ಅಡಿಕೆ ಬೆಳೆಗೆ ಹಳದಿ ರೋಗದ ಬಗ್ಗೆ ಸಿಪಿಸಿಆರ್‌ಐ ವಿಜ್ಞಾನಿಗಳು ನಡೆಸಿದ ಸಂಶೋಧನಾ ವರದಿಯ ಮಾಹಿತಿ ಏನು...??

 ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರ ಪ್ರಶ್ನೆ


ಅದಕ್ಕೆ ಸಚಿವರ ಪ್ರತ್ಯುತ್ತರ ಏನಾಗಿತ್ತು..??



ಬೆಳಗಾವಿ: ಅಡಿಕೆ ಬೆಳೆಗೆ ಹಳದಿ ರೋಗದ ಬಗ್ಗೆ ಸಿಪಿಸಿಆರ್‌ಐ ವಿಜ್ಞಾನಿಗಳು ನಡೆಸಿದ ಸಂಶೋಧನಾ ವರದಿಯ ಮಾಹಿತಿ ಏನು. ಅಡಿಕೆ ಬೆಳೆಗೆ ಹಳದಿ ರೋಗಕ್ಕೆ ಸಿಪಿಸಿಆರ್‌ಐ ವಿಟ್ಲದಲ್ಲಿ ಸ್ಥಾಪಿಸಿರುವ ಪ್ರಯೋಗಾಲಯದಿಂದ ರೈತರಿಗೆ ಆಗುತ್ತಿರುವ ಪ್ರಯೋಜನಗಳೇನು ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡ ಅಧಿವೇಶನದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಶ್ನೆ ಕೇಳಿದ್ದಾರೆ. ಶಾಸಕರ ಲಿಖಿತ ಪ್ರಶ್ನಗೆ ಗಣಿ ಮತ್ತುಭೂ ವಿಜ್ಞಾನ, ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನೀಡಿದ ಉತ್ತರ ಈ ರೀತಿ ಇದೆ.


ಅಡಿಕೆ ಬೆಳೆಗೆ ಹಳದಿ ರೋಗಕ್ಕೆ ಸಿಪಿಸಿಆರ್‌ಐ ವಿಟ್ಲದಲ್ಲಿ ಸ್ಥಾಪಿಸಿರುವ ಪ್ರಯೋಗಾಲಯದಿಂದ ಹಳದಿ ಎಲೆ ರೋಗದ ನಿಖರತೆಯನ್ನು ಕಂಡು ಹುಡುಕಲು RNA sequencing PCR ಮತ್ತು RT-PCR ತಂತ್ರಾಂಶಗಳನ್ನು ಅಳವಡಿಸಿಕೊಂಡು ಅಡಿಕೆ ತೋಟಗಳಲ್ಲಿ ವಿವಿಧ ಹಂತಗಳಲ್ಲಿ ರೋಗವನ್ನು ಪತ್ತೆಹಚ್ಚಿ ಹತೋಟಿಗೆ ತರಲು ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ ಸದರಿ ಪ್ರಯೋಗಾಲಯಗಳಲ್ಲಿ ರೈತರ ರೋಗದ ಮಾದರಿ(disease samples) ಗಳನ್ನು ವಿಶ್ಲೇಷಣೆ ಮಾಡಿ ತ್ವರಿತವಾಗಿ ರೋಗದ ನಿಯಂತ್ರಣಕ್ಕೆ ಸಾಧ್ಯವಾಗಲಿದೆ.

ಅಡಿಕೆ ಬೆಳೆಗೆ ಹಳದಿ ರೋಗದ ಬಗ್ಗೆ CPCRI ವಿಜ್ಞಾನಿಗಳ ಸಂಶೋಧನಾ ವರದಿಯ ಮಾಹಿತಿ ಈ ರೀತಿ ಇದೆ. ರೋಗ ರಹಿತ ಅಡಿಕೆಯ ಸಸಿಗಳನ್ನು ಅಂಗಾಂಶ ಕೃಷಿ 3


(Somatic embryogenesis plantlet regeneration) ಮೂಲಕ ಉತ್ಪಾದಿಸಲು ಕಾರ್ಯವಿಧಾನವನ್ನು (Protocal) ಅಭಿವೃದ್ಧಿಪಡಿಸಿರುತ್ತಾರೆ. ರೋಗ ಬಾಧಿತ ಪ್ರದೇಶಗಳಿಂದ ರೋಗ ನಿರೋಧಕ ಸಸಿಗಳನ್ನು ತ್ವರಿತಗತಿಯಲ್ಲಿ ಉತ್ಪಾದಿಸಲು ಅಂಗಾಂಶ ಕೃಷಿ ಪದ್ಧತಿಯ ಕಾರ್ಯವಿಧಾನವನ್ನು (Protocal) ಅಭಿವೃದ್ಧಿ ಪಡಿಸಿರುತ್ತಾರೆ. ಅಂಗಾಂಶ ಪದ್ಧತಿಯ ಮುಖಾಂತರ ಉತ್ಪಾದಿಸಿದ ರೋಗ ನಿರೋಧಕ ಸಸಿಗಳನ್ನು ರೋಗ ಬಾಧಿತ ರೈತರ ತೋಟಗಳಲ್ಲಿ ಬೆಳೆಸಲಾಗುತ್ತಿದ್ದು ಫಲಿತಾಂಶವು ಆಶಾದಾಯಕವಾಗಿದೆ.

ಹಳದಿ ಎಲೆ ರೋಗ ಬಾಧಿತ ಅಡಿಕೆ ತೋಟಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ಶಾಸಕಿ ಭಾಗೀರಥಿ ಮುರುಳ್ಯರವರ ಪ್ರಶ್ನಿಸಿದ ಫುಲ್ ವಿಡಿಯೋ👇🏻👇🏻



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget