ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಘೋಷಣೆ
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಭಾರತೀಯ ಜನತಾ ಪಕ್ಷ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸಹಕಾರದಿಂದ ಸಾಮಾನ್ಯ ವರ್ಗದಿಂದ ಎಸ್.ಎನ್ ಮನ್ಮಥ ಶ್ರೀನಿವಾಸ್ ಮಡ್ತಿಲ,ಸತೀಶ್ ಎಡಮಲೆ,ದೇವದಾಸ್ ಕತ್ಲಡ್ಕ ,ಕಿಶನ್ ಜಬಳೆ, ಅಜಿತ್ ದೇರಾಜೆ. ಹಿಂದುಳಿದ ವರ್ಗ ಬಿ ಮಹೇಶ್ ಜಬಳೆ,ಹಿಂದುಳಿದ ವರ್ಗ A ನವೀನ್ ಸಾರಕೆರೆ ಸಾಮಾನ್ಯ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಯಾಗಿ ರಾಜೀವ್ ಪರ್ಲಿಕಜೆ , ಲೀಲಾವತಿ ಸುಂದರ ಗೌಡ ಚೆಮ್ನೂರ್.ಪರಿಶಿಷ್ಟ ಪಂಗಡದಿಂದ ತಿಮ್ಮಪ್ಪ ಉದ್ದಂಪಾಡಿ, ಪರಿಶಿಷ್ಟ ಜಾತಿಯಿಂದ ಮಣಿ ಮುಚ್ಚಿನಡ್ಕ ಅವರನ್ನು ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಲಳಂಬೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಮಹಾ ಶಕ್ತಿ ಕೇಂದ್ರದ ಸದಸ್ಯರಾದಂತಹ ಕಿಶನ್ ಜಬಳೆ,ಶಕ್ತಿ ಕೇಂದ್ರದ ಸಂಚಾಲಕರಾದ ನಂದಕುಮಾರ್ ಬಾರೆತಡ್ಕ ಐವರ್ನಾಡು ಆರು ಬೂತ್ ಗಳ ಅಧ್ಯಕ್ಷರು ಕಾರ್ಯದರ್ಶಿಗಳ ಸಮ್ಮುಖದಲ್ಲಿ ಅಭ್ಯರ್ಥಿ ಘೋಷಿಸಲಾಯಿತು.
Post a Comment