ಮಂಗಳೂರಿನಿಂದ ಸಿಂಗಾಪುರ ಕ್ಕೆ ನೇರ ವಿಮಾನ

ಸಂಸದ ಕ್ಯಾ.ಬ್ರಿಜೇಶ್ ಚೌಟ ರ ಮನವಿಗೆ ಕೇಂದ್ರ ವಿಮಾನಯಾನ ಸಚಿವರ ಸ್ಪಂದನೆ



ಹೊಸ ವರ್ಷದಲ್ಲಿ ನಮ್ಮ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರವಾಗಿ ಎರಡು ವಿಮಾನಗಳು ಸಂಚರಿಸಲಿವೆ ಎಂಬ ಸಂತಸದ ಸುದ್ದಿ ಬಂದಿದ್ದು ಈ ಸೇವೆಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಒದಗಿಸಲಿದೆ. ಇದರ ಜೊತೆಗೆ, ಪುಣೆ ಮತ್ತು ದೆಹಲಿಗೂ ಕೂಡ ಎರಡು ಹೊಸ ನೇರ ವಿಮಾನ ಸೇವೆಗಳು ಆರಂಭವಾಗಲಿವೆ.

ಮಂಗಳೂರಿನಿಂದ ಸಿಂಗಾಪುರದ ಚಾಂಗಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ, ಒತ್ತಾಯ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ, ಗೌರವಾನ್ವಿತ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಈ ಬಗ್ಗೆ ಮನವಿ ಸಲ್ಲಿಸಿದ್ದು


ಇದೀಗ ಈ ಪ್ರಯತ್ನದ ಫಲವಾಗಿ ಮಂಗಳೂರು-ಸಿಂಗಾಪುರದ ನಡುವೆ ನೇರ ವಿಮಾನ ಸೇವೆ ಆರಂಭವಾಗುತ್ತಿರುವುದು ಸಂತಸ ತಂದಿದೆ. ಈ ಬೆಳವಣಿಗೆಯಿಂದ ಇನ್ನಷ್ಟು ವಿಮಾನ ಸಂಸ್ಥೆಗಳಿಗೆ ಈ ಮಾರ್ಗದಲ್ಲಿ ಸೇವೆ ನೀಡುವಂತೆ ಪ್ರೇರೇಪಿಸಲಿದೆ ಜೊತೆಗೆ ವ್ಯಾಪಾರ, ವ್ಯವಹಾರ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 'ಆಕ್ಟ್ ಈಸ್ಟ್ ಪಾಲಿಸಿ' ಅನುಗುಣವಾಗಿ ಭಾರತವನ್ನು ಏಷ್ಯಾ-ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಸಂಪರ್ಕಿಸುವ ಈ ಯೋಜನೆ ಮಹತ್ವದ್ದಾಗಿದೆ.

ಈ ಸಂದರ್ಭದಲ್ಲಿ, ಸಿಂಗಾಪುರದಲ್ಲಿ ನೆಲೆಸಿರುವ ಕರಾವಳಿಗರನ್ನು #BackToOoru ಅಭಿಯಾನದಡಿ ಮಂಗಳೂರಿನಲ್ಲಿ ಹೂಡಿಕೆ ಮಾಡುವತ್ತ ಯೋಚಿಸುವಂತೆ ನಾನು ಭಿನ್ನವಿಸಿಕೊಳ್ಳುತ್ತೇನೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget