ಕಲೆಯ ಮೂಲಕ ಬಾಂಧವ್ಯ ಗಟ್ಟಿಗೊಳಿಸುತ್ತಿದೆ ಇಲ್ಲೊಂದು ಗ್ರಾಮ

ಅನೇಕ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ವಿಭಿನ್ನ ಕಲಾ ಚಟುವಟಿಕೆ



 ಬಹುಪಾಲು ಕೃಷಿಯನ್ನೇ ಬದುಕಿನ ಆಧಾರವಾಗಿರುವಂತ ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪುಟ್ಟ ಗ್ರಾಮ ಕನಕಮಜಲು ಆದರೆ ಈ ಗ್ರಾಮದಲ್ಲಿ ಕಲೆ,ಸಾಹಿತ್ಯ,ವಿಭಿನ್ನ ಅಭಿರುಚಿ ಯ ಕಾರ್ಯಕ್ರಮಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿರುವ ಊರು.ಸ್ಥಳೀಯ ಯುವಕ ಮಂಡಲ ದ ಕ್ರಿಯಾಶೀಲತೆ,ಜನರ ಸಹಭಾಗಿತ್ವ ದಿಂದ ಸಾಧ್ಯವಾಗಿದೆ ಇದೀಗ ಯುವಕ ಮಂಡಲ ಕನಕಮಜಲು ಮತ್ತು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜ್ (ಕಾವಾ) ಮೈಸೂರು ಆಶ್ರಯದಲ್ಲಿ ಸು- ಯೋಗ ನಿಸರ್ಗ ಚಿತ್ರ ಕಲಾ ಶಿಬಿರ ಒಂದು ವಾರ ಕಾಲ ನಡೆಯುತ್ತಿದೆ.ಈ ಗ್ರಾಮದಲ್ಲಿ 5ನೇ ಬಾರಿ ಇಂತಹ ಕಲಾ ಶಿಬಿರ ನಡೆಯುತ್ತಿರುವುದು ವಿಶೇಷ, ದೂರ ಬೇರೆ ಬೇರೆ ಊರಿನಿಂದ ವಿದ್ಯಾರ್ಥಿಗಳು ಅಗಮಿಸುವುದರಿಂದ ಕಲೆಯ ಸಂಗಮಕ್ಕೆ ಸಾಕ್ಷಿಯಾಗಿದೆ. ಪ್ರಸ್ತುತ ಶಿಬಿರದಲ್ಲಿ ಎರಡು ವಿದ್ಯಾರ್ಥಿಗಳು ಸ್ಥಳೀಯರು ಅನ್ನೋದು ವಿಶೇಷ. ಊರಿನ 3,4 ಮಂದಿ ಚಿತ್ರ ಕಲೆಗಾರರಿಗೆ ಕೂಡ ಹೊರ ಹೊಮ್ಮಿದ್ದಾರೆ.ಮುಂಬೈ,ಪುಣೆ ಯಂತಹ ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿ ಗಳು ಈ ಹಿಂದೆ ಆಗಮಿಸಿ ಗ್ರಾಮೀಣ ಬದುಕು ಮತ್ತು ಪದ್ಧತಿಗಳನ್ನು ತಿಳಿದುಕೊಂಡು ಚಿತ್ರದಲ್ಲಿ ಅದನ್ನು ಕಟ್ಟಿಕೊಟ್ಟು ಗ್ರಾಮ ಬದುಕಿಗೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಈ ಹಿಂದೆ ಊರಿನ ಬಸ್ ನಿಲ್ದಾಣ,ಶಾಲೆ, ಆರಾಧನ ಕೇಂದ್ರಗಳ ಗೋಡೆ ಗಳಲ್ಲಿ ಚಿತ್ರವನ್ನು ರಚಿಸಿ ಕಲೆಯನ್ನು ಗ್ರಾಮದ ಜನರಿಗೆ ಪರಿಚಯಿಸುವ ಕಾರ್ಯವನ್ನು ಮಾಡಿದ್ದರು. ಇದೀಗ 5ನೇ ಬಾರಿ ಇಂತ ಶಿಬಿರ ನಡೆಯುತ್ತಿದ್ದು ಮತ್ತೊಮ್ಮೆ ಕಲೆಯ ಪ್ರದರ್ಶನಕ್ಕೆ ಗ್ರಾಮ ಸಾಕ್ಷಿಯಾಗಿದೆ.ಆಧುನಿಕರಣ ಭರಾಟೆ ಯಲ್ಲಿ ಯಕ್ಷಗಾನ, ನಾಟಕ,ರಂಗಭೂಮಿ ಹೀಗೆ ಅನೇಕ ಚಟುವಟಿಕೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜನರನ್ನು ಬೌದ್ಧಿಕವಾಗಿ ಮತ್ತು ಸಾಂಸ್ಕೃತಿಕ ವಾಗಿ ತೆರೆದಿಡುವ ಕಾರ್ಯ ಕನಕಮಜಲು ಅಂತ ಸಣ್ಣ ಗ್ರಾಮದಲ್ಲಿ ನಡೆಯುತ್ತಿರುವುದು ಖುಷಿ ಕೊಡುವ ಸಂಗತಿ.


ಕನಕಮಜಲು ಗ್ರಾಮದಲ್ಲಿ ಕಲೆ,ಸಾಹಿತ್ಯ,ವಿಭಿನ್ನ ಅಭಿರುಚಿ ಯ ಕಾರ್ಯಕ್ರಮಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿದೆ. ಇಲ್ಲಿನ ಕಂಪ್ಲೀಟ್ ವಿಡಿಯೋ  👇🏻👇🏻 

https://youtu.be/W2w-YO_x5Qg?si=qG4b-IxBi_gGGqn3

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget