ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ

ಎಸ್.ಎನ್.ಮನ್ಮಥರ ನೇತೃತ್ವದ ತಂಡದ 11 ಮಂದಿಗೆ ಜಯ,  1 ಸ್ಥಾನ ಬಿಜೆಪಿಯ ಪಾಲು 



ಐವರ್ನಾಡು ಪ್ರಾಥಮಿಕ ಕೃಪಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎನ್.ಮನ್ಮಥರವರ ನೇತೃತ್ವದ ತಂಡದ 11ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಒಬ್ಬರು ಅಭ್ಯರ್ಥಿ ಮಾತ್ರ ಗೆಲುವು ಸಾಧಿಸಿದ್ದಾರೆ.

 ಸಾಮಾನ್ಯ ಕ್ಷೇತ್ರದಲ್ಲಿ ಎಸ್.ಎನ್.ಮನ್ಮಥ ರವರ ನೇತೃತ್ವದ ತಂಡ 5 ಸ್ಥಾನಗಳನ್ನು ಪಡೆದುಕೊಂಡಿದೆ.

ಬಿಜೆಪಿ ಒಂದು ಸ್ಥಾನವನ್ನು ಪಡೆದುಕೊಂಡಿದೆ.

ಎಸ್.ಎನ್.ಮನ್ನಥರಿಗೆ 479 ಮತ,ಅನಂತಕುಮಾರ್ ಖಂಡಿಗೆಮೂಲೆಯವರಿಗೆ 419 ಮತ,ಸತೀಶ ಎಡಮಲೆ 390 ಮತ,ನಟರಾಜ ಎಸ್.364 ಮತ ,ಮಹೇಶ ಜಬಳೆ 387 ಮತ ಪಡದು ವಿಜಯಿಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಶ್ರೀನಿವಾಸ ಮಡ್ತಿಲ 371 ಮತಗಳನ್ನು ಪಡೆದಿದ್ದಾರೆ.

ಮನ್ಮಥರವರ ನೇತೃತ್ವದ ಗೋಪಾಲಕೃಷ್ಣ ಸಿ.ಎಸ್.353 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಬಿಜೆಪಿ ಬೆಂಬಲಿತ ದೇವಿದಾಸ ಕೆ 276 ಮತ,ಕಿಶನ್ ಜಬಳೆ 341ಮತ, ಅಜಿತ್ ಐವರ್ನಾಡು 356 ಮತ,ಗಣೇಶ ಕೊಚ್ಚಿ 290 ಮತ,ಅನಿಲ್ ದೇರಾಜೆ 311 ಮತ ಪಡೆದು ಪರಾಭವಗೊಂಡಿದ್ದಾರೆ.

ಕಾಂಗ್ರೆಸ್ ನ ಅಶ್ವತ್ ಜಬಳೆ 202 ಮತ,ಜಯಪ್ರಕಾಶ್ ಎನ್.207 ಮತ,ಮಂಜುನಾಥ ಎಂ.ಸಿ.132 ಮತ,ರಾಜೇಶ್ ಎಂ.ಜಿ,,188 ಮತ,ಪ್ರಮೋದ್ ಎ.113 ಮತ,ಸತೀಶ್ ಕುಮಾರ್ ಎಂ.ಎಸ್.133 ಮತ ಪಡೆದು ಪರಾಭವಗೊಂಡರು.


ಹಿಂದುಳಿದ ವರ್ಗ ಬಿಯಲ್ಲಿ ರವಿನಾಥ ಎಂ.ಎಸ್.376 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಬಿಜೆಪಿಯ ಪ್ರದೀಪ್ ಪಿ.ಆರ್.316, ಕಾಂಗ್ರೆಸ್ ನ ಕರುಣಾಕರ ಗೌಡ ಮಡ್ತಿಲ 232 ಮತಗಳನ್ನು ಪಡೆದು ಪರಾಭವಗೊಂಡರು.


ಪರಿಶಿಷ್ಟ ಜಾತಿಯಲ್ಲಿ ಮನ್ಮಥರ ತಂಡದ ಚಂದ್ರಶೇಖರ 480 ಮತಗಳನ್ನು ಪಡೆದು ವಿಜಯಿಯಾದರು.

ಬಿಜೆಪಿಯ ಮಾಯಿಲಪ್ಪ ಕೆ 345, ಕಾಂಗ್ರೆಸ್ ನ ಚಂದ್ರಕುಮಾರೇಶನ್ 171 ಮತ ಪಡೆದು ಪರಾಭವಗೊಂಡರು.

ಪರಿಶಿಷ್ಟ ಪಂಗಡದ ಮನ್ಮಥರ ನೇತೃತ್ವದ ಪುರಂದರ ಎಸ್.,441, ಬಿಜೆಪಿಯ ಪ್ರವೀಣ್ ಕುಮಾರ್ 278, ಕಾಂಗ್ರೆಸ್ ನ ಕೇಶವ ನಾಯ್ಕ 208 ಮತಗಳನ್ನು ಪಡೆದು ಪರಾಭವಗೊಂಡರು.


 ಮಹಿಳಾ ಮೀಸಲು ಕ್ಷೇತ್ರದಲ್ಲಿ ಮನ್ಮಥರ ನೇತ್ರತ್ವದ ತಂಡದ ಭವಾನಿ ಎಂ.ಸಿ.407 ಮತ ,ದಿವ್ಯಾ ರಮೇಶ್ ಮಿತ್ತಮೂಲೆ 464 ಮತ ಪಡೆದು ವಿಜಯಿಯಾಗಿದ್ದಾರೆ.

ಬಿಜೆಪಿಯ ರಾಜೀವಿ 324,ಲೀಲಾವತಿ ಸಿ.ಎಸ್.334, ಕಾಂಗ್ರೆಸ್ಸಿನ ಆಶಾ ಎಂ.ಎಸ್.224,ದೇವಿ ಕುಮಾರಿ 121 ಮತ ಪಡೆದು ಪರಾಭವಗೊಂಡಿದ್ದಾರೆ.


ಹಿಂದುಳಿದ ವರ್ಗ ಎ ಸ್ಥಾನದಲ್ಲಿ ಎಸ್ .ಎನ್.ಮನ್ಮಥ ನೇತ್ವದ ತಂಡದ ಮಧುಕರ ವಿಜಯಿಯಾಗಿದ್ದಾರೆ.ಇವರಿಗೆ 419 ಮತ ಗಳು ಬಂದಿರುತ್ತದೆ.

ಬಿಜೆಪಿ ಬೆಂಬಲಿತ ನವೀನ್ ಸಾರಕರೆ 362 ಮತ,ಕಾಂಗ್ರೆಸ್ ನ ಕಣ್ಣ ಪಾಟಾಳಿ 159 ಮತ ಗಳಿಸಿ ಪರಾಭವಗೊಂಡಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget