ತಮಿಳುನಾಡು: ಇಲ್ಲಿನ ಪ್ರತಿಷ್ಠಿತ ಅಣ್ಣ ವಿಶ್ವವಿದ್ಯಾಲಯ ಅವರಣದಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಡಿಎಂಕೆ(DMK) ಸರ್ಕಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಗಿದೆ. ಈ ಸರ್ಕಾರ ಪತನವಾಗುವವರೆಗೂ ನಾನು ಕಾಲಿಗೆ ಚಪ್ಪಲಿ ಧರಿಸಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಜ್ಞೆ ಮಾಡಿದ್ದಾರೆ.
ಕೊಯಮತ್ತೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು.
ನಮ್ಮ ಮನೆಯ ಅವರಣದಲ್ಲಿಯೇ ನಾಳೆ(ಡಿ.27) ಆರು ಭಾರಿ ಛಾಟಿ ಏಟು ಹೊಡೆಸಿಕೊಳ್ಳುತ್ತೇನೆ. ಅಲ್ಲದೆ, ರಾಜ್ಯದ ಆರು ಪವಿತ್ರ ಕ್ಷೇತ್ರಗಳಿಗೆ ಹೋಗಲು 48 ದಿನಗಳ ಕಾಲ ಉಪವಾಸ ಮಾಡಲಿದ್ದೇನೆ. ಇನ್ನು ಡಿಎಂಕೆ ಸರ್ಕಾರ ಪತನವಾಗುವವರೆಗೂ ನಾನು ಕಾಲಿಗೆ ಚಪ್ಪಲಿ ಮತ್ತು ಬೂಟು ಧರಿಸದೇ ಓಡಾಡುವೆ ಎಂದು ತಿಳಿಸಿದರು.
ಇದು ನಾನು ಸಂತ್ರಸ್ತ ಮತ್ತು ರಾಜ್ಯದ ಜನರಿಗೆ ನ್ಯಾಯ ಕೊಡಿಸುವ ಸಲುವಾಗಿ ಹೀಗೆ ಮಾಡುತ್ತಿದ್ದೇನೆ. ನಾನು ನಮ್ಮ ಕಾರ್ಯಕರ್ತರಿಗೆ ಇದನ್ನೂ ಮಾಡಿ ಎಂದು ಹೇಳಲ್ಲ ಎಂದರು.
19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಹೆಸರು ಮತ್ತು ಅವರ ವಿಳಾಸ ಉದ್ದೇಶಪೂರ್ವಕವಾಗಿ ಬಹಿರಂಗಗೊಳಿಸಿದ್ದಾರೆ ಎಂದು ಸರ್ಕಾರ ಮತ್ತು ಪೊಲೀಸರು ವಿರುದ್ಧ ಹರಿಹಾಯ್ದರು. ಅಲ್ಲದೆ, ಘಟನೆ ನಡೆದ ಸಮಯದಲ್ಲಿ ವಿವಿಯಲ್ಲಿ ಸಿಸಿ ಕ್ಯಾಮರಾಗಳು ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಲೈಂಗಿಕ ದೌರ್ಜನ್ಯದ ಆರೋಪಿಯೊಬ್ಬರು ಡಿಎಂಕೆ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದಾರೆ. ಅವರು ಇದೀಗ ರೌಡಿಶೀಟರ್ ಪಟ್ಟಿಯಲ್ಲಿ ಇಲ್ಲ ಎಂದು ಆರೋಪಿಸಿದರು.
ಪ್ರಕರಣದ ಆರೋಪಿಗಳು ಡಿಎಂಕೆ ಪದಾಧಿಕಾರಿಗಳಿದ್ದಾರೆ ಎಂದು ಹೇಳಿದ ಅಣ್ಣಮಲೈ, 37 ವರ್ಷದ ಮತ್ತೊಬ್ಬ ಆರೋಪಿ ಜ್ಞಾನಶೇಖರ್ ಡಿಎಂಕೆ ಸಂಪರ್ಕದಲ್ಲಿದ್ದಾರೆ ಎಂದು ಅವರ ಪೋಟೋ ಮತ್ತು ಕರಪತ್ರಗಳನ್ನು ಸುದ್ದಿಗೊಷ್ಠಿಯಲ್ಲಿ ಪ್ರದರ್ಶಿಸಿದರು. ಡಿಎಂಕೆ ಸರ್ಕಾರ ದಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂದು ಗಡುಗಿದರು.
Post a Comment