ಮಾಜಿ ಸಚಿವ ಎಸ್.ಅಂಗಾರ ನೇತೃತ್ವದ ದೀನದಯಾಳ್ ಸಹಕಾರ ಸಂಘ ಸುಳ್ಯದಲ್ಲಿ ಉದ್ಘಾಟನೆ

ಸರಕಾರದ ಯೋಜನೆಗಳು ಸಹಕಾರ ಸಂಘದ ಮೂಲಕ ಜಾರಿಯಾಗಬೇಕು : ಕ್ಯಾ.ಬ್ರಿಜೇಶ್  ಚೌಟ



ಸುಳ್ಯದ ರಥಬೀದಿಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದಲ್ಲಿ  ಮಾಜಿ ಸಚಿವ ಎಸ್.ಅಂಗಾರ ನೇತೃತ್ವದ ಪಂಡಿತ್ ದೀನದಯಾಳ್ ಸಹಕಾರ ಸಂಘದ   ಉದ್ಘಾಟನೆ ಇಂದು ನಡೆಯಿತು. 

 


ಸಹಕಾರ ಸಂಘವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಳ್ಯ ತಾಲೂಕು ಸಂಘಚಾಲಕರಾದ ಚಂದ್ರಶೇಖರ ತಳೂರು ರಬ್ಬನ್ ಬಿಡಿಸುವುದರ ಮೂಲಕ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.  


ಬಳಿಕ ದುರ್ಗಾಪರಮೇಶ್ವರಿ ಕಲಾಮಂದಿರ ಕೇರ್ಪಳದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು. 

 


ದ.ಕ.ಜಿಲ್ಲೆಯಲ್ಲಿರು ಸಹಕಾರ ಸಂಸ್ಕೃತಿಯಿಂದಾಗಿ ಇಲ್ಲಿ ಬ್ಯಾಂಕಿಂಗ್ ಕ್ಷೇತ್ರ ಯಶಸ್ವಿಯಾಗಿದೆ. ಎಸ್.ಅಂಗಾರರವರು ಮೂರು ದಶಕ ಶಾಸಕರಾಗಿದ್ದವರು. ಮೂರು ವರ್ಷ ಸಚಿವರಾಗಿದ್ದವರು. ಅವರ ಅಪಾರ ಅನುಭವವನ್ನು ಧಾರೆ ಎರೆದು ಸಹಕಾರ ಸಂಘವನ್ನು ಕಟ್ಟತೊಡಗಿದ್ದಾರೆ. ಸರಕಾರದ ಯೋಜನೆಗಳನ್ನೂ ಸಹಕಾರ ಸಂಘಗಳ ಮೂಲಕ ಜಾರಿಗೊಳಿಸುವಂತಾಗಬೇಕು" ಎಂದು ಅವರು ಹೇಳಿದರು. 


ಶಾಸಕಿ ಭಾಗೀರಥಿ ಮುರುಳ್ಯ, ಟಿ.ಎ.ಪಿ.ಸಿ.ಎಂಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಎಂಎಲ್.ಸಿ. ಅಣ್ಣಾ ವಿನಯಚಂದ್ರ, ಟಿ.ಎ.ಪಿ.ಸಿ.ಎಂ.ಎಸ್. ಸಿ.ಇ.ಒ. ಜಯರಾಮ ದೇರಪ್ಪಜ್ಜನಮನೆ, ಎ.ಆರ್. ರಘು, ಚಂದ್ರಶೇಖರ ತಳೂರು, ಆರೆಸ್ಸೆಸ್ ಮುಖಂಡ  ನ.ಸೀತಾರಾಮ, ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಲೆಕ್ಕ ಪರಿಶೋಧಕರಾದ  ಶ್ರೀಪತಿ ಭಟ್, ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ, ಮುಖ್ಯ ಅತಿಥಿಗಳಾಗಿದ್ದರು.  


ಸಹಕಾರ ಸಂಘದ ನಿರ್ದೇಶಕರಾದ ಜಗನ್ನಾಥ ಜಯನಗರ ಸ್ವಾಗತಿಸಿ, ಸೋಮಶೇಖರ ಹಾಸನಡ್ಕ  ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. 

ನಿರ್ದೇಶಕರಾದ ವೇದಾವತಿ ಅಂಗಾರ, ಹರಿಶ್ಚಂದ್ರ ಹಾಸನಡ್ಕ, ಎಸ್.ಕೃಷ್ಣ, ಸಂದೀಪ್ ಪಂಜೋಡಿ, ಶುಭಲತಾ ಮಾತ್ರಮಜಲು, ಬಾಳಪ್ಪ ಕಿಲಂಗೋಡಿ,  ಕುಂಞ ಕಮಿತ್ತಿಲು, ಉಮೇಶ್ ಕೆಳಗಿನಬೀಡು, ರವಿ ಕೆಳಗಿನಬೀಡು ಉಪಸ್ಥಿತರಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget