ಕುಸ್ತಿಪಟು WWE ಸೂಪರ್‌ಸ್ಟಾ‌ರ್ ರೇ ಮಿಸ್ಟೀರಿಯೊ ಸೀನಿಯರ್ ನಿಧನ

 


ನವದೆಹಲಿ: WWE ಸೂಪರ್‌ಸ್ಟಾರ್‌ ಮತ್ತು ಹಾಲ್ ಆಫ್ ಫೇಮರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ಖ್ಯಾತ ಮೆಕ್ಸಿಕನ್ ಕುಸ್ತಿಪಟು ರೇ ಮಿಸ್ಟೀರಿಯೊ ಸೀನಿಯ‌ರ್ ಅವರು 66 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬ ಇದೀಗ ದೃಢಪಡಿಸಿದೆ.

ಕುಸ್ತಿ ದಂತಕಥೆ ಎಂದು ಕರೆಕೊಳ್ಳುವ ಇವರ ನಿಜವಾದ ಹೆಸರು ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್, WWE ಸೂಪರ್‌ಸ್ಟಾರ್‌ ಡೊಮಿನಿಕ್ ಮಿಸ್ಟೀರಿಯೊ ಅವರ ದೊಡ್ಡ ಚಿಕ್ಕಪ್ಪ ಮತ್ತು ವರ್ಲ್ಡ್ ಪ್ರೆಸ್ಲಿಂಗ್ ಅಸೋಸಿಯೇಷನ್ ಸೇರಿದಂತೆ ಅನೇಕ ಮೆಕ್ಸಿಕನ್ ಪ್ರಚಾರಗಳಲ್ಲಿ ಭಾಗಿಯಾಗಿದ್ದರು.



1976 ಜನವರಿಯಲ್ಲಿ WWE ಗೆ ಪದಾರ್ಪಣೆ ಮಾಡಿದ ಇತ ವೃತ್ತಿ ಜೀವದುದ್ದಕ್ಕೂ ಪ್ರೋ ಪ್ರೆಸ್ಲಿಂಗ್, ಟಿಜುವಾನ ಪ್ರೆಸ್ಲಿಂಗ್ ಮತ್ತು ವರ್ಲ್ಡ್ ಪ್ರೆಸ್ಲಿಂಗ್‌ಗಳಲ್ಲಿಯೇ ಕೊನೆಯವರೆಗೂ ಭಾಗವಹಿಸಿದ್ದಾರೆ. ಅವರು WWWA ವರ್ಲ್ಡ್ ಜೂನಿಯರ್ ಲೈಟ್ ಹೆವಿವೇಟ್ ಚಾಂಪಿಯನ್‌ಶಿಪ್‌ ಅನ್ನು ಒಮ್ಮೆ ಗೆದ್ದಿದ್ದಾರೆ.

ರೇ ಮಿಸ್ಟೀರಿಯೊ ಜೂನಿಯರ್ ಅವರ ತಂದೆ ಮತ್ತು ಡೊಮಿನಿಕ್ ಅವರ ಅಜ್ಜ ರಾಬರ್ಟೊ ಗುಟೈರೆಜ್ ಕೂಡ 76 ನೇ ವಯಸ್ಸಿನಲ್ಲಿ ಇದೇ ನವೆಂಬರ್ 17 ರಂದು ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ಕೆಲವೇ ವಾರಗಳ ನಂತರ ಈ ದುರಂತ ಸುದ್ದಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಸಂತಾಪ ಮತ್ತು ಪ್ರೀತಿಯ ನೆನಪುಗಳನ್ನು ಸಹ ವ್ಯಕ್ತಪಡಿಸಿದ್ದಾರೆ,

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget