ಕೇಂದ್ರ ಹವಾಮಾನ ಇಲಾಖೆ ನೀಡಿದ ಮಾಹಿತಿಯನುಸಾರ ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆಗಳಿದ್ದು, ನಾಳೆ (ಡಿ.3).ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರನ್ವಯ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಶಾಲೆ, ಕಾಲೇಜು, ಅಂಗನವಾಡಿ, ಟ್ಯೂಷನ್, ಕೋಚಿಂಗ್ ಸೆಂಟರ್ ಮತ್ತು ಮದ್ರಸಗಳಿಗೆ ರಜೆ ಅನ್ವಯವಾಗಿದೆಯೆಂದು ಪ್ರಕಟಣೆ ತಿಳಿಸಿದೆ.
ಬಂಗಾಳ ಆಳ ಸಮುದ್ರದಲ್ಲಿ ರೂಪುಗೊಂಡ ಫಿನ್ಜಿಲ್ ಸುಂಟರಗಾಳಿಯು ಚಃಡಮಾರುತ ಸ್ವರೂಪ ಪಡೆದಿದ್ದು, ಕೇರಳದಲ್ಲಿ ವ್ಯಾಪಕ ಮಳೆ ಸುರಿಯಲಿದೆ.ಸೋಮವಾರ ಮಧ್ಯಾಹ್ನವೇ ಮಳೆ ಆರಂಭವಾಗಿದ್ದು, ನಾಳೆ ಮಳೆ ಬಿರುಸಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
Post a Comment