಂಡದಲ್ಲಿರುವುದು ವಿಶೇಷ. ಪರಿವರ್ತನೆಗೆ ಮತ್ತು ಹೊಸತನಕ್ಕೆ ಈ ಚುನಾವಣಾ ಫಲಿತಾಂಶ ಮುನ್ನುಡಿ ಬರೆಯಲಿದೆಯೆಂದು ಗ್ರಾಮದ ಜನತೆ ನಿರೀಕ್ಷೆಯನ್ನಿಟ್ಟು ಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ವಿವರ ಶ್ರೀನಿವಾಸ ಮಡ್ತಿಲ : ಶ್ರೀಯುತರು BA Ed,LLB ವಿದ್ಯಾರ್ಹತೆ ಹೊಂದಿದ್ದು, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಐವರ್ನಾಡು ರಬ್ಬರ್ ಸೊಸೈಟಿ ಅಧ್ಯಕ್ಷರಾಗಿ ಅಲ್ಲದೇ ಈ ಹಿಂದೆ ಐವರ್ನಾಡು ಕೃಷಿ ಪತ್ತಿನ ಸಹಕಾರ ಸಂಘ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ ,ಪ್ರಗತಿ ಪರ ಕೃಷಿಕರು. 2)ದೇವಿದಾಸ ಕತ್ಲಡ್ಕ : ಶ್ರೀಯುತರು ಡಿಫ್ಲೋಮಾ ಇನ್ ಸಿವಿಲ್ ವಿದ್ಯಾರ್ಹತೆ ಹೊಂದಿದ್ದು, ಒಂದಷ್ಟು ಕಾಲ ವಿವಿಧ ಕಡೆಗಳಲ್ಲಿ ಸಿವಿಲ್ ಸೂಪರ್ವೈಸರ್ ರಾಗಿ ಕಾರ್ಯನಿರ್ವಹಿಸಿ,ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರಗತಿಪರ ಕೃಷಿಕರಾಗಿದ್ದಾರೆ. 3) ಕಿಶನ್ ಜಬಳೆ: ಇವರು MA , LLB ವಿದ್ಯಾರ್ಹತೆ ಹೊಂದಿದ್ದು,ಕಾಲೇಜ್ ಜೀವನದಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿ ABVP ರಾಜ್ಯ ಕಾರ್ಯದರ್ಶಿಯಾಗಿ, ಐವರ್ನಾಡು ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕರಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜವಾಬ್ದಾರಿ ನಿರ್ವಹಿಸಿ ಪ್ರಸ್ತುತ ಬೆಳ್ಳಾರೆ ಬಿಜೆಪಿ ಮಹಾಶಕ್ತಿ ಕೇಂದ್ರ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 4) ಅಜಿತ್ ಐವರ್ನಾಡು : ಇವರು B.com,MA ವಿದ್ಯಾರ್ಹತೆ ಪಡೆದಿದ್ದು ಕೆ.ಯಸ್ ಗೌಡ ಕಾಲೇಜ್ ನಿಂತಿಕಲ್ಲು ಉಪನ್ಯಾಸಕರಾಗಿ ತುಳು ಭಾಷೆಯಲ್ಲಿ P. hd ಅಧ್ಯಯನ ಮಾಡುತ್ತಿದ್ದು ,ಇವರು ದೈವದ ಮಧ್ಯಸ್ಥರಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 5) ಅನಿಲ್ ಡಿವಿ : ಶ್ರೀಯುತರು BA ಶಿಕ್ಷಣ ಪಡೆದಿದ್ದು ಕಾಲೇಜ್ ಜೀವನದಲ್ಲಿ ಸುಬ್ರಹ್ಮಣ್ಯ ABVP ನಗರ ಕಾರ್ಯದರ್ಶಿಯಾಗಿ ತಾಲೂಕು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.ಪ್ರಸ್ತುತ ಐವರ್ನಾಡು ವಿಶ್ವ ಹಿಂದೂ ಪರಿಷತ್ ನ ಕಾರ್ಯದರ್ಶಿಯಾಗಿ ತೊಡಗಿಸಿಕೊಂಡಿದ್ದು ವೃತ್ತಿಯಲ್ಲಿ ಪ್ರಗತಿಪರ ಕೃಷಿಕರಾಗಿದ್ದಾರೆ. 7) ನವೀನ್ ಸಾರಕೆರೆ: ಶ್ರೀಯುತರು ಈ ಹಿಂದೆ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ,APMC ಉಪಾಧ್ಯಕ್ಷರು ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದು,ಪ್ರಗತಿ ಪರ ಕೃಷಿಕರು. 8)ಪ್ರದೀಪ್ : ಇವರು BA,ಐಟಿಐ ಶಿಕ್ಷಣ ಪಡೆದಿದ್ದು ಛಾಯಾಚಿತ್ರಗಾರ ರಾಗಿ, ಪ್ರಸ್ತುತ ಐವರ್ನಾಡು ಲ್ಲಿ ಸ್ಟುಡಿಯೋ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 9) ರಾಜೀವಿ ಪರ್ಲಿಕಜೆ: ಎವರು ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯೆಯಾಗಿ,ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಇವರ ಅಧ್ಯಕ್ಷೆ ಅವಧಿಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ವನ್ನು ಪಡೆದುಕೊಂಡಿದ್ದರು.10) ಲೀಲಾವತಿ ಎಂ.ಸಿ. ಇವರು ನವೋದಯ ಸ್ವಸಹಾಯ ಸಂಘದ ಸಕ್ರೀಯ ಸದಸ್ಯರಾಗಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಅಲ್ಲದೇ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 11) ಪ್ರವೀಣ್ ಇವರು ಪಿಯುಸಿ,ಐಟಿಐ ವಿದ್ಯಾರ್ಹತೆ ಹೊಂದಿದ್ದು ,ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರೆ ಸಮಾಜದ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. 12) ಮಾಯಿಲಪ್ಪ : ಇವರು ಪ್ರೌಢ ಶಿಕ್ಷಣವನ್ನು ಪಡೆದಿದ್ದು, ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿ ತನ್ನ ಜೀವನವನ್ನು ಸಾಗಿಸುತ್ತಿದ್ದು,ಸಕ್ರೀಯ ಕಾರ್ಯಕರ್ತರಾಗಿದ್ದಾರೆ.

Post a Comment

Emoticon
:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget