ಭದ್ರಕೋಟೆಯಲ್ಲಿ ಬಿಜೆಪಿಯಿಂದ ಹೊಸ ಮುಖಗಳು ಕಣಕ್ಕೆ;ಗೆಲುವಿನ ನಿರೀಕ್ಷೆ
ಕನಕಮಜಲು ಕೃಷಿ ಪತ್ತಿನ ಸಹಕಾರ ಸಂಘ ಜಾಲ್ಸುರ್ 5 ವರ್ಷದ ಆಡಳಿತ ಮಂಡಳಿ ಚುನಾವಣೆ ಇದೇ ಬರುವ ದಿನಾಂಕ 22 ರ ಆದಿತ್ಯವಾರ ದಂದು ನಡೆಯಲಿದೆ. ಶತಮಾನ ದ ಇತಿಹಾಸ ಹೊಂದಿರುವ ಈ ಸಹಕಾರ ಸಂಘಕ್ಕೆ ಸುಸಜ್ಜಿತವಾದ ಆಡಳಿತ ಕಚೇರಿ,ಅಡ್ಕಾರು ಲ್ಲಿ ಗೋದಾಮು ಕಟ್ಟಡ ನಿರ್ಮಿಸಿದಲ್ಲದೆ ಕೃಷಿಕರಿಗೆ ವಿದ್ಯಾನಿಧಿ,ಮರಣ ಸಾಂತ್ವನ ನಿಧಿ ಯೋಜನೆ ಪ್ರಾರಂಭಿಸಿದೆ.ಈ ಆಡಳಿತ ಮಂಡಳಿ ಚುನಾವಣೆ ಯಲ್ಲಿ ಬಿಜೆಪಿ ನೇತೃತ್ವದ ಸಹಕಾರ ಭಾರತಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಿದ್ದು, ಮತ್ತೊಮ್ಮೆ ಜಾಲ್ಸುರ್ ಕನಕಮಜಲು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ವಿಶ್ವಾಸ ವನ್ನು ಕಾರ್ಯಕರ್ತರು ಹೊಂದಿದ್ದಾರೆ. ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಪರಿಚಯ
ಸುಧಾಕರ ಕಾಮತ್ ಕೆ. (ಸಾಲಗಾರರಲ್ಲದ ಕ್ಷೇತ್ರ)
ಜಾಲ್ಲೂರು ಮಂಡಲದ ಪ್ರಧಾನರಾಗಿದ್ದ ಹಾಗೂ ಉದ್ಯಮಿಯಾಗಿದ್ದ ದಿಉಪೇಂದ್ರ ಕಾಮತ್ ಮತ್ತು ಶ್ರೀಮತಿ ಪದ್ಮಾವತಿ ಯು. ಕಾಮತ್‌ರವರ ಪುತ್ರರಾಗಿದ್ದು ಪ್ರಾಥಮಿಕ ಶಿಕ್ಷಣವನ್ನು ಚಾಲ್ಲೂರು ಹಿರಿಯ ಪ್ರಾಥಮಿಕ ಶಾಲೆ ಅಡ್ಯಾರು ಇಲ್ಲಿ ಪೂರೈಸಿ ಪದವಿ ಶಿಕ್ಷಣ ಬಿ.ಬಿ.ಎಂನ್ನು ಮಾಡಿರುತ್ತಾರೆ ವಿನೋಬನಗರದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ 18 ವರ್ಷಗಳ ಕಾಲ ಸಂಚಾಲಕರಾಗಿ ಅಡ್ಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಕುಸುಮಾಧರ ಆರ್ಭಡ್ಕ (ಸಾಮಾನ್ಯ ಸಾಲಗಾರ ಕ್ಷೇತ್ರ)
ನವಚೇತನ ಯುವಕ ಮಂಡಲ ಬೊಳುಬೈಲು ಇದರ ಅಧ್ಯಕ್ಷರಾಗಿಯೂ ಹಾಗೂ ಗೌರವಾಧ್ಯಕ್ಷರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಜಾಲ್ಲೂರು ವಲಯ ಅಧ್ಯಕ್ಷರಾಗಿ, ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷರಾಗಿ ಬಿ.ಎ ಪದವೀಧರರಾಗಿದ್ದರೆ ಉತ್ತಮ ಕೃಷಿಕರಾಗಿರುತ್ತಾರೆ.
ಡಾ| ಗೋಪಾಲಕೃಷ್ಣ ಭಟ್ ಕಾಟೂರು(ಸಾಮಾನ್ಯ ಸಾಲಗಾರ ಕ್ಷೇತ್ರ)
ವೃತ್ತಿಯಲ್ಲಿ ವೈದ್ಯರಾಗಿರುವ ಮತ್ತು ಉತ್ತಮ ಕೃಷಿಕರು. ತನ್ನ ವೈದ್ಯ ವೃತ್ತಿಯೊಂದಿಗೆ ಧಾರ್ಮಿಕವಾಗಿಯೂ, ಸಾಮಾಜಿಕವಾಗಿಯೂ ಗುರುತಿಸಿಕೊಂಡಿರುವ ಶ್ರೀಯುತರು ಅಡ್ಯಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಲ್ಲಿ ಖಜಾಂಜಿಯಾಗಿಯೂ, ವಿವೇಕಾನಂದ ಶಾಲೆ ವಿನೋಬಾನಗರ ಇದರ ಸಂಚಾಲಕರಾಗಿಯೂ ಕಾಯ ನಿರ್ವಹಿಸುತ್ತಿದ್ದಾರೆ. ಕನಕಮಜಲು ಪ್ರಾ.ಕೃ.ಪ.ಸಹಕಾರಿ ಸಂಘದಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿ ಶತಮಾನೋತ್ಸವವನ್ನು ಆಚರಿಸಿ ಹೊಸ ಯೋಜನೆಗಳನ್ನು ಸದಸ್ಯರಿಗೆ ನೀಡಿರುತ್ತಾರೆ.
ತಿಲೋತ್ತಮ ಕೊಲ್ಲಂತ್ತಡ್ಕ (ಸಾಮಾನ್ಯ ಸಾಲಗಾರ ಕ್ಷೇತ್ರ)
ಶ್ರೀಯುತರು ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಒಕ್ಕೂಟದ ಅಧ್ಯಕ್ಷರಾಗಿ ಶ್ರೀ ಆತ್ಮಾರಾಮ ಭಜನಾ ಮಂದಿರದ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿರುತ್ತಾರೆ. ಪ್ರಸ್ತುತ ವಿವಿಧ ಸಂಘ ಸಂಸ್ಥೆ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀಯುತರು ಉತ್ತಮ ಕೃಷಿಕರಾಗಿ ಸುಳ್ಯ ರಬ್ಬರ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ.
ರಘುರಾಮ ಮಾಸ್ತರ್ ಬುಡ್ಡೆಗುತ್ತು (ಸಾಮಾನ್ಯ ಸಾಲಗಾರ ಕ್ಷೇತ್ರ)
ಕನಕಮಜಲು ಗ್ರಾಮದ ಬುಡ್ಡೆಗುತ್ತು ಮನೆಯವರಾಗಿದ್ದು 1976 ರಲ್ಲಿ ಶಿಕ್ಷಕ ವೃತ್ತಿ ಜೀವನ ನಡೆಸಿದರು ಸುಮಾರು 36 ವರ್ಷ ಸಹ ಶಿಕ್ಷಕ ಮುಖ್ಯ ಶಿಕ್ಷಕನಾಗಿ ದುಡಿದು 2013ರಲ್ಲಿ ನಿವೃತ್ತಿಗೊಂಡಿರುತ್ತಾರೆ ಈ ಮಧ್ಯೆ ಅಂಚೆ ತೆರಪಿನ ಮೂಲಕ ಕಲಾ ಪದವಿ (ಬಿ.ಎ) ಹಾಗೂ ಹಿಂದಿ ರತ್ನ ಪದವಿ ಕೂಡ ಮಾಡಿರುತ್ತಾರೆ ಹಾಗೂ 3 ವರ್ಷಗಳ ಕಾಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ.
ಸುನಿಲ್ ಅಕ್ಕಿಮಲೆ , (ಸಾಲಗಾರ ಸಾಮಾನ್ಯ ಕ್ಷೇತ್ರ) ನಿವೃತ್ತ ಶಿಕ್ಷಕ ಆನಂದ ಮಾಸ್ತರ್ ಅಕ್ಕಿ ಮಲೆ ರವರ ಸುಪುತ್ರ ಪದವಿ ಪೂರ್ವ ಶಿಕ್ಷಣ ಹಾಗೂ ಕಂಪ್ಯೂಟರ್ ಹಾರ್ಡ್ ವೇರ್ ನೆಟ್ವಕಿರ್ಂಗ್ ಶಿಕ್ಷಣವನ್ನು ಪಡೆದಿರುವ ಶ್ರೀಯುತರು ಉತ್ತಮ ಕೃಷಿಕರು ಯುವಕ ಮಂಡಲ(ರಿ.) ಕನಕಮಜಲು ಇದರ ಸಕ್ರಿಯ ಸದಸ್ಯರಾಗಿದ್ದಾರೆ.
ಶ್ರೀಮತಿ ದಮಯಂತಿ ಲಿಂಗಪ್ಪ ಗೌಡ ಅಡ್ಡಾರು (ಮಹಿಳಾ ಸಾಲಗಾರ ಕ್ಷೇತ್ರ)
ಸುಳ್ಯ ತಾಲೂಕು ತಾಲ್ಲೂರು ಗ್ರಾಮದ ಅಡ್ಡಾರು ಕೋನಡ್ಕದಲ್ಲಿ ನಿವಾಸಿಯಾಗಿರುವ ಶ್ರೀಮತಿ ದಮಯಂತಿ.ಎಳವೆಯಿಂದಲೇ ರಾಷ್ಟ್ರ ಸೇವಕ ಸಂಘದ ಕಾರ್ಯಕರ್ತೆಯಾಗಿದ್ದು , ಸಕ್ರಿಯರಾಗಿದ್ದರೆ.
ವಿನುತಾ ಸಾರಕೂಟೇಲು (ಮಹಿಳಾ ಸಾಲಗಾರ ಕ್ಷೇತ್ರ)
ಸುಳ್ಯ ತಾಲೂಕು ಕನಕಮಜಲು ಗ್ರಾಮದ ಕೃಷಿಕ ಲಕ್ಷ್ಮೀನಾರಾಯಣ ಸಾರಕುಟೆಲ್ ಯಾಗಿರುವ ಶ್ರೀಮತಿ ವಿನುತಾ ಸಾರಕುಟೇಲು ಉತ್ತಮ ಕೃಷಿಕರು ಆಗಿರುವ ಇವರು ಪ್ರಸ್ತುತ ಸ್ವರ್ಣ ಮಹಿಳಾ ಮಂಡಲ(ರಿ.) ಕನಕಮಜಲು ಇದರ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಾಮಾಜಿಕ ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ.
ಸಂದೀಪ್ ಕದಿಕಡ್ಕ (ಹಿಂದುಳಿದ ವರ್ಗ 'ಎ)
ಸುಳ್ಯ ತಾಲೂಕು ಕನಕಮಜಲು ಗ್ರಾಮದ ಕದಿಕಡ್ಕ ನಿವಾಸಿಯಾಗಿದ್ದು ಬಿಕಾಂ ಪದವಿಯನ್ನು ಪಡೆದಿದ್ದು (ಮಾಂಡೋವಿ ಮೋಟರ್ಸ್)ಖಾಸಗಿ ಸಂಸ್ಥೆಯಲ್ಲಿ ಬಿಲ್ಲಿಂಗ್ ಸೆಕ್ಷನ್‌ನಲ್ಲಿ ಉದ್ಯೋಗ ಮಾಡಿದ ಅನುಭವವನ್ನು ಹೊದಿದ್ದು ಹಾಗೂ ಮಣಪುರಂ ಫೈನಾನ್ಸಿನಲ್ಲಿ ಜೂನಿಯರ್ ಅಸಿಸ್ಟೆಂಟ್- ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.
ಗಂಗಾಧರ ರೈ ಸೋಣಂಗೇರಿ (ಹಿಂದುಳಿದ ವರ್ಗ 'ಬಿ')
ಜಾಲ್ಲೂರು ಗ್ರಾಮದ ಸೋಣಂಗೇರಿಯ ಇವರು ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘ ಇದರ ಖಜಾಂಜಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋಪರೇಟಿವ್, ಸೊಸೈಟಿ ಸುಳ್ಯ ಶಾಖೆಯ ಸಲಹಾ ಸಮಿತಿಯ ಸದಸ್ಯ ಕುಕ್ಕಂದೂರು ಶ್ರೀ ಕಿನ್ನಿಮಾಣಿ ಪುಮಾಣಿ ದೈವಸ್ಥಾನ ದ ಮಾಜಿ ಅಧ್ಯಕ್ಷ ಜಾಲ್ಲೂರ್ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ, ಸುಳ್ಯ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪ್ರಸ್ತುತ ಪ್ರಾಂತ್ಯ ಅಧ್ಯಕ್ಷರಾಗಿದ್ದರೆ.
ನಿರಂಜನ ಬೊಳುಬೈಲು (ಸಾಲಗಾರ ಕ್ಷೇತ್ರ SC)
ಸುಳ್ಯ ತಾಲೂಕು ಜಾಲ್ಲೂರು ಗ್ರಾಮದ ಬೊಳುಬೈಲು ಎಂಬಲ್ಲಿ ವಾಸವಾಗಿರುವ ಶ್ರೀಮತಿ ಶಾರದ ಬಾಲಣ್ಣರವರ ಮಗನಾದ ನಿರಂಜನ ಬೊಳುಬೈಲುನಾದ ನಾನು ಎಂ.ಎ. ಅರ್ಥಶಾಸ್ತ್ರ ಮತ್ತು ಮಾಸ್ಟರ್ ಆಫ್ ಕಾಮರ್ಸ್ ಸ್ನಾತಕೋತರ ಪಧವೀಧರನಾಗಿದ್ದು, ಸುಮಾರು 8 ವರ್ಷಗಳ ಕಾಲ ಸುಳ್ಯದ ನೆಪರು ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಕೃಷಿಕರಾಗಿದ್ದರೆ.
ವೆಂಕಪ್ಪ ನಾಯ್ಕ ದೇರ್ಕಜೆ (ಸಾಲಗಾರ ಕ್ಷೇತ್ರ S T)
ಶ್ರೀಯುತರು ಕನಕಮಜಲು ಗ್ರಾಮದ ದೇರ್ಕಜೆ ಪಕ್ಕೀರ ನಾಯ್ಕ ಮತ್ತು ಸೀತುರವರ ಸುಪುತ್ರನಾಗಿದ್ದು ಎಸ್.ಎಸ್. ವಿದ್ಯಾಭ್ಯಾಸ ಮಾಡಿರುತ್ತಾರೆ ವೃತ್ತಿಯಲ್ಲಿ ಗಾರೆ ಕೆಲಸರಾಗಿದ್ದು ತಮ್ಮ ವೃತ್ತಿಯೊಂದಿಗೆ ಸಾಮಾಜಿಕವಾಗಿ ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದು ಮುಗೇರು ಮಾಣಿಮಜಲು ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿರುತ್ತಾರೆ. ತಮ್ಮ ಅವಧಿಯಲ್ಲಿ ಶಾಲೆಗೆ ಕುಡಿಯಲು ಬಾವಿಯ ವ್ಯವಸ್ಥೆಯನ್ನು ತಮ್ಮ ಪ್ರಯತ್ನದಿಂದ ಯಶಸ್ವಿಯಾಗಿ ಮಾಡಿರುತ್ತಾರೆ ಮತ್ತು ಶಾಲಾ ಅಭಿವೃದ್ಧಿಗಾಗಿ ದುಡಿದಿದ್ದಾರೆ ಶ್ರೀ ಆತ್ಮಾರಾಮ ಭಜನಾ ಮಂದಿರ ಮತ್ತು ಊರಿನ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
Post a Comment