ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಹೊಸ ವರ್ಷಕ್ಕೆ ಮೂರು ಶುಭಸುದ್ದಿ ನೀಡಿದೆ. ರಾಜ್ಯದ ಭಕ್ತಾದಿಗಳಿಗೆ ಗ್ಯಾರಂಟಿ ಸರ್ಕಾರದಿಂದ 'ಯಾತ್ರೆ ಭಾಗ್ಯ' ಸಿಗುತ್ತಿದೆ.
ಯಾತ್ರೆ ಭಾಗ್ಯ ಯೋಜನೆಯಡಿ ಒಟ್ಟು ಮೂರು ಟೂರ್
ಪ್ಯಾಕೇಜ್‌ಗಳಿಗೆ ಸಬ್ಸಿಡಿ ಘೋಷಣೆ ಮಾಡಿದೆ. ಇದೇ ಮೊದಲ ಬಾರಿಗೆ ಪುರಿ ಜಗನ್ನಾಥ್, ದ್ವಾರಕ, ದಕ್ಷಿಣ ಕ್ಷೇತ್ರಗಳಿಗೆ ಸಹಾಯಧನ ಘೋಷಣೆ ಮಾಡಿದೆ. G ಮೂಲಕ ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯವನ್ನು ಕರುಣಿಸಲಿದೆ. ಸರ್ಕಾರದಿಂದ ದಕ್ಷಿಣ ಕ್ಷೇತ್ರಗಳ ಯಾತ್ರಾ, ದ್ವಾರಕಾ ಯಾತ್ರ, ಪುರಿಜಗನ್ನಾಥ ದರ್ಶನ ಸಿಗಲಿದೆ.
ರಾಮೇಶ್ವರ-ಕನ್ಯಾಕುಮಾರಿ-
ಮಧುರೈ, ತಿರುವನಂತಪುರಂ: ಇದು ಒಟ್ಟು ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್ ಆಗಿದೆ. ಅದಕ್ಕಾಗಿ 25 ಸಾವಿರ ರೂಪಾಯಿ ಖರ್ಚು ಆಗಲಿದೆ. ಇದಕ್ಕೆ ಸರ್ಕಾರ 10,000 ರುಪಾಯಿ ಸಬ್ಸಿಡಿ ನೀಡಲಿದೆ. ಐದು ಸಾವಿರ ಸಹಾಯಧನ ಸೇರಿ 15 ಸಾವಿರ ಹಣವನ್ನು ಸರ್ಕಾರವೇ ನೀಡುತ್ತದೆ. ಯಾತ್ರಿಗಳು 10 ಸಾವಿರ ರೂಪಾಯಿ ಮಾತ್ರ ಪಾವತಿ ಮಾಡಬೇಕಾಗುತ್ತದೆ.
ದ್ವಾರಕ ಮತ್ತು ಪುರಿ ಜಗಾನ್ನಾಥ್ ಯಾತ್ರೆ: ದ್ವಾರಕ- ನಾಗೇಶ್ವರ-ಸೋಮನಾಥ್- ತ್ರಯಂಬಕೇಶ್ವರ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇದು. ಈ ಯಾತ್ರೆಯ ಪ್ಯಾಕೇಜ್‌ನ ಒಟ್ಟು ಮೊತ್ತ 32,500 ಸಾವಿರ ರೂಪಾಯಿ. ಅದಕ್ಕಾಗಿ ಸರ್ಕಾರ 17,500 ರೂಪಾಯಿ ಹಣ ಭರಿಸುತ್ತದೆ. ಉಳಿದ 15,000 ರೂಪಾಯಿ ಹಣವನ್ನು ಮಾತ್ರ ಭಕ್ತರು ನೀಡಬೇಕು.
ದ್ವಾರಕನಾಥಕ್ಕೆ ಪ್ರಯಾಣಿಸೋರಿಗೆ ಟ್ರೈನ್ ಹತ್ತುವ ಮತ್ತು ಇಳಿಯುವ ಸ್ಥಳಗಳು ಹೀಗಿವೆ. ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ. ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ. ಈ ರೈಲು ಜನವರಿ 6 ರಂದು ಹೊರಟು ಜನವರಿ 13ಕ್ಕೆ ವಾಪಸ್ ಆಗಲಿದೆ. ಪುರಿಜಗನ್ನಾಥ ದರ್ಶನಕ್ಕೆ ಹೊರಡುವ ಟ್ರೈನ್ ಫೆಬ್ರವರಿ 2 ರಂದು ಹೊರಟು ಫೆಬ್ರವರಿ 10 ರಂದು ವಾಪಸ್ ಆಗಲಿದೆ.
ಅಷ್ಟು ಮಾತ್ರವಲ್ಲದೇ ವರ್ಷದಲ್ಲಿ 1200 ಅರ್ಚಕರು ಹಾಗೂ 1200 ಅರ್ಚಕ ಕುಟುಂಬದ ಒಬ್ಬ ಸದಸ್ಯರು ಸೇರಿ 2400 ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತದೆ.
Post a Comment