2025

ಅತೀ ಶೀಘ್ರವಾಗಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ


ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಮಾನವೀಯ ನೆಲೆಯಲ್ಲಿ, ಕಾನೂನಾತ್ಮಕವಾಗಿ ಮತ್ತೆ ಅವಕಾಶ ನೀಡುವಂತೆ ಸಂಸದ ಬ್ರಿಜೇಶ್ ಚೌಟರಿಂದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.



 ಅದೆಷ್ಟೋ ವರುಷಗಳಿಂದ ಬೀದಿ ಬದಿ ವ್ಯಾಪಾರ ನಂಬಿ ಜೀವನ ಸಾಗಿಸುತಿದ್ದ ಸುಬ್ರಮಣ್ಯ ಪರಿಸರದ ಕೆಲ ನಿವಾಸಿಗಳಿಗೆ ಅಗಂಡಿ ತೆರವು ಬಳಿಕ ಜೀವನ ನಡೆಸಲು ಕಷ್ಟವಾಗಿತ್ತು. ಆದ್ದರಿಂದ ಕಡಬಕ್ಕೆ ಜ.13 ರಂದು ಆಗಮಿಸಿದ್ದ ಸಂಸದರನ್ನು ಭೇಟಿ ಮಾಡಿದ ಬೀದಿ ಬದಿ ವ್ಯಾಪಾರಿಗಳು ಮತ್ತೆ ಅಂಗಡಿ ತೆರಯಲು ಅವಕಾಶ ನೀಡುವಂತೆ ಮನವಿ ಅರ್ಪಿಸಿದ್ದರು. ಮನವಿಗೆ ಸ್ಪಂದಿಸಿದ ಸಂಸದರು ಜಿಲ್ಲಾಧಿಕಾರಿಗಳಿಗೆ ಮತ್ತು ಪುತ್ತೂರು ಉಪ ವಿಭಾಗ ಅಧಿಕಾರಿಯೊಂದಿಗೆ ಚರ್ಚಿಸಿ, ಅತೀ ಶೀಘ್ರವಾಗಿ ಬೀದಿ ವ್ಯಾಪಾರಿಗಳಿಗೆ, ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿ, ಅಧಿಕಾರಿಗಳಿಗೆ ಸೂಚಿಸಿದರು.

ಸಂಕಷ್ಟದಲ್ಲಿ ಇದ್ದ ಬೀದಿ ವ್ಯಾಪಾರಿಗಳ ಸ್ಪಂದನೆಗೆ ನೆರವಾದ, ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



 


ಮುಂಬೈ: 'ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂವಿಧಾನ ರಚನೆಕಾರರಲ್ಲ. ರಾಜಕೀಯ ಲಾಭಕ್ಕಾಗಿ ಶ್ರೀರಾಮನನ್ನು ಬಳಸಿಕೊಳ್ಳುವುದು ಸರಿಯಲ್ಲ' ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

“ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಗೊಂಡ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು' ಎಂಬ ಭಾಗವತ್ ಹೇಳಿಕೆಗೆ ರಾವುತ್‌ ಪ್ರತಿಕ್ರಿಯೆ ನೀಡಿದ್ದಾರೆ.


“ಆರ್‌ಎಸ್‌ಎಸ್‌ ಮುಖ್ಯಸ್ಥರು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಆದರೆ, ಅವರು ಸಂವಿಧಾನ ರಚನೆಕಾರರಲ್ಲ. ಅವರು ಈ ದೇಶದ ಕಾನೂನನ್ನು ರಚಿಸುವುದಕ್ಕಾಗಲಿ ಅಥವಾ ಬದಲಿಸುವುದಕ್ಕಾಗಲಿ ಆಗುವುದಿಲ್ಲ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಕಾರ್ಯಕ್ಕೆ ಎಲ್ಲರು ಕೊಡುಗೆ ನೀಡಿದ್ದಾರೆ. ಆದರೆ, ಅದೇ ದಿನ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ ಎನ್ನುವುದು ಅತಿಶಯೋಕ್ತಿ' ಎಂದು ರಾವುತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

'1947ರಲ್ಲಿಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ರಾಜಕೀಯ ಲಾಭಕ್ಕಾಗಿ ರಾಮನನ್ನು ಬಳಸಿಕೊಳ್ಳುವುದು ಸರಿಯಲ್ಲ' ಎಂದಿದ್ದಾರೆ.'ಸಾವಿರಾರು ವರ್ಷಗಳ ಹಿಂದೆಯೇ ಈ ನೆಲದಲ್ಲಿ ಶ್ರೀರಾಮ ನೆಲೆಸಿದ್ದಾನೆ. ಅವನಿಗಾಗಿ ನಾವು ಹೋರಾಟ ನಡೆಸಿದ್ದೇವೆ ಮತ್ತು ಆ ಹೋರಾಟವನ್ನು ಮುಂದುವರಿಸುತ್ತೇವೆ. ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದರಿಂದ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕುವುದಿಲ್ಲ' ಎಂದು ಹೇಳಿದರು.


 


ಶಬರಿಮಲೆ: ಇಲ್ಲಿನ ಪ್ರಸಿದ್ಧ ಅಯ್ಯಪ್ಪ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಅಂಗವಾಗಿ ಲಕ್ಷಾಂತರ ಭಕ್ತಾದಿಗಳು ಪೂಜೆ ಸಲ್ಲಿಸಿ, ಮಕರಜ್ಯೋತಿಯನ್ನು ಕಣ್ಣುಂಬಿಕೊಂಡರು.

ಸಂಜೆ ದೀಪಾರಾಧನೆ ಬಳಿಕ ಪೊನ್ನಂಬಲ ಮೇಡು ಬೆಟ್ಟದ ಪೂರ್ವ ತುದಿಯಲ್ಲಿ 'ಮಕರವಿಳಕ್ಕು' ಜ್ಯೋತಿ ಕಾಣಿಸಿಕೊಂಡಿತು. ಲಕ್ಷಾಂತರ ಭಕ್ತರು ಒಕ್ಕೊರಲಿನಿಂದ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಭಕ್ತಿಯಿಂದ ಜಪಿಸಿದರು.

ಮಕರಜ್ಯೋತಿ ದರ್ಶನಕ್ಕಾಗಿ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಕಳೆದ ಕೆಲ ದಿನಗಳಿಂದ ದೇಗುಲದಲ್ಲಿಯೇ ಉಳಿದುಕೊಂಡಿದ್ದರು.

ದೀಪಾರಾಧನೆಗೆ ಮೊದಲು ಸಂಜೆ 6 ಗಂಟೆಯ ಹೊತ್ತಿಗೆ ಪಾಂಡಲಂ ಅರಮನೆಯಿಂದ ತಿರುವಾಭರಣ ಮೆರವಣಿಗೆ ಸನ್ನಿಧಾನಕ್ಕೆ ತಲುಪಿತು. ಪ್ರತಿ ವರ್ಷ ದೇಗುಲಕ್ಕೆ ಸುಮಾರು 5 ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಎಂದು ತಿರುವನಾಂಕೂರು ದೇವಸ್ಥಾನ ಮಂಡಳಿ ತಿಳಿಸಿದೆ.ಜನವರಿ 20ರವರೆಗೆ ಅಯ್ಯಪ್ಪ ದೇಗುಲವನ್ನು ತೆರೆದಿರಲಾಗಿರುತ್ತದೆ.

 ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ಚಿರಂಜೀವಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.



ನವದೆಹಲಿ: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಕಳೆಗಟ್ಟಿದೆ. ವಿವಿಧ ರಾಜ್ಯಗಳಲ್ಲಿ ಇದನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಪೊಂಗಲ್ ಹಬ್ಬವನ್ನು ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಅದರಂತೆ ಈ ಬಾರಿಯೂ ಸೆಲೆಬ್ರಿಟಿಗಳು ಪೊಂಗಲ್ ಅನ್ನು ಬಹಳ ಆಡಂಬರದಿಂದ ಆಚರಿಸಿದ್ದಾರೆ.


ಸೆಲೆಬ್ರಿಟಿಗಳ ಪೈಕಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರ ಪೊಂಗಲ್ ಆಚರಣೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಹೈಲೆಟ್​ ಆಗಿದೆ. ಏಕೆಂದರೆ, ಈ ಬಾರಿ ಚಿರಂಜೀವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಬ್ಬ ಆಚರಿಸಿದ್ದಾರೆ. ಫೋಟೋ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಸೌತ್​ ಸಿನಿಮಾ ಇಂಡಸ್ಟ್ರಿಯ ಮೆಗಾಸ್ಟಾರ್ ಚಿರಂಜೀವಿ ಅವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ನಿವಾಸದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪೊಂಗಲ್ ಆಚರಿಸಿದ್ದಾರೆ. ಈ ಹಬ್ಬದ ಆಚರಣೆಯಲ್ಲಿ ಭಾರತದ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ. ಸಿಂಧು ಕೂಡಾ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಕಳೆದ ದಿನ ನಾನು ಅತ್ಯಂತ ಸ್ಮರಣೀಯ ಸಂಕ್ರಾಂತಿ ಮತ್ತು ಪೊಂಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಹಬ್ಬವು ಒಗ್ಗಟ್ಟಿನ ಬಂಧಗಳನ್ನು ಬಲಪಡಿಸಲಿ, ಸಮೃದ್ಧಿಯನ್ನು ತರಲಿ ಜೊತೆಗೆ ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳನ್ನು ಖುಷಿ ಮತ್ತು ಕೃತಜ್ಞತೆಯಿಂದ ಆಚರಿಸಲು ನಮಗೆ ಸ್ಫೂರ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್​​ನಲ್ಲಿ, ನನ್ನ ಸಚಿವ ಸಹೋದ್ಯೋಗಿ ಜಿ.ಕಿಶನ್ ರೆಡ್ಡಿ ಗಾರು ನಿವಾಸದಲ್ಲಿ ನಡೆದ ಸಂಕ್ರಾಂತಿ ಮತ್ತು ಪೊಂಗಲ್ ಆಚರಣೆಗಳಲ್ಲಿ ಭಾಗವಹಿಸಿದ್ದೆ. ಅತ್ಯುತ್ತಮ ಸಾಂಸ್ಕೃತಿಕ ಸಮಾರಂಭಕ್ಕೆ ಸಾಕ್ಷಿಯಾದೆ. ಭಾರತದಾದ್ಯಂತ ಜನರು ಸಂಕ್ರಾಂತಿ ಮತ್ತು ಪೊಂಗಲ್ ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಇದು ನಮ್ಮ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಕೃತಜ್ಞತೆ, ಸಮೃದ್ಧಿಯ ಆಚರಣೆ ಆಗಿದೆ. ಸಂಕ್ರಾಂತಿ ಮತ್ತು ಪೊಂಗಲ್‌ಗೆ ನನ್ನ ಶುಭಾಶಯಗಳು. ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಮುಂದೆ ಸಮೃದ್ಧ ಸುಗ್ಗಿಯ ಕಾಲ ಬರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಸಿನಿಮಾ ಬಗ್ಗೆ ಗಮನಿಸೋದಾದ್ರೆ, ಬಹುಬೇಡಿಕೆ ನಟ ಚಿರಂಜೀವಿ ಶೀಘ್ರದಲ್ಲೇ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು, ಅವರು 2023ರಲ್ಲಿ ವಾಲ್ಟೈರ್ ವೀರಯ್ಯ ಮತ್ತು ಭೋಲಾ ಶಂಕರ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಅವರ ಮುಂಬರುವ ಚಿತ್ರಗಳಲ್ಲಿ ವಿಶ್ವಂಭರ ಕೂಡಾ ಒಂದು.


 ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಆರ್.​ಬಿ. ತಿಮ್ಮಾಪುರ ಹೇಳಿದ್ದಾರೆ.



ಹುಬ್ಬಳ್ಳಿ: ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಜೋರಾಗಿದ್ದು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಡೆಯಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸುರ್ಜೇವಾಲಾ, ಎಲ್ಲರೂ ಶಿಸ್ತು ಅನುಸರಿಸಬೇಕು. ಯಾರೂ ಶಿಸ್ತು ಉಲ್ಲಂಘಿಸುವಂತಿಲ್ಲ ಎಂದು ಖಡಕ್​​​ ಸೂಚನೆಯನ್ನು ಕೊಟ್ಟಿದ್ದರು. ಇಷ್ಟಾದರೂ ಸಚಿವ ಆರ್.​ಬಿ. ತಿಮ್ಮಾಪುರ, ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು? ಎಂದು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದಲಿತರು ಯಾಕೆ ಸಿಎಂ ಆಗಬಾರದು?. ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತಾರೆ. ನನಗೆ ಅಷ್ಟು ಶಕ್ತಿ ಇದೆಯೋ ಇಲ್ವೋ, ಸಿಎಲ್‌ಪಿ ಅಲ್ಲಿ ನನ್ನ ಒಪ್ಪುತ್ತಾರೋ ‌ ಇಲ್ವೋ. ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ" ಎಂದು ಹೇಳಿದರು.

"ನಾನು ದಲಿತ , ನಾನು ಯಾಕೆ ಆಗಬಾರದು?. ದಲಿತರೂ ಸಿಎಂ ಆಗಬೇಕು, ಮತ್ತೊಬ್ಬರೂ ಸಿಎಂ ಆಗಬೇಕು. ಆದರೆ ಇದ್ಯಾವುದೂ ಬೆಳವಣಿಗೆ ಸದ್ಯಕ್ಕೆ ಇಲ್ಲ. ಸಿಎಲ್‌ಪಿಯಲ್ಲಿ ಎಲ್ಲವೂ ತೀರ್ಮಾನ ಆಗಬೇಕು. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ. ನಮ್ಮಲ್ಲಿ ಅಂತಹದ್ದೇನೂ ಇಲ್ಲ ಎಂದ ಅವರು, ದಲಿತ ಶಾಸಕರ ಡಿನ್ನರ್ ಸಭೆ ರದ್ದಾಗಿಲ್ಲ, ಮುಂದೂಡಿದ್ದೇವೆ" ಎಂದು ತಿಳಿಸಿದರು.


ಹಸುಗಳ ಕೆಚ್ಚಲು ಕೊಯ್ದಿದ್ದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು, "ದಲಿತರ ಕೊಲೆಯಾಗುತ್ತದೆ. ಆಗ ಯಾರಾದರೂ ಪ್ರತಿಭಟನೆ ಮಾಡಿದ್ದಾರಾ?. ದುಷ್ಟರನ್ನು ಬಲಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ" ಎಂದರು.

ಉತ್ತರ ಕರ್ನಾಟಕದವರು ಸಿಎಂ ಆದ್ರೆ ಸ್ವಾಗತ - ಎಸ್.​ಆರ್. ಪಾಟೀಲ್: ಮತ್ತೊಂದೆಡೆ, ಕಾಂಗ್ರೆಸ್ ಹಿರಿಯ ಮುಖಂಡ ಎಸ್.​ಆರ್.​ ಪಾಟೀಲ್ ಮಾತನಾಡಿ, "ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನದ ಬಗ್ಗೆ ಆಸೆ ಇರುತ್ತದೆ. ಯಾರು ಕೂಡ ಸನ್ಯಾಸಿಗಳಲ್ಲ. ಅವಕಾಶ ಮಾಡಿಕೊಡಿ ಅಂತ ಸಹಜವಾಗಿ ಎಲ್ಲರೂ ಕೇಳುತ್ತಾರೆ" ಎಂದು ಹೇಳಿದರು.


ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ್ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, "ಪಕ್ಷದ ಶಿಸ್ತು ಉಲ್ಲಂಘನೆ ಆದ್ರೆ ಪಕ್ಷ ಶಿಥಿಲ ಆದಂತಾಗುತ್ತೆ. ಹೀಗಾಗಿ ಮಾಧ್ಯಮದ ಎದುರು ಹೋಗಬೇಡಿ ಅಂದಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಮ್ಮ ವಿಚಾರಗಳನ್ನು ಹೇಳಬಹುದಲ್ಲ, ಅದರ ಬದಲು ಮಾಧ್ಯಮಗಳ ಮುಂದೆ ಹೋಗಿ ಹೇಳಿದ್ರೆ ಸಮಸ್ಯೆ ಬಗೆ ಹರಿಯೋದಿಲ್ಲ. ಆ ದೃಷ್ಟಿಯಿಂದ ಸುಜೇವಾಲಾ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ" ಎಂದರು.


ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿ, "ರಾಜಕೀಯದಲ್ಲಿ ಕಾರ್ಯಕರ್ತರು ಶಾಸಕರಾಗಬೇಕು ಅಂತಾರೆ. ಶಾಸಕರು ಮಂತ್ರಿ ಆಗಬೇಕು, ಮಂತ್ರಿಗಳು ಸಿಎಂ ಆಗಬೇಕು ಅಂತಾರೆ. ಇದು ನ್ಯಾಚುರಲ್, ಎಲ್ಲರೂ ಆಕಾಂಕ್ಷಿಗಳೇ. ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಬೇಕು ಅನ್ನೋದು ಎಲ್ಲಿ ಚರ್ಚೆ ಆಗಿದೆ?. ಜನರ ಕಣ್ಣೀರು ಒರೆಸಲು ರಾಜಕಾರಣಕ್ಕೆ ಬರಬೇಕು .ಈಗಿನ ರಾಜಕಾರಣ ಯಾವ ಮಟ್ಟಕ್ಕೆ ಬಂದಿದೆ ಅಂತ ಹೇಳಿದ್ರೆ ನನ್ನ ಬಾಯಿ ಹೊಲಸು ಆಗುತ್ತೆ" ಎಂದು ಹೇಳಿದರು.

 



ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರಾವಳಿಯ ಉತ್ಸವಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ್ದಾರೆ. 


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ನವ ಭಾರತದ ಧ್ಯೇಯ 'ವೋಕಲ್ ಫಾರ್ ಲೋಕಲ್ ' ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಇಲ್ಲಿನ ವಸ್ತುಪ್ರದರ್ಶನ ಮಳಿಗೆಗಳಿಗೆ ತೆರಳಿ ಕರಾವಳಿಯ ವೈವಿಧ್ಯತೆಗಳನ್ನು ಪ್ರತಿಬಿಂಬಿಸುವ ಸ್ವ ಉದ್ದಿಮೆ, ಗುಡಿಕೈಗಾರಿಕೆ ಹಾಗೂ ಇತರ ವ್ಯಾಪಾರಸ್ಥರಿಗೆ ಪ್ರೋತ್ಸಾಹಕ ಮಾತುಗಳನ್ನಾಡಿದರು. 



ಈ ವೇಳೆ ಕರಕುಶಕರ್ಮಿ, ಸ್ವ ಉದ್ಯಮಿ, ವ್ಯಾಪಾರಸ್ಥರ ಸಬಲೀಕರಣಗೊಳಿಸುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆಯು ಅರಿವು ಮೂಡಿಸಿದರು.

 


ಹಿಂದೂ ಗ್ರಂಥಗಳಲ್ಲಿ, ಕುಂಭಮೇಳವನ್ನು ಅಮರತ್ವದ ಜಾತ್ರೆ' ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ತಮ್ಮ ಆತ್ಮವನ್ನು ಶುದ್ದೀಕರಿಸಲು ಈ ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಲು ಬರುತ್ತಾರೆ, ಪ್ರಪಂಚದಾದ್ಯಂತದ ಸಂತರು ಮತ್ತು ಭಕ್ತರು ನಂಬಿಕೆಯ ಸ್ನಾನ ಮಾಡುತ್ತಾರೆ. ಕುಂಭಮೇಳದಲ್ಲಿ ಅಮೃತಾ ಸ್ನಾನಕ್ಕೆ ವಿಶೇಷ ಮಹತ್ವವಿದೆ.

ಮಹಾಕುಂಭದ ಮೊದಲ ಅಮೃತ ಸ್ನಾನ ಅಥವಾ ಶಾಹಿ ಸ್ನಾನವನ್ನು ಇಂದು ಅಂದರೆ ಜನವರಿ 14 ರಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಡೆಯುತ್ತದೆ. ಕುಂಭದಲ್ಲಿ ಈ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ನಾಗಾ ಸಾಧುಗಳು ಮತ್ತು ಇತರ ಸಂತರು ಅಮೃತ ಸ್ನಾನ ಮಾಡುತ್ತಾರೆ.

ಮಹಾಕುಂಭದ ಮೊದಲ ರಾಜ ಸ್ನಾನ ಇಂದು ಅಂದರೆ ಜನವರಿ 14ರ ಇಂದು ನಡೆಯಲಿದೆ. ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಮಕರ ರಾಶಿಗೆ ತೆರಳುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಗಂಗಾ ನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಫಲ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಅಲ್ಲದೆ, ಈ ದಿನ ಪೂಜೆ ಪುನಸ್ಕಾರ ಮತ್ತು ಎಳ್ಳು, ಬೆಲ್ಲ ದಾನ ಮಾಡುವುದು ತುಂಬಾ ಒಳ್ಳೆಯದು.

ಮಹಾಕುಂಭದ ಎರಡನೇ ಅಮೃತ ಸ್ನಾನವು 29 ಜನವರಿ 2025 ರಂದು ನಡೆಯಲಿದೆ. ಈ ದಿನ ಮೌನಿ ಅಮವಾಸ್ಯೆ ಬರುತ್ತದೆ. ಹಿಂದೂ ಧರ್ಮದಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಮೌನಿ ಅಮವಾಸ್ಯೆಯಂದು ಸ್ನಾನ, ದಾನ, ಮೌನ ವ್ರತ ಮಾಡುವ ಸಂಪ್ರದಾಯವಿದೆ. ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ಸ್ನಾನ ಮಾಡುವುದರಿಂದ ದುಪಟ್ಟು ಹೆಚ್ಚು ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ.


ಮಹಾಕುಂಭದ ಮೂರನೇ ಮತ್ತು ಕೊನೆಯ ಅಮೃತ ಸ್ನಾನವು 3 ಫೆಬ್ರವರಿ 2025 ರಂದು ನಡೆಯಲಿದೆ. ಈ ದಿನ ವಸಂತ ಪಂಚಮಿ ಹಬ್ಬ ಬರುತ್ತಿದೆ. ವಸಂತ ಪಂಚಮಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಪೂಜೆ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ವಸಂತ ಪಂಚಮಿಯ ದಿನದಂದು ಜ್ಞಾನದ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ.

• ಅಮೃತ ಸ್ನಾನದ ದಿನದಂದು ನಾಗಾ ಸಾಧುಗಳಿಗೆ ಮೊದಲು ಸ್ನಾನ ಮಾಡುವ ಹಕ್ಕಿದೆ. ಇದರ ನಂತರ, ಇತರ ಪ್ರಮುಖ ಋಷಿಗಳು ಮತ್ತು ಸಂತರು ಸ್ನಾನ ಮಾಡುತ್ತಾರೆ.


• ಅಮೃತ ಸ್ನಾನದ ದಿನದಂದು ಋಷಿಗಳು, ಸಂತರು ಮತ್ತು ನಾಗಬಾಬಾ ಸ್ನಾನ ಮಾಡಿದ ನಂತರವೇ ಸ್ನಾನ ಮಾಡಬೇಕು, ಇಲ್ಲದಿದ್ದರೆ ಕುಂಭಸ್ನಾನದ ಫಲಿತಾಂಶವನ್ನು ಲಭಿಸುವುದಿಲ್ಲ ಎಂಬ ನಂಬಿಕೆ.


• ನೀವು ಅಮೃತ ಸ್ನಾನದ ದಿನದಂದು ಮಹಾಕುಂಭದಲ್ಲಿ ಸ್ನಾನ ಮಾಡಲು ಹೋದರೆ, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಗಂಗಾ ಸ್ನಾನ ಮಾಡುವಾಗ ಸೋಪು ಮತ್ತು ಶಾಂಪೂ ಬಳಸಬಾರದು.


• ಮಹಾಕುಂಭ ಸ್ನಾನದ ನಂತರ, ಮಲಗಿರುವ ಹನುಮಂತ ಮತ್ತು ಸಂಗಮ ದಡದಲ್ಲಿರುವ ಅಕ್ಷಯ ವತ್ ದೇವಾಲಯಕ್ಕೆ ಭೇಟಿ ನೀಡಬೇಕು.


• ಮಹಾಕುಂಭದಲ್ಲಿ ಅಮೃತ ಸ್ನಾನ ಮಾಡಿದ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ಅನ್ನ, ಹಣ, ವಸ್ತ್ರ, ಎಳ್ಳು ಇತ್ಯಾದಿಗಳನ್ನು ದಾನ ಮಾಡಬೇಕು.

ಮಹಾಕುಂಭದ ಇತಿಹಾಸ ಬಹಳ ಹಳೆಯದು. ಕೆಲವು ಗ್ರಂಥಗಳ ಪ್ರಕಾರ, ಮೊದಲ ಕುಂಭಮೇಳವನ್ನು ಸತ್ಯಯುಗದಲ್ಲಿ ನಡೆಯಿತು ಎಂದು ನಂಬಲಾಗಿದೆ. ಶಂಕರಾಚಾರ್ಯರಿಂದ ಪ್ರಾರಂಭವಾಯಿತು. ಸಮುದ್ರ ಮಂಥನದ ಉದ್ಯಾನದಲ್ಲಿ ಕುಂಭಮೇಳವನ್ನು ಪ್ರಾರಂಭಿಸಲಾಯಿತು ಎಂದು ಕೆಲವರು ನಂಬುತ್ತಾರೆ. ಈ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗಿಲ್ಲ. ವಿದ್ವಾಂಸರ ಪ್ರಕಾರ, ಕುಂಭದ ಸಂಪ್ರದಾಯವು ಸಾವಿರಾರು ವರ್ಷಗಳ ಹಿಂದಿನದು. ಮಹಾಕುಂಭದ ಐತಿಹಾಸಿಕ ಉಲ್ಲೇಖವು ಪ್ರಾಚೀನ ಶಾಸನಗಳಲ್ಲಿಯೂ ಕಂಡುಬರುತ್ತದೆ. ಕ್ರಿಸ್ತಪೂರ್ವ 600 ರಲ್ಲಿ ಬೌದ್ಧ ಬರಹಗಳಲ್ಲಿ ನದಿ ಜಾತ್ರೆಗಳ ಉಪಸ್ಥಿತಿಯ ಪುರಾವೆಗಳಿವೆ.


ಮಂಗಳೂರು: ಸವಣೂರು, ಸುಬ್ರಹ್ಮಣ್ಯ,ನೆಲ್ಯಾಡಿ ಮತ್ತು ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವುದಕ್ಕೆ ಜಾಗ ಗುರುತಿಸುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಪತ್ರ ಬಂದಿರುವ ಹಿನ್ನಲೆಯಲ್ಲಿ ಒಂದು ವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಡಬ ತಾಲೂಕು ತಹಸೀಲ್ದಾರ್ಗೆ ಸೂಚನೆ ನೀಡಿದ್ದಾರೆ.



ಕಡಬ ತಾಲೂಕು ಕಚೇರಿಯಲ್ಲಿ ಜನವರಿ 13 ರಂದು ನಡೆದ ಸಾರ್ವಜನಿಕರ ಭೇಟಿ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕುಸುಮ್ ಯೋಜನೆಯಡಿ ದೇಶದೆಲ್ಲೆಡೆ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಿ ಗ್ರೀನ್ ಎನರ್ಜಿಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ಸವಣೂರು, ಸುಬ್ರಮಣ್ಯ ನೆಲ್ಯಾಡಿ ಮತ್ತು ಕಡಬದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಜಾಗ ಗುರುತಿಸುವಂತೆ ಸಚಿವಾಲಯದಿಂದ ಮೆಸ್ಕಾಂಗೆ ಪತ್ರ ಬಂದಿದೆ. ಹೀಗಾಗಿ, ಒಂದು ವಾರದೊಳಗೆ ಕಡಬ ತಾಲೂಕು ವ್ಯಾಪ್ತಿಯಲ್ಲಿ ಪಿಎಂ ಕುಸುಮ್ ಸೋಲಾರ್ ಪಾರ್ಕ್ ಸ್ಥಾಪನೆಗೆ ಸೂಕ್ತ ಸ್ಥಳಾವಕಾಶದ ಬಗ್ಗೆ ಪರಿಶೀಲಿಸಿ ಅದರ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡುವಂತೆ ಸಂಸದರು ತಹಶಿಲ್ದಾರರಿಗೆ ಸೂಚಿಸಿದ್ದಾರೆ. 



ಕೋಡಿಂಬಾಳ ರೈಲು ಅಭಿವೃದ್ಧಿಯ ಭರವಸೆ


ಸಂಸದರು ತಾಲೂಕಿನ ಜನತೆಯ ಕುಂದು-ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದ ವೇಳೆ, ಕಡಬಕ ತಾಲೂಕಿನ ಕೋಡಿಂಬಾಳದ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಮನವಿ ನೀಡಿದ್ದಾರೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಂಸದರು, ಸಂಬಂಧಪಟ್ಟವರ ಜತೆಗೆ ಚರ್ಚಿಸಿ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.



ಸಂಸದರ ಅಹವಾಲು ಸ್ವೀಕರಿಸುವ ಸಂಧರ್ಭದಲ್ಲಿ ಮಿನಿ ವಿಧಾನ ಸೌದದಲ್ಲಿ ಜನಜಂಗುಲಿ ನೆರೆದಿತ್ತು.ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಜನರನ್ನು ಅಲೆದಾಡಿಸದಂತೆ ಇದೇ ಸಂಧರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಬಿ.ಜೆ.ಪಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ,ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಪ್ರದಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಬಿ.ಜೆ.ಪಿ ಪ್ರಮುಖರಾದ ಪುಲಸ್ತ್ಯ ರೈ,ಪ್ರಕಾಶ್ ಎನ್.ಕೆ,ಮಧುಸೂದನ್ ಕೊಂಬಾರು,ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಸುರೇಶ್ ದೆಂತಾರು,ರಮೇಶ ಕಲ್ಪುರೆ,ಆಶೋಕ್ ನೆಕ್ಕರೆ,ವಾಡ್ಯಪ್ಪ ಗೌಡ,ಸದಾಶಿವ ಶೆಟ್ಟಿ ಮಾರಂಗ, ಲಕ್ಷೀಶ ಪೆಲತ್ತಾರು,ಸೇರಿದಂತೆ ಹಲವು ಮಂದಿ ಬಿ.ಜೆ.ಪಿ ಪ್ರಮುಖರು,ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 


ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಎಷ್ಟು ಹೊತ್ತಿಗೆ? ಎಂಬ ಕಾತುರ ನಿಮಗಿದೆಯಲ್ಲವೇ ಸಂಪೂರ್ಣ ಆರ್ಟಿಕಲ್ ಓದಿರಿ..

 ಮಂಡಲ ಪೂಜೆ ಆರಂಭವಾದಾಗಿನಿಂದ ಶಬರಿಮಲೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಕರವಿಳಕ್ಕು ಪೂಜೆಗಾಗಿ ದೇವಾಲಯವನ್ನು ತೆರೆಯಲಾಗಿದ್ದು, ಜನವರಿ 9 ರಾತ್ರಿಯಿಂದ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ.

ಅಯ್ಯಪ್ಪ ಸನ್ನಿಧಿ ಶಬರಿಮಲೆಯಲ್ಲಿ, ಈ ವರ್ಷದ ಮಂಡಲ ಮತ್ತು ಮಕರ ದೀಪ ಪೂಜೆಯ ಋತುವು ನವೆಂಬರ್ 16, 2024 ರಂದು ಪ್ರಾರಂಭವಾಗಿದೆ. ಇದರ ನಂತರ, ಮಂಡಲ ಪೂಜೆಯ ಅವಧಿಯ ಪ್ರಮುಖ ಕಾರ್ಯಕ್ರಮವೆಂದರೆ ಡಿಸೆಂಬರ್ 25 ರಂದು ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಮಹಾ ದೀಪಾರಾಧನೆ.

ಮಹಾ ದೀಪಾರಾಧನೆ ನಂತರ, ಮರುದಿನ (ಡಿಸೆಂಬರ್ 26), ಅಯ್ಯಪ್ಪ ಸ್ವಾಮಿಗೆ ಮುಖ್ಯ ಮಂಡಲ ಪೂಜೆಯನ್ನು ಘಂಟಾಘೋಷ ಮತ್ತು ಭಕ್ತಿ ಮಂತ್ರಗಳೊಂದಿಗೆ ನಡೆಸಲಾಗಿತ್ತು. ಚಿನ್ನದ ನಿಲುವಂಗಿಯಲ್ಲಿ ಹೊಳೆಯುತ್ತಿದ್ದ ಅಯ್ಯಪ್ಪ ಸ್ವಾಮಿಯ ದರ್ಶನದ ನಂತರ, ಆ ರಾತ್ರಿ 11 ಗಂಟೆಗೆ ಹರಿವರಾಸನಂ ಗೀತೆಯನ್ನು ಹಾಡುವುದರೊಂದಿಗೆ ಗುಡಿಯನ್ನು ಮುಚ್ಚಲಾಯಿತು. ಇದರೊಂದಿಗೆ ನವೆಂಬರ್ 16 ರಂದು ಪ್ರಾರಂಭವಾದ 41 ದಿನಗಳ ಮಂಡಲ ಪೂಜಾ ಋತುವು ಕೊನೆಗೊಂಡಿತ್ತು.

ಶಬರಿಮಲೆ ಮಕರ ಜ್ಯೋತಿ:ಇದಾದ ನಂತರ ಡಿಸೆಂಬರ್ 30 ರಂದು ಮಕರವಿಳಕ್ಕು ಪೂಜೆಗೆ ಬಾಗಿಲು ತೆರೆಯಲಾಗಿದೆ. ಜನವರಿ 14, 2025ರ ಸಂಜೆ, ಅಯ್ಯಪ್ಪ ಸ್ವಾಮಿಗೆ ಶಬರಿಮಲೆಯ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿ ರೂಪದಲ್ಲಿ ದರ್ಶನ ನೀಡಲಿದ್ದಾರೆ. ಮಕರ ಜ್ಯೋತಿ ದರ್ಶನದ ನಂತರ, ಜನವರಿ 19 ರವರೆಗೆ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ರಾಜ ರೂಪದ ದರ್ಶನಕ್ಕೆ ಅವಕಾಶವಿರುತ್ತದೆ. ಜನವರಿ 20 ರಂದು, ಪಂದಳ ಮಹಾರಾಜರ ಕುಟುಂಬಕ್ಕೆ ವಿಶೇಷ ಪೂಜೆ ಮತ್ತು ದರ್ಶನವನ್ನು ನೀಡಲಾಗುತ್ತದೆ. ಅದೇ ರಾತ್ರಿ ದೇವಾಲಯವನ್ನು ಮುಚ್ಚಲಾಗುತ್ತದೆ. ನಂತರ, ಶಬರಿಮಲೆ ದೇವಾಲಯದ ಕೀಲಿಗಳನ್ನು ಪಂಡಲ ಮಹಾರಾಜರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದರೊಂದಿಗೆ ಮಂಡಲ ಮತ್ತು ಮಕರವಿಳಕ್ಕು ಪೂಜಾ ಉತ್ಸವವು ಮುಕ್ತಾಯಗೊಳ್ಳುತ್ತದೆ.

ಈ ವರ್ಷದ ಮಂಡಲ ಪೂಜೆ ಆರಂಭವಾದಾಗಿನಿಂದ ಶಬರಿಮಲೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಮಕರವಿಳಕ್ಕು ಪೂಜೆಗಾಗಿ ದೇವಾಲಯವನ್ನು ತೆರೆಯಲಾಗಿದ್ದು, ಜನವರಿ 9 ರಾತ್ರಿಯಿಂದ 11 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಮಂಡಲ ಮತ್ತು ಮಕರವಿಳಕ್ಕು ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 42 ಲಕ್ಷ ಮೀರಿದೆ. ಈ ಮಧ್ಯೆ, ಮಕರವಿಳಕ್ಕು ಪೂಜೆಗೆ ಕೇವಲ 1 ದಿನವಷ್ಟೇ ಬಾಕಿ ಉಳಿದಿದ್ದು, ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಮಕರವಿಳಕ್ಕು ಪೂಜೆ ದಿನಾಂಕ ಮತ್ತು ಸಮಯ:ಮಕರ ಜ್ಯೋತಿ ದರ್ಶನವು ಜನವರಿ 14 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗಿ 7 ಗಂಟೆಗೆ ಕೊನೆಗೊಳ್ಳಲಿದೆ. ಆದ್ದರಿಂದ, ಅದಕ್ಕೂ ಮುಂಚಿತವಾಗಿ ಶಬರಿಮಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ದೇವಸ್ವಂ ಮಂಡಳಿಯು ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ, ಭಕ್ತರಿಗೆ ಅವಕಾಶ ನೀಡುವ ಸಮಯವನ್ನು ಸಹ ಬದಲಾಯಿಸಲಾಗಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಭಕ್ತರಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಮಾತ್ರ ಅವಕಾಶವಿತ್ತು. 

ಜನವರಿ 14 ರಂದು ಮಕರ ಜ್ಯೋತಿ ದರ್ಶನ ನಡೆಯಲಿದ್ದು, ಆ ದಿನದಂದು ಸುಮಾರು 3 ಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುವ ನಿರೀಕ್ಷೆಯಿರುವುದರಿಂದ, ಭಕ್ತರ ಸುರಕ್ಷತೆಗಾಗಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

 


ನವ ದೆಹಲಿ: ಸುಳ್ಯದ ಯುವ ಲೇಖಕ ಅನಿಂದಿತ್ ಗೌಡ ಅವರು ನವ ದೆಹಲಿಯ ಭಾರತೀಯ ಜನತಾ ಪಾರ್ಟಿ ಕೇಂದ್ರ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಶ್ರೀ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ, ತಮ್ಮ ರಚನೆಯಾದ “ರಿಕಾಲಿಂಗ್ ಅಮರ ಸುಳ್ಯ” (ಆಂಗ್ಲ ಭಾಷೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ) ಹಾಗೂ ಕನ್ನಡ ಕಿರು-ಪುಸ್ತಕ “ಸತ್ಯವೇ ಆರಿಸಿಕೊಂಡ ಸತ್ಯ ದರ್ಶನ” ಇವುಗಳ ಗೌರವ ಪ್ರತಿಗಳನ್ನು ಹಸ್ತಾಂತರಿಸಿದರು.


ಅನಿಂದಿತ್ ಅವರು ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ನ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದು, ಫೌಂಡೇಶನ್ ಆಶಯಗಳು ಹಾಗೂ ಯೋಜನೆಗಳ ಕುರಿತು ಚರ್ಚಿಸಿ, ಮಾರ್ಗದರ್ಶನವನ್ನು ಕೋರಿದರು.



ಸುಳ್ಯ:ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ಸಂಜೆ ಮಳೆಯಾಗಿದೆ. ಕೆಲವೆಡೆ ಸಂಜೆಯ ವೇಳೆಗೆ ಹಗುರ ಮಳೆಯಾಗಿದೆ, ಕೆಲವೆಡೆ ರಾತ್ರಿಯ ವೇಳೆಗೆ ಸಾಧಾರಣ ಮಳೆಯಾಗಿದೆ. ಸುಳ್ಯ ತಾಲೂಕಿನ ಸೋಣಂಗೇರಿ ಭಾಗದಲ್ಲಿ ಸಂಜೆ ಸಾಧಾರಣ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ಕೆಲವೆಡೆ ಹನಿ ಮಳೆಯಾಗಿದೆ. ರಾತ್ರಿಯ ವೇಳೆಗೆ ಆಲೆಟ್ಟಿಯ ಬಡ್ಡಡ್ಕ ಸೇರಿ ಕೆಲವೆಡೆ ಸಾಧಾರಣ ಮಳೆಯಾಗಿದೆ. ಅನಿರೀಕ್ಷಿತವಾಗಿ ಮಳೆ ಬಂದ ಕಾರಣ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದೆ. ಬಡ್ಡಡ್ಕ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು ಅಡಿಕೆ ಒದ್ದೆಯಾಗಿದೆ ಎಂದು ಕೃಷಿಕರು ಹೇಳಿದ್ದಾರೆ. ಸುಳ್ಯ ನಗರದಲ್ಲಿ ಕೆಲವೆಡೆ ಹನಿ ಮಳೆ ಬಂದಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಚಂಡ ಮಾರುತದ ಪ್ರಭಾವದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಜ.13 ಮತ್ತು 14 ರಂದು ಮಳೆಯಾಗಲಿದೆ ಎಂಬ ಸೂಚನೆ ನೀಡಿದೆ.

 ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒತ್ತಾಯ



ಮಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನೇ ಕೊಯ್ದು ಪೈಶಾಚಿಕ ಕೃತ್ಯ ಎಸಗಿದ ಹೇಯ ಕೃತ್ಯವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದು, ಹಸುವಿನ ಕೆಚ್ಚಲು ಕತ್ತರಿಸಿರುವುದು ಹೆತ್ತ ತಾಯಿಯ ಕತ್ತು ಕೊಯ್ಯುವುದು ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೃತ್ಯ ಎಸಗಿದ ಆರೋಪಿಗೆ ಮಾನಸಿಕವಾಗಿ ಅಸ್ವಸ್ಥ ಪಟ್ಟ ಕಟ್ಟಿ ಪ್ರಕರಣವನ್ನು ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಲು ಹೊರಟಿರುವ ಮೂಲಕ ಜಿಹಾದಿ ಮಾನಸಿಕತೆಯನ್ನು ಪೋಷಿಸಿ ಬೆಳೆಸುತ್ತಿರುವುದು ಮತ್ತಷ್ಟು ಖೇದಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 


ಗೋವು ಎನ್ನುವುದು ಸನಾತನ ಧರ್ಮಿಯರಿಗೆ ಮಾತೃ ಸ್ವರೂಪಿಣಿಯಾಗಿದ್ದು, ಗೋವಿನಲ್ಲಿ ಮುಕ್ಕೋಟಿ ದೇವರನ್ನು ಕಂಡು ಆರಾಧನೆ ಮಾಡುತ್ತೇವೆ. ಗೋವಿನ ಹಾಲನ್ನು ನಾವು ಅಮೃತಕ್ಕೆ ಸಮನಾದ ತಾಯಿ ಎದೆಹಾಲಿಗೆ ಹೋಲಿಸುತ್ತೇವೆ. ಇಂತಹ ಕಾಮಧೇನು ಬರೀ ಹಿಂದುಗಳಿಗೆ ಮಾತ್ರ ಹಾಲು ಕೊಡುವುದಿಲ್ಲ. ಜಾತಿ, ಮತ, ಧರ್ಮ ಬೇಧವಿಲ್ಲದೇ ಕ್ಷೀರಧಾರೆಯನ್ನು ಹರಿಸುವ ಗೋಮಾತೆಯ ಕೆಚ್ಚಲು ಕತ್ತರಿಸುತ್ತಾರೆಂದರೆ ಎಂಥ ವಿಕೃತ ಮನಸ್ಥಿತಿಯಿರಬಹುದು. ಈ ಘಟನೆ ವಿರುದ್ದ ರಾಜ್ಯವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಯನ್ನು ತರಾತುರಿಯಲ್ಲಿ ಬಂಧಿಸಿರುವುದು ನೋಡಿದರೆ ಸರ್ಕಾರದ ನಡೆಯೇ ಅನುಮಾನ ಹುಟ್ಟಿಸುವಂತಿದೆ. ನೀಚ ಕೃತ್ಯ ಎಸಗಿದ ಆ ದುಷ್ಟ ಮಾನಸಿಕ ಅಸ್ವಸ್ಥ ನಾಗಿದ್ದರೆ ಆತ ಹಸುವಿನ ಕೆಚ್ಚಲನ್ನೇ ಗುರುತಿಸಿ ಕೊಯ್ಯಲು ಹೇಗೆ ಸಾಧ್ಯ ಎಂದು ಗೋ ಮಾಲಕರೇ ಸಂಶಯ ವ್ಯಕ್ತಪಡಿಸಿದ್ದಾರೆ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಅಸಹ್ಯ ಮನಸ್ಥಿತಿಯ ಆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 


ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಕಾಂಗ್ರೆಸ್ ನೇತೃತ್ವದ ಮೃದು ಧೋರಣೆಗಳನ್ನು ತಾಳುತ್ತಿರುವುದು ಹೊಸದಲ್ಲ. ಕೆಎಫ್‌ಡಿ, ಪಿಎಫ್ಐನಂತಹ ದೇಶದ್ರೋಹಿ ಸಂಘಟನೆ ವಿರುದ್ದ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಜಿಹಾದಿ ಮಾನಸಿಕತೆಯನ್ನು ಬೆಳೆಸಿ ಪೋಷಿಸಿದ ಪ್ರತಿಫಲವಿದು. ಒಂದೆಡೆ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಿತಿಮೀರಿದ ಹಿನ್ನೆಲೆ ನಿರಂತರ ಗೋಹತ್ಯೆ ಆಗುತ್ತಿದೆ. ಮತ್ತೊಂದೆಡೆ ಗೋ ಕಳ್ಳರ ಅಟ್ಟಹಾಸ ರಾಜಾರೋಷವಾಗಿ ನಡೆಯುತ್ತಿದ್ದು, ಹಟ್ಟಿಯಿಂದಲೇ ದನ ಕಳ್ಳತನವಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ದಿನದಿಂದ ಸಮಾಜಘಾತುಕ ಕೃತ್ಯಗಳು ಹೆಚ್ಚಿವೆ. ಸರ್ಕಾರಕ್ಕೆ ಕಿಂಚಿತ್ತಾದರೂ ಗೋಮಾತೆಯ ಮೇಲೆ ಗೌರವವಿದ್ದರೆ ಈ ರಾಕ್ಷಸಿ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕ್ಯಾ. ಚೌಟ ಅವರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

 ಕಾಂಗ್ರೆಸ್‌ ಬೆಂಬಲಿತ ಮಹೇಶ್‌ ಕುಮಾರ್ ಕರಿಕ್ಕಳ ನೇತೃತ್ವದ ನಾಗರಿಕ ಸಮಿತಿ 8 ಸ್ಥಾನ

ಜೆಡಿಎಸ್‌ ಬೆಂಬಲಿತ ಸಂತೋಷ್ ಜಾಕೆ ನೇತೃತ್ವದ ತಂಡ 4 ಸ್ಥಾನ

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ (ಜ. 13ರಂದು) ಇಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್ ನಾಯಕ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಹೇಶ್ ಕುಮಾರ್ ಕರಿಕ್ಕಳ ನೇತೃತ್ವದಲ್ಲಿ ನಾಗರಿಕ ಸಮಿತಿ ಹೆಸರಿನಲ್ಲಿ 12 ಅಭ್ಯರ್ಥಿಗಳಲ್ಲಿ 8 ಅಭ್ಯರ್ಥಿಗಳು ಜಯಗಳಿಸಿದರೆ ಬಿಜೆಪಿ, ಜೆಡಿಎಸ್‌ ಬೆಂಬಲಿತ ಸಂತೋಷ್ ಜಾಕೆ ನೇತೃತ್ವದ ತಂಡ 4 ಸ್ಥಾನಗಳನ್ನು ಪಡೆಯಲಷ್ಟೇ ಶಕ್ತವಾದರು.

ನಾಗರಿಕ ಸಮಿತಿಯಿಂದ ಸಾಮಾನ್ಯ ಕ್ಷೇತ್ರದಿಂದ ಮಹೇಶ್ ಕುಮಾರ್ ಕರಿಕ್ಕಳ, ಗಣೇಶ್ ಪ್ರಸಾದ್ ಭೀಮಗುಳಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ವೆಂಕಪ್ಪ ಎನ್ ಪಿ ಬೆಳಗಜೆ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಲವಕುಮಾ‌ರ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನ ಧರ್ಮಣ ನಾಯ್ಕ ಗರಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನ ಗುರುವ ಕಲ್ಟಾರ್, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ರಂಜಿನಿ ಪಂಜಬೀಡು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಧನಂಜಯ ಮಡಪ್ಪಾಡಿ ವಿಜಯಿಯಾಗಿದ್ದಾರೆ. ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಜೆಡಿಎಸ್ ನಾಯಕ ಸಂಘದ ಹಾಲಿ ಅಧ್ಯಕ್ಷ ಜಾಕೆ ಮಾಧವ ಗೌಡ, ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ದಿಲೀಪ್ ಬಾಬ್ದುಬೆಟ್ಟು, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಮೂಕಾಂಬಿಕಾ ಜಯಗಳಿಸಿದ್ದಾರೆ.

 


ಮಂಗಳೂರು: ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಚಾಲನೆ ನೀಡಿದ್ದಾರೆ.  


ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಕಸಬಾ ಪರ್ಲಡ್ಕ ಸರ್ಕಾರಿ ಕಾಂಪೌಂಡ್‌ ಒಳಗಿರುವ ತೋಡಿಗೆ ಚರಂಡಿ ವ್ಯವಸ್ಥೆ ಹಾಗೂ ಸ್ಲ್ಯಾಬ್ ನಿರ್ಮಾಣ ಕಾರ್ಯ ನಡೆಯಲಿದ್ದು, ಸಂಸದ ಕ್ಯಾ. ಚೌಟ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 


ಇದರ ಜತೆಗೆ ಪುತ್ತೂರು ಕಸಬಾ ದರ್ಬೆಯ ಆಫಿಸರ್ಸ್ ಕ್ಲಬ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು ಸಂಸದರ ನಿಧಿಯಡಿ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಯಿತು.



ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದರಾದ ಬಳಿಕ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಬಿಡುಗಡೆ ಮಾಡಲಾದ ವಿವಿಧ ಅನುದಾನದ ಅಭಿವೃದ್ಧಿ ಕಾಮಗಾರಿ ಇದಾಗಿದೆ.ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, "ನಮ್ಮ ಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ದಣಿವರಿಯದೇ ಕೆಲಸ ಮಾಡುತ್ತೇನೆ. ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.



ಈ ವೇಳೆ ಡಾ. ಸುರೇಶ್ ಪುತ್ತೂರಾಯ, ಬಿಜೆಪಿ ಪುತ್ತೂರು ನಗರ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುತ್ತೂರು ನಗರಸಭೆ ಅಧ್ಯಕ್ಷ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಚಂದ್ರಶೇಖರ ರಾವ್ ಬಪ್ಪಳಿಗೆ, ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಆಳ್ವ, ಜಗನ್ನಿವಾಸ ರಾವ್, ಡಾ. ಮಂಜುನಾಥ್ ಶೆಟ್ಟಿ, ಪ್ರಸನ್ನ ಮಾರ್ತ, ವಿಕಾಸ್ ಪುತ್ತೂರು, ಶಶಿಧರ್ ನಾಯ್ಕ್, ಸಂತೋಷ್ ರೈ ಕೈಕಾರ, ಶಶಿಧರ್ ನಾಯಕ್,ನಾಗೇಶ್ ಪ್ರಭು, ಹರಿಪ್ರಸಾದ್ ಯಾದವ್, ಹರಿಪ್ರಸಾದ್ ಪೆರಿಯತತೋಡಿ, ವಿದ್ಯಾಧರ್ ಜೈನ್, ನಿತೀಶ್ ಶಾಂತಿವನ,ಪುನೀತ್ ಮಾಡತ್ತಾರ್, ನಿತೇಶ್ ಕಲ್ಲೇಗ ಮುಂತಾದವರು ಉಪಸ್ಥಿತರಿದ್ದರು.

 


ಪ್ರಯಾಗ್‌ರಾಜ್‌: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಕುಂಭಮೇಳಕ್ಕೆ ಆಗಮಿಸಿರುವ ಆ್ಯಪಲ್ ಸಹ ಸಂಸ್ಥಾಪಕ (Steve Jobs) ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ (Laurene Powell Jobs) ಅವರು ತನ್ನ ಗುರು ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರಿಂದ ಗೋತ್ರ ಸ್ವೀಕರಿಸಿದ್ದಾರೆ. ಈ ಮೂಲಕ ಹೊಸ ಗುರುತು ಪಡೆದುಕೊಂಡಿದ್ದಾರೆ.

ಪ್ರಯಾಗ್‌ರಾಜ್‌ಗೆ ಕಾಲಿಟ್ಟ ಬಳಿಕ ಮೊದಲು ತಮ್ಮ ಗುರುಗಳಾದ ನಿರಂಜನಿ ಅಖಾಡ ಕೈಲಾಶಾನಂದ ಗಿರಿ ಜಿ ಮಹಾರಾಜ್ (Guru Niranjani Akhada Peethadheeshwar Swami Kailashanand Giri) ಅವರನ್ನ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ ಈ ಕುರಿತು ಪ್ರತಿಕ್ರಿಯಿಸಿದ ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಲಾರೆನ್ ಪೊವೆಲ್ ಅವರಿಗೆ ಗೋತ್ರದ ಪ್ರಕಾರ ಕಮಲಾ ಎಂಬ ಹೆಸರು ಕೊಟ್ಟಿದ್ದೇನೆ. ಲಾರೆನ್ ಅವರು ನಮಗೆ ಮಗಳಿದ್ದಂತೆ. ಆಕೆ ಭಾರತಕ್ಕೆ ಎರಡನೇ ಬಾರಿ ಬರುತ್ತಿದ್ದಾರೆ. ಕುಂಭಮೇಳಕ್ಕೆ (Mahakumbh 2025) ಎಲ್ಲರಿಗೂ ಸ್ವಾಗತ ಎಂದು ಹೇಳಿದ್ದಾರೆ.

ಕಮಲಾ ಸನಾತನ ಧರ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಜನವರಿ 29ರ ವರೆಗೆ ಹಿಂದೂ ಆಚರಣೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಂಭಮೇಳಕ್ಕೆ ಬರುವ ಮುನ್ನ ಪೊವೆಲ್‌ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. 

ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್, ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದರು. ಭಾರತೀಯ ಸಂಪ್ರದಾಯದಂತೆ, ಕಾಶಿ ವಿಶ್ವನಾಥದಲ್ಲಿ, ಬೇರೆ ಯಾವುದೇ ಸಮುದಾಯದವರು ಶಿವಲಿಂಗವನ್ನು ಮುಟ್ಟುವಂತಿಲ್ಲ. ಅದಕ್ಕಾಗಿಯೇ ಶಿವಲಿಂಗವನ್ನು ಹೊರಗಿನಿಂದ ನೋಡುವ ವ್ಯವಸ್ಥೆ ಮಾಡಲಾಗಿತ್ತು.

 ಸಾರ್ವಜನಿಕ ಭೇಟಿ ಸಮಯ ಬದಲಾವಣೆ



ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇಂದು ಮಧ್ಯಾಹ್ನ 12 ರಿಂದ 1.30 ವರೆಗೆ ಕಡಬ ತಾಲೂಕು ಕಚೇರಿಯಲ್ಲಿ, ಸಾರ್ವಜನಿಕ ಭೇಟಿಗೆ ಲಭ್ಯವಿದ್ದಾರೆಂದು ಸಂಸದರ ಕಚೇರಿ ಮೂಲಗಳು ತಿಳಿಸಿದ್ದಾರೆ.

 


ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ದಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಇಬ್ಬರ ನಾಮಪತ್ರ ತಿರಸ್ಕಾರವಾಗಿದ್ದು, ಈ ವಿಚಾರಕ್ಕೆ ಸಂಬಂದಿಸಿದಂತೆ ಶಾಸಕರು ಗರಂ ಆಗಿದ್ದು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಘಟನೆ ನಡೆದಿದೆ.


ಪಿಎಲ್‌ ಡಿ ಬ್ಯಾಂಕಿನ ಚುನಾವಣೆಗೆ ಒಟ್ಟು ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಾಜಶೇಖರ ಜೈನ್‌ ಮತ್ತು ಅಶೋಕ್ ರೈ ದೇರ್ಲ ಎಂಬವರ ನಾಮಪತ್ರವನ್ನು ಚುನಾವಣಾ ಅಧಿಜಾರಿ ಎಆರ್ ಒ ರಘು ಎಂಬವರು ತಿರಸ್ಕೃತಗೊಳಿಸಿದ್ದರು. ಸಕಾರಣವಿಲ್ಲದೆ ಮತ್ತು ಉದ್ದೇಶಪೂರ್ವಕವಾಗಿ ನಮ್ಮ ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಇಬ್ಬರು ಅಭ್ಯರ್ಥಿಗಳು ಬ್ಲಾಕ್ ಅಧ್ಯಕ್ಷರಾದ ಕೆ ಪಿ ಆಳ್ವರ ಗಮನಕ್ಕೆ ತಂದಿದ್ದಾರೆ. ಕೆ ಪಿ ಆಳ್ವರು ಶಾಸಕರ ಗಮನಕ್ಕೆ ತಂದು ಬಳಿಕ ಶಾಸಕರು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿ ಅವರನ್ನು ತರಾಟೆಗೆ ಎತ್ತಿಕೊಂಡರು. ಸಲ್ಲಿಸಲಾಗಿದ್ದ ನಾಮಪತ್ರವನ್ನು ಪರಿಶೀಲನೆ ಮಾಡುವ ವೇಳೆ ಅದು ಸರಿಯಾಗಿಯೇ ಇತ್ತು, ಯಾವುದೇ ಕಾರಣವಿಲ್ಲದೆ ದುರುದ್ದೇಶದಿಂದ ಅಧಿಕಾರಿ ಈ ಕೆಲಸ ಮಾಡಿದ್ದಾರೆ ಎಂದು ಶಾಸಕರು ನೇರ ಆರೋಪ ಮಾಡಿದರು.

ಅಧಿಕಾರಿ ಹೇಳಿದ ಕಾರಣ..


ನಾಮಪತ್ರ ಸಲ್ಲಿಸುವ ವೇಳೆ ಸ್ಪರ್ದಿಸುವ ಅಭ್ಯರ್ಥಿ ಯಾವ ಕೆಟಗರಿಯಲ್ಲಿ ಸ್ಪರ್ದೆ ಮಾಡುತ್ತಿದ್ದಾನೆ ಎಂಬ ವಿಚಾರವನ್ನು ನಾಮಪತ್ರದಲ್ಲಿ ನಮೂದಿಸಬೇಕು, ನಮೂದಿಸಿದ ಬಳಿಕ ಉಳಿದ ಕೆಟಗರಿ ಹೆಸರನ್ನು ಅಳಿಸಬೇಕು, ಅಳಿಸದ ಕಾರಣ ನಾಮಪತ್ರ ತಿರಸ್ಕಾರ ಮಾಡಿದ್ದೇನೆ ಎಂದುಶಾಸಕರಲ್ಲಿ ತಿಳಿಸಿದ್ದಾರೆ. ಆದರೆ ಕಾನೂನು ಪ್ರಕಾರ ಅಭ್ಯರ್ಥಿಯು ತಾನು ಸ್ಪರ್ಧಿಸುವ ವಿಭಾಗಕ್ಕೆ ರೈಟ್ ಗುರುತು ಹಾಕಬೇಕು ಎಂದು ಇದ್ದು ಉಳಿದ ಕೆಟಗರಿಯನ್ನು ಅಳಿಸಬೇಕೆಂಬ ನಿಯಮವಿರುವುದಿಲ್ಲ ಆದರೆ ಅಧಿಕಾರಿ ಈ ವಿಚಾರದಲ್ಲಜ ತಪ್ಪು ಮಾಡಿರುವುದು ಸಾಭೀತಾಗಿದೆ ಎಂದು ಶಾಸಕರು ಹೇಳಿದರು.

ಎಷ್ಟು ತಗೊಂಡಿದ್ದೀರಿ?

ನಾಮಪತ್ರ ತಿರಸ್ಕಾರ ಮಾಡಲು ಎಷ್ಟು ಲಂಚ ತಗೊಂಡಿದ್ದೀರಿ ಎಂದು ಅಧಿಕಾರಿ ರಘು ಅವರನ್ನು ಪ್ರಶ್ನಿಸಿದ ಶಾಸಕ ಅಶೋಕ್ ರೈ ಅವರು ಪುತ್ತೂರಿನಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಲಂಚ ತಗೊಂಡು ಮೋಸ ಮಾಡಲು ಬಿಡುವುದಿಲ್ಲ. ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿದ್ದೀರಿ ಎಂದು ಮತ್ತೆ ಅಧಿಕಾರಿಯನ್ನುತರಾಟೆಗೆ ಎತ್ತಿಕೊಂಡರು.

ನಿಮ್ಮಮೇಲೆ ದೂರು ಮೊದಲೇ ಇತ್ತು ನಿಮ್ಮಮೇಲೆಮೊದಲೇ ನನಗೆ ದೂರು ಬಂದಿತ್ತು, ಸುದಾರಿಸಬಹುದು ಎಂದು ಸುಮ್ಮನಿದ್ದೆ ಈಗ ಬಣ್ಣ ಬಯಲಾಯಿತು ಎಂದು ಶಾಸಕರು ಅಧಿಕಾರಿಯ ಎಚ್ಚರಿಸಿದರು.


ನಮ್ಮನಾಮಪತ್ರ ಸರಿ ಇದೆ

ಸ್ಪರ್ಧಿಗಳಾದ ರಾಜಶೇಖ‌ರ್ ಜೈನ್ ಮಾತನಾಡಿ ನಮ್ಮ ಇಬ್ಬರ ನಾಮಪತ್ರ ಸರಿಯಾಗಿಯೇ ಇದೆ ಕಾರಣವಿಲ್ಲದೆ ತಿರಸ್ಕಾರ ಮಾಡಿದ್ದಾರೆ. ಇದಕ್ಕಾಗಿ ನಾವು ಶಾಸಕರಲ್ಲಿ ದೂರು ನೀಡಿರುವುದಾಗಿ ಹೇಳಿದರು.

ಸಸ್ಪೆಂಡ್ ಮಾಡ್ತನೆ ಲಂಚ ತಗೊಂಡು,ಅನ್ಯಾಯ ಮಾಡಿದ ನಿಮ್ಮನ್ನು ಸಸ್ಪೆಂಡ್ ಮಾಡಿಸ್ತೇನೆ.ನಿಮಗೆ ಬೇಕಾದ ಹಾಗೆ ಕಾನೂನು ಬದಲಾವಣೆ ಮಾಡುವ ಅಧಿಕಾರ ನಿಮಗಿಲ್ಲ ಎಂದು ಅಧಿಕಾರಿಗೆ ಶಾಸಕರುಎಚ್ಚರಿಸಿದರು.




 ಏಳು ಸ್ಥಾನಕ್ಕೆ ನಡೆದ ಚುನಾವಣೆ 5 ಬಿಜೆಪಿ,ಬಂಡಾಯ 1,ಕಾಂಗ್ರೆಸ್ 1



ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ 7 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 5 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಉಳಿದ ಎರಡರಲ್ಲಿ ಒಂದು ಸ್ಥಾನ ಕಾಂಗ್ರೆಸ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದು ಮತ್ತೆ ಆಡಳಿತ ದ ಅಧಿಕಾರವನ್ನು ಬಿಜೆಪಿ ಉಳಿಸಿಕೊಂಡಿದೆ.

ತಾಲೂಕಿನ ಒಟ್ಟು 14 ವಲಯಗಳಲ್ಲಿ 23 ನಾಮಪತ್ರ ಸಲ್ಲಿಕೆಯಾಗಿದ್ದು ಚುನಾವಣೆ ನಡೆಯಲಿರುವ 7 ಸ್ಥಾನಗಳಿಗೆ 16 ಮಂದಿ ಚುನಾವಣಾ ಕಣದಲ್ಲಿದ್ದರು.


ಬೆಳ್ಳಾರೆ ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಶಾಲಾಕ್ಷಿ, ಎಣ್ಣೂರು ಪ.ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಕೊಲ್ಲಮೊಗ್ರ ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸವಿತಾ ಕೆ.ಜೆ, ಮಡಪ್ಪಾಡಿ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ರಮೇಶ್ ಪಿ, ಕಳಂಜ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಈಶ್ವರಚಂದ್ರ ಎಂ, ಪಂಬೆತ್ತಾಡಿ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಚ್ಚುತ ಕೆ ಯವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಳಿದ 7 ಸ್ಥಾನಗಳಿಗೆ ಜ.12 ರಂದು ನಡೆದ ಚುನಾವಣೆಯಲ್ಲಿ ಜಾಲ್ಲೂರು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ರೈ ಕೆ ಯವರು 17 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಂಡಾಯ ಅಭ್ಯರ್ಥಿ ಸುರೇಶ್ ಕೆ ಯವರು 12 ಮತ ಪಡೆದು ಪರಾಭವಗೊಂಡಿದ್ದಾರೆ.


ನೆಲ್ಲೂರು ಕೆಮ್ರಾಜೆ ಹಿಂದುಳಿದ ವರ್ಗ ಬಿ" ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾವೀರ ಜಿ ಯವರು 19 ಮತ ಪಡೆದು ವಿಜಯಿಯಾದರು.


ಬಿಜೆಪಿ ಬಂಡಾಯ ಅಭ್ಯರ್ಥಿ ದೇವಿಪ್ರಸಾದ್ ಎಸ್ 15 ಮತ ಪಡೆದು ಸೋಲು ಕಂಡರು. ಸುಳ್ಯ ಹಿಂದುಳಿದ ವರ್ಗ ಎ" ಸ್ಥಾನಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಜ್ಞಾನೇಶ್ವರ ಶೇಟ್ 24 ಮತ ಪಡೆದು ಜಯಗಳಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮನಾಥ ಪೂಜಾರಿ ಪರಾಭವ ಹೊಂದಿದರು.


ಆಲೆಟ್ಟಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೆ ಯವರು 19 ಮತ ಪಡೆದು ವಿಜಯಿಯಾಗಿದ್ದಾರೆ.


ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಪಡ್ಡಂಬೈಲು 11 ಮತ ಪಡೆದು ಸೋಲುಂಡರು. ಐವರ್ನಾಡು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪಯ್ಯ ಪಿ 12 ಮತ ಪಡೆದರೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಪಿ ಯವರು 12 ಮತ ಪಡೆದು ಸಮಾನತೆಯನ್ನು ಕಾಯ್ದುಕೊಂಡರು.


ಟಾಸ್ ಆಯ್ಕೆ ಮೂಲಕ ಗಣಪಯ್ಯ ರವರು ಅದೃಷ್ಟದ ಗೆಲುವು ಸಾಧಿಸಿಕೊಂಡರು.ಗುತ್ತಿಗಾರು ಕ್ಷೇತ್ರದಲ್ಲಿ ಪ.ಪಂ.ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಿ ಕೆ 7 ಮತ ಪಡೆದು ವಿಜಯಿಯಾಗಿದ್ದಾರೆ.


ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಬಿ ಪರಾಭವ ಹೊಂದಿದರು.


ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅವಿನಾಶ್ ಡಿ.ಕೆ 222 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು ರವರು 135 ಮತ ಪಡೆದುಪರಾಭವಗೊಂಡರು.

 


ಎಲ್ ಡಿ ಬ್ಯಾಂಕ್ ಗೆ ಇಂದು ನಡೆದ ಚುನಾವಣೆ ಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅವಿನಾಶ್ ಕುರುಂಜಿ ಜಯ ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವಿನಾಶ್ ಡಿಕೆ 222 ಮತ ಪಡೆದರೆ ಸ್ವತಂತ್ರ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು 135 ಮತ ಪಡೆದು ಪರಾಭವಗೊಂಡಿದ್ದಾರೆ.

 




  ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸೌಧದಲ್ಲಿ ಪ್ರಶಾಂತ್ ಅಳ್ಪೆ ರವರ ಮಾಲಕತ್ವದ"ಪಂಚಮುಖಿ" ಸ್ವೀಟ್ಸ್ -ಜ್ಯೂಸ್, ಚಾಟ್ಸ್ ,ಕ್ಯಾಂಟೀನ್ ಜ.12 ರಂದು ಸ್ಥಳಾಂತರ ಗೊಂಡು ಶುಭಾರಂಭ ಗೊಂಡಿತು.


ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ದೈವ ಪರಿಚಾರಕ ಚಂದ್ರಶೇಖರ ಕೋಡಿ ಉದ್ಘಾಟಿಸಿ ಶುಭಹಾರೈಸಿದರು.


 ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ,

ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ , ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ। ದೇವಿಪ್ರಸಾದ್ ಕಾನತ್ತೂರ್,

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಯುವ ತೇಜಸ್ಸು,ಸಂಯೋಜಕ ಆಶಿತ್ ಕಲ್ಲಾಜೆ, ಚಿಂಗಾಣಿಗುಡ್ಡೆ ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ವಿದ್ಯಾನಂದ ಮೇಲ್ಮನೆ , ಶ್ರೀ ಉಳ್ಳಾಕುಲು ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ , ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಪರ್ಕ ಪ್ರಮುಖ್ ದಯಾನಂದ ಮೇಲ್ಮನೆ , ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ , ಪಂಜ ಸಂಗಾತಿ ಸ್ಟೋರ್ ಮಾಲಕ ವಂಕಟರಮಣ ಭಟ್,

ಪೈಂದೋಡಿ ಶ್ರೀ ಸುಬ್ರಾಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭವಾನಿಶಂಕರ ಪಾಲೋಳಿ, ಪಂಜ ಪರಿವಾರ ರೈತ ಉತ್ಪಾದಕರ ಕಂಪೆನಿ ತೀರ್ಥಾನಂದ ಕೊಡೆಂಕಿರಿ, ವನಿತಾ 

ಸಮಾಜದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ, ಚಿಂಗಾಣಿಗುಡ್ಡೆ ಕೃಪಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಶಿರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪ್ರಕಾಶ್ ಅಳ್ಪೆ ಸ್ವಾಗತಿಸಿದರು ಶ್ರೀಮತಿ ಕಾವ್ಯ ಪ್ರಕಾಶ್ ಪ್ರಾರ್ಥಿಸಿದರು.ಗುರುಪ್ರಸಾದ್ ತೋಟ ನಿರೂಪಿಸಿದರು. ಶ್ರೀಮತಿ ಧನ್ಯ ಪ್ರಶಾಂತ್ ವಂದಿಸಿದರು.


ನಮ್ಮಲ್ಲಿ ಚಾ, ಕಾಫಿ, ತಿಂಡಿ, ದೋಸೆ ಐಟಮ್ಸ್ ಸ್ವೀಟ್ಸ್ ಐಟಮ್ಸ್, ಮಸಾಲಪೂರಿ, ಪಾನಿಪೂರಿ, ದಹೀಪೂರಿ, ಸೇವ್ ಪೂರಿ, ಬೇಲ್ ಪೂರಿ, ವೆಜ್ ಸೂಪ್, ಗಡ್‌ಬಡ್, ದಿಲ್‌ಖುಷ್, ಪ್ರೊಟ್ಸ್ ಸಲಾಡ್, ಪಂಚಮುಖ ಸ್ಪೆಷಲ್ ಐಸ್‌ಕ್ರೀಂ, ಫ್ರೆಶ್ ಜ್ಯೂಸ್ ದೊರೆಯುತ್ತದೆ.

ಪಂಜ ಪರಿಸರದಲ್ಲಿ ಆಧುನಿಕತೆಗೆ ಹೊಂದಿಕೊಂಡಂತೆ ಈ ಸಂಸ್ಥೆಯಲ್ಲಿ ಗ್ರಾಹಕರು ಕುಟುಂಬ ಸಮೇತ ಭೇಟಿ ನೀಡಿ ಉಪಹಾರ ಸವಿಯಲು ಮತ್ತು ಬೇಕರಿ ತಿಂಡಿ ತಿನಸು ಖರೀದಿ ಮಾಡಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸುಸಜ್ಜಿತ ಸ್ವೀಟ್ ಸ್ಟಾಲ್, ಜ್ಯೂಸ್ ಸೆಂಟ‌ರ್ ಹಾಗೂ ಶುದ್ಧ ಸಸ್ಯಾಹಾರಿ ಚಾಟ್ಸ್ & ಕ್ಯಾಂಟೀನ್ ಮತ್ತು ಕ್ಯಾಟರಿಂಗ್ ವ್ಯವಸ್ಥೆಯೂ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

 


ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ(ಜ.13) ಕಡಬದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.


ಕಡಬ ತಾಲೂಕು ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಸಂಸದ ಕ್ಯಾ. ಚೌಟ ಅವರು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದು, ಕಡಬ ತಾಲೂಕಿನ ನಾಗರಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಈ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದು ಎಂದು ಸಂಸದ ಕ್ಯಾ. ಚೌಟ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

 


ದಾವಣಗೆರೆ: ಒಪಿಎಸ್ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ಶನಿವಾರ ಇಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ 2024-29ನೇ ಅವಧಿಯ ರಾಜ್ಯ ಕಾರ್ಯಕಾರಿಣಿಯ ಮೊದಲ ಸಭೆ ನಡೆಯಿತು.


ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು, ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆ್ಯಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸಲು ಕ್ರಮ ವಹಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.


ಹಬ್ಬದ ಮುಂಗಡ ಮೊತ್ತವನ್ನು ₹25,000 ದಿಂದ ₹50,000ಕ್ಕೆ ಹೆಚ್ಚಿಸಲು ಹಾಗೂ ನಿವೃತ್ತಿ ಸಮಯದ ಗಳಿಕೆ ರಜೆಗಳನ್ನು 300 ರಿಂದ 340ಕ್ಕೆ ಏರಿಸಲು ಕ್ರಮ ವಹಿಸುವುದು, ಕೇಂದ್ರ ಮತ್ತು ಜಿಲ್ಲಾ ಸಂಘಕ್ಕೆ ವಂತಿಗೆ ರೂಪದಲ್ಲಿ ಸಲ್ಲಿಸುವ ಹಣವನ್ನು ಕಡಿತಗೊಳಿಸಿ ತಾಲ್ಲೂಕು ಮಟ್ಟದಲ್ಲಿ ಉಳಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

2024-25ನೇ ಸಾಲಿನ ಸರ್ಕಾರಿ ನೌಕರರ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 3 ಕೋಟಿ ಅನುದಾನ ನೀಡಲು ಒಪ್ಪಿದ್ದಾರೆ. ಶೀಘ್ರವೇ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಹಾಗೂ 2024-25ನೇ ಸಾಲಿಗೆ ಆಯ್ಕೆಯಾದ ರಾಜ್ಯದ ಎಲ್ಲಾ ನಿರ್ದೇಶಕರು, ಪದಾಧಿಕಾರಿಗಳಿಗೆ ಸಮ್ಮಿಲನ ಸಮಾವೇಶ ನಡೆಸಲು ಸಭೆ ಅನುಮೋದನೆ ನೀಡಿತು.


ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಯೋಜನಾ ಶಾಖೆಗಳ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು, ಕಾರ್ಯದರ್ಶಿಗಳು ಸೇರಿ ಹಲವರು ಭಾಗವಹಿಸಿದ್ದರು.

 


ಲಾಸ್ ಏಂಜಲೀಸ್/ಮೆಲ್ಬರ್ನ್: ಲಾಸ್ ಏಂಜಲೀಸ್‌ನ ಕಾಳಿಚ್ಚು ದುರಂತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು ಹಲವರು ಕಾಣೆಯಾಗಿದ್ದಾರೆ. ಕಾಣೆಯಾದವರ ಬಗ್ಗೆ ದೂರು ನೀಡಲು ನಗರದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಕಳೆದು ಎಂಟು ತಿಂಗಳಿಂದ ಒಮ್ಮೆಯೂ ಮಳೆ ಸುರಿದಿಲ್ಲ.

'ಶುಕ್ರವಾರವೂ ನಗರದಾದ್ಯಂತ ಅಲ್ಲಲ್ಲಿ ಸಣ್ಣ ಸಣ್ಣ ಕಾಳ್ಳಿಚ್ಚು ಹಬ್ಬಿದ ಪ್ರಕರಣಗಳು ನಡೆದಿವೆ. ಅವುಗಳನ್ನು ನಂದಿಸಲಾಗಿದೆ' ಎಂದು ಲಾಸ್ ಏಂಜಲೀಸ್‌ನ ಮೇಯರ್ ಕ್ಯಾರೆನ್ ಬಾಸ್ ಮಾಹಿತಿ ನೀಡಿದರು. ಐದು ಪ್ರದೇಶಗಳಲ್ಲಿ ಹಬ್ಬಿದ ಕಾಳಿಚ್ಚು ವ್ಯಾಪಿಸುತ್ತಲೇ ಇದೆ. ಇನ್ನೂ ಸಾವಿರಾರು ಜನರನ್ನು ಸರ್ಕಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ.


'ಸಂತಾ ಆನಾ' ಗಾಳಿಯ ವೇಗವು ತಗ್ಗುತ್ತಿಲ್ಲ. ಬೆಂಕಿಯು ವ್ಯಾಪಿಸದಂತೆ ತಡೆಯಲು ಹೆಲಿಕಾಪ್ಟರ್ ಮೂಲಕ ರಾಸಾಯನಿಕವನ್ನು ಹಿಂಪಡಿಸಲಾಗುತ್ತಿದೆ. ಈಟನ್‌ ಕೆಯಾನ್‌ನಲ್ಲಿ ಹಬ್ಬಿದ ಕಾಳಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಹತ್ತಿದ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಶೇ 3ರಷ್ಟು ಪ್ರದೇಶದಲ್ಲಿನ ಬೆಂಕಿಯನ್ನು ಮಾತ್ರ ಶುಕ್ರವಾರ ನಂದಿಸಲಾಗಿದೆ.

ಹೊಗೆಯಾಡುತ್ತಿರುವ ಮನೆಗಳು...

ಎರಡು ಜೊತೆ ಬಟ್ಟೆ ಮಗು ಗಂಡನೊಂದಿಗೆ ಮಂಗಳವಾರ ಮನೆ ತೊರೆದಿದ್ದ ಬ್ರಿಗೆಟ್ ಬರ್ಗ್ ಶುಕ್ರವಾರ ತನ್ನ ಹೊಗೆಯಾಡುತ್ತಿರುವ ಮನೆಯ ಮುಂದೆ ನಿಂತಾಗ ಕಣ್ಣೀರಾದರು. ಮನೆ ಸುಟ್ಟ ಬೆಂಕಿ ಇನ್ನೂ ನಂದಿರಲಿಲ್ಲ ಆಕೆಯ ಒಡಲಬೆಂಕಿ ಕೂಡ. ಇದು ಬ್ರಿಗೆಟ್‌ನ ಕಥೆ ಮಾತ್ರವಲ್ಲ ಲಾಸ್ ಏಂಜಲೀಸ್‌ನ ನೂರಾರು ಕುಟುಂಬಗಳ ಕಥೆ. ಟಿ.ವಿ.ಗಳ ಮುಂದೆ ಕೂತು ತಮ್ಮ ಮನೆ ಭಸ್ಮವಾಗುವುದನ್ನು ಕಂಡಿದ್ದ ಕುಟುಂಬಗಳು ಬೆಂಕಿಯ ತಾಪ ತುಸು ಕಡಿಮೆಯಾಗುತ್ತಲೇ ಮನೆಗಳ ಬಳಿಗೆ ಬರುತ್ತಿದ್ದಾರೆ. ಮನೆಯೊಂದಿಗಿನ ನೆನಪುಗಳು ಸುರುಳಿಯಾಗಿ ತಲೆಯಲ್ಲಿ ಸುತ್ತುತ್ತಿದ್ದರೆ ಸುಟ್ಟು ಭಸ್ಮವಾದ ಮನೆಯ ಅಳಿದುಳಿದ ವಸ್ತುಗಳನ್ನು ತೆಗೆದುಕೊಳ್ಳುವತ್ತ ಕೈ ಮುಂದಾಗುತ್ತಿತ್ತು.

2024: ಅತಿ ಬಿಸಿಯ ವರ್ಷ

'2024ನೇ ಇಸವಿಯು ಅತ್ಯಂತ ಬಿಸಿಯ ವರ್ಷಾವಾಗಿತ್ತು' ಎಂದು ಐರೋಪ್ಯ ಒಕ್ಕೂಟದ 'ಕೊಪರ್ನಿಕಸ್ ಕೈಮೇಟ್ ಚೇಂಚ್ ಸರ್ವೀಸ್' ಸಂಸ್ಥೆಯು ಶುಕ್ರವಾರ ಘೋಷಿಸಿದೆ. 1850ರಲ್ಲಿ ಜಾಗತಿಕ ತಾಪಮಾನ ದಾಖಲಾತಿ ಆರಂಭಿಸಿದ ನಂತರ ಕೈಗಾರಿಕಾಪೂರ್ವ ಕಾಲದ ಜಾಗತಿಕ ತಾಪಮಾನಕ್ಕಿಂತ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನವು 2024ರಲ್ಲಿ ದಾಖಲಾಗಿದೆ ಎಂದು ಸಂಸ್ಥೆ ಹೇಳಿದೆ. 1.6 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಗತಿಕ ತಾಪಮಾನವನ್ನು 2024ನೇ ಇಸವಿ ದಾಖಲಿಸಿತ್ತು ಎಂದು ಸಂಸ್ಥೆ ಹೇಳಿದೆ. ಒಂದೆಡೆ ಲಾಸ್ ಏಂಜಲೀಸ್‌ನಲ್ಲಿ ಹಬ್ಬುತ್ತಿರುವ ಕಾಳಿಚ್ಚಿಗೆ ಹವಾಮಾನ ವೈಪರಿತ್ಯವೇ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಿದ್ದರೆ ಇನ್ನೊಂದೆಡೆ ಜಾಗತಿಕ ತಾಪಮಾನವು ಏರಿಕೆಯಾಗುತ್ತಿದೆ. 2024ರ ಜುಲೈ 22ರಂದು ನಿತ್ಯದ ಜಾಗತಿಕ ತಾಪಮಾನದ ಸರಾಸರಿಯು 17.16 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇದು ಕೂಡ ದಾಖಲೆಯೇ ಆಗಿತ್ತು. 'ಕಳೆದ ಒಂದು ದಶಕಗಳಲ್ಲಿ ಪ್ರತೀ ವರ್ಷವೂ ಜಾಗತಿಕ ತಾಪಮಾನ ಏರಿಕೆಯು ದಾಖಲೆಯನ್ನೇ ಬರೆದಿದೆ' ಎಂದು ಸಂಸ್ಥೆ ಹೇಳಿದೆ.

ಪ್ಯಾರಿಸ್ ಒಪ್ಪಂದಕ್ಕೆ ಸೋಲಾಯಿತೇ?

ಜಾಗತಿಕ ತಾಪಮಾನ ಸರಾಸರಿಯು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಾಗುವುದನ್ನು ತಡೆಯಬೇಕು ಎಂಬುದು ಪ್ಯಾರಿಸ್ ಒಪ್ಪಂದದ ಮೂಲ ಉದ್ದೇಶವಾಗಿತ್ತು. ಈಗ ಜಗತ್ತು ಈ ಮಿತಿಯನ್ನು ದಾಟಿದೆ. ಹಾಗಾದರೆ ಒಪ್ಪಂದವನ್ನು ಪಾಲಿಸುವಲ್ಲಿ ಎಲ್ಲ ದೇಶಗಳು ಸೋತಿವೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಒಂದರ್ಥದಲ್ಲಿ ದೇಶಗಳು ಸೋತಿರುವುದು ನಿಜವೇ ಆಗಿದೆ.


'ಆದರೆ ಈಗಲೇ ಎಲ್ಲವೂ ಅಂತ್ಯವಾಗಿಲ್ಲ. ಒಂದು ವರ್ಷದ ಜಾಗತಿಕ ತಾಪಮಾನದ ಸರಾಸರಿಯನ್ನು ಮಾತ್ರವೇ ಪರಿಗಣಿಸಿ ಚರ್ಚೆ ಮಾಡುವುದು ಸರಿಯಲ್ಲ. ಪ್ಯಾರಿಸ್ ಒಪ್ಪಂದವು ಒಂದು ವರ್ಷದ ಸರಾಸರಿಯನ್ನು ಮಾತ್ರವೇ ಪರಿಗಣಿಸುವುದಿಲ್ಲ. ಇದೊಂದು ಸುದೀರ್ಘ ಪಯಣ. ಆದರೆ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ನಾವು ಇನ್ನೂ ಹೆಚ್ಚಿನ ಶ್ರಮ ಹಾಕಬೇಕು ಎಂಬುದನ್ನು 2024ನೇ ಇಸವಿಯು ಸಾಬೀತುಮಾಡಿದೆ' ಎನ್ನುತ್ತಾರೆ ವಿಜ್ಞಾನಿಗಳು.


'ಹಸಿರುಮನೆ ಅನಿಲ ಸೋರಿಕೆಗೆ ಇಂಬು ನೀಡುವಂಥ ನಮ್ಮ ನಿತ್ಯದ ಕಾರ್ಯಚಟುವಟಿಕೆಗಳೂ ಜಾಗತಿಕ ತಾಪಮಾನ ಏರಿಕೆಗೆ ಒಂದೊಂದೇ ಕಾರಣಗಳಾಗುತ್ತವೆ ಎಂಬುದನ್ನು ಮರೆಯಬಾರದು' ಎಂದೂ ವಿಜ್ಞಾನಿಗಳು ಹೇಳುತ್ತಾರೆ.

 ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಶೃಂಗೇರಿಯಲ್ಲಿ ಕಾರ್ಯಕರ್ತರು ಘೋಷಣೆ ಕೂಗಿದರು.



ಚಿಕ್ಕಮಗಳೂರು: ಮುಂದಿನ ಸಿಎಂ ಡಿ.ಕೆ. ಶಿವಕುಮಾರ್.. ಎಂದು ಕಾರ್ಯಕರ್ತರು ಕೂಗಿದ ಘಟನೆ ಶೃಂಗೇರಿಯಲ್ಲಿ ಇಂದು ನಡೆಯಿತು. ಶೃಂಗೇರಿ ಶಾರದಾ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಆಗಮಿಸಿದ್ದ ವೇಳೆ ಕಾರ್ಯಕರ್ತರು ಈ ಘೋಷಣೆ ಕೂಗಿದರು.


ಹೆಲಿಕಾಪ್ಟರ್​ನಲ್ಲಿ ಶೃಂಗೇರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಸ್ಥಳೀಯ ಶಾಸಕ ಟಿ. ಡಿ. ರಾಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಈ ವೇಳೆ ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಂದು ಕಾರ್ಯಕರ್ತರಿಂದ ಘೋಷಣೆ ಕೂಗು ಕೇಳಿಬಂತು.

ಕಾರ್ಯಕರ್ತರು, ಡಿ. ಕೆ. ಶಿವಕುಮಾರ್ ಪರ ಘೋಷಣೆ ಕೂಗಿದರು. ಜೊತೆಗೆ ಡಿಸಿಎಂ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.


ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ನನಗೆ ಯಾರ ಬೆಂಬಲವೂ ಬೇಡ. ನನಗಾಗಿ ಯಾರೂ ಕೂಗೋದು ಬೇಡ. ಯಾವ ನಾಯಕರು, ಶಾಸಕರು, ಬೆಂಬಲಿಗರು ಕೂಗೋದು ಬೇಡ ಎಂದರು.

ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದು, ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ ಎಂದು ಸಿ.ಟಿ.ರವಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ನಕ್ಸಲರ ಶಸ್ತ್ರಾಸ್ತ್ರ ವಿಚಾರವಾಗಿ ಸಿ.ಟಿ. ರವಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, "ಮುಖ್ಯಮಂತ್ರಿಗಳ ಬಳಿ ಬಂದು ಶರಣಾಗುವಾಗ ಯಾರಾದರೂ ಬಂದೂಕು ಹಿಡಿದುಕೊಂಡು ಬರುತ್ತಾರಾ? ರವಿಗೆ ಇಷ್ಟು ಸಾಮಾನ್ಯ ಪ್ರಜ್ಞೆ ಇಲ್ಲವೇ?" ಎಂದು ಪ್ರಶ್ನಿಸಿದರು.


ಶೃಂಗೇರಿಯಲ್ಲಿ ವಿಶೇಷ ಪೂಜೆ : ನೇರವಾಗಿ ಶೃಂಗೇರಿ ಶಾರದಾ ಮಠಕ್ಕೆ ಆಗಮಿಸಿದ ಶಿವಕುಮಾರ್ ಅವರು ಆಡಳಿತ ಮಂಡಳಿ ಆಯೋಜನೆ ಮಾಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಶೃಂಗೇರಿ ಶಾರದಾಂಬೆ ಸೇರಿದಂತೆ ಮಠದ ಆವರಣದಲ್ಲಿರುವ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.


ನಂತರ ನರಸಿಂಹ ವನದ ಪಕ್ಕದಲ್ಲಿರುವ ಗುರು ನಿವಾಸಕ್ಕೆ ತೆರಳಿ, ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು.


 ಸಂಸದ ಕ್ಯಾ. ಚೌಟ ಅವರಿಗೆ ಸಲಹೆ ನೀಡಿದ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ



ಮಂಗಳೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳೂರಿನಲ್ಲಿ ಇಂಧನ ಭದ್ರತಾ ಸಮ್ಮಿಟ್ ಆಯೋಜಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸಲಹೆ ನೀಡಿದ್ದು, ಇದಕ್ಕೆ ತಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. 



ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ್ದ ಅವರಿಗೆ, ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿನ ಸಾಮರ್ಥ್ಯವನ್ನು ಬಳಸಿಕೊಳ್ಳಲು ದೊಡ್ಡ ನಗರಗಳನ್ನು ಮೀರಿ ಇಂಧನ ಭದ್ರತಾ ಶೃಂಗಸಭೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಯ ಬಗ್ಗೆ ಲೇಖಕಿ ಹರ್ಷ ಭಟ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಭರವಸೆ ನೀಡಿದ್ದಾರೆ.


 " ಮಂಗಳೂರಿನಂತಹ ನಗರದಲ್ಲಿ ಖಂಡಿತವಾಗಿಯೂ ಇಂಧನ ಭದ್ರತಾ ಸಮಿಟ್ ಮಾಡಬಹುದು. ನನ್ನ ಸ್ನೇಹಿತ ಮತ್ತು ಸಂಸದರಾದ ಕ್ಯಾ. ಚೌಟ ಅವರು ನಿನ್ನೆ ಈ ಭಾಗದ ಎಲ್ಲಾ ತೈಲ ಮಾರಾಟ ಕಂಪನಿಗಳ ಪ್ರಮುಖರನ್ನು ಭೇಟಿ ಮಾಡಿದ್ದಾರೆ. ಒಂದು ವೇಳೆ ನೀವು ಇಲ್ಲಿಇಂಧನ ಭದ್ರತಾ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದರೆ, ಈ ತೈಲ ಕಂಪನಿಗಳೊಂದಿಗೆ ಮಾತನಾಡಬಹುದು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. ಭಾರತ ಇಂಧನ ಸಪ್ತಾಹದ ಜತೆಗೆ ಇಂಥ ಇಂಧನ ಭದ್ರತಾ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಹೆಚ್ಚಿನ ತೈಲೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ, ಅನುಕೂಲತೆ ದೊರೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


“ಇಂಧನ ಸಪ್ತಾಹಕ್ಕೆ ಆಹ್ವಾನ”

ಮೊತ್ತ ಮೊದಲ ಭಾರತ ಇಂಧನ ಸಪ್ತಾಹವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದು ಬಳಿಕ ಗೋವಾದಲ್ಲಿ ನಡೆಸಿದ್ದೆವು. ನಂತರ ಗೋವಾವನ್ನು ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯು) ಗಾಗಿ ಶಾಶ್ವತ ಸ್ಥಳವಾಗಿ ಆಯ್ಕೆ ಮಾಡಿ ಅಲ್ಲಿ ಸವಲತ್ತುಗಳನ್ನು ಒದಗಿಸುತ್ತಿದ್ದೇವೆ. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್‌ (ಒಎನ್‌ಜಿಸಿ) ಗೋವಾದಲ್ಲಿ 240 ಎಕರೆ ಭೂಮಿಯನ್ನು ಹೊಂದಿದ್ದು, ದೆಹಲಿಯಲ್ಲಿರುವ ಭಾರತ್ ಮಂಗಳಂ ಅಥವಾ ಯಶೋ ಭೂಮಿಯಂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿದರೆ ಮುಂದೆ ಜಾಗತಿಕ ಮಟ್ಟದ ಸಂಸ್ಥೆಗಳು ಇಲ್ಲಿ ತಮ್ಮ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಲಿದೆ "ಎಂದರು.



ದೆಹಲಿಯಲ್ಲಿ ಇಂಡಿಯಾ ಎನರ್ಜಿ ವೀಕ್ ಆಯೋಜಿಸಿದ್ದ ವೇಳೆ ಈ ರೀತಿಯ ವಸ್ತುಪ್ರದರ್ಶನವನ್ನು ಯುವಜನತೆ ನೋಡಬೇಕು ಎನ್ನುವ ಸಲಹೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದರು. ಹೀಗಾಗಿ, ಮೋದಿ ಅವರ ಸಲಹೆಯಂತೆ ಈ ಬಾರಿಯ ಇಂಡಿಯಾ ಎನರ್ಜಿ ವೀಕ್ ನಲ್ಲಿ ಪ್ರತಿದಿನವೂ ಯುವ ಸಮುದಾಯ ಸೇರಿದಂತೆ ಎಲ್ಲ ಸಾರ್ವಜನಿಕರು ಕೂಡ ಮುಕ್ತವಾಗಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗುವುದು. ಒಂದು ತಿಂಗಳ ಕಾಲ ನಡೆಯುವ ಈ ಇಂಡಿಯಾ ಎನರ್ಜಿ ವೀಕ್ ಶೀಘ್ರದಲ್ಲೇ ಶುರುವಾಗಲಿದೆ ಎಂದು ಸಚಿವರು ತಿಳಿಸಿದರು.


ದೇಶದಲ್ಲಿ ಮೂರು ವರ್ಷಗಳ ಹಿಂದೆಯಷ್ಟೇ ಇಂಡಿಯಾ ಇಂಧನ ಸಪ್ತಾಹ ಪಾರಂಭಿಸಲಾಗಿದೆ. ಆದರೆ, ಪ್ರಸ್ತುತ ಇದು ವಿಶ್ವದಲ್ಲೇ ಅತಿದೊಡ್ಡ ಇಂಧನ ವಸ್ತು ಪ್ರದರ್ಶನವಾಗಿ ಬದಲಾಗಿದೆ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ತಂತ್ರಜ್ಞಾನ, ಸಲಕರಣೆಗಳು ಈ ಇಂಡಿಯಾ ಇಂಧನ ವೀಕ್ ನಲ್ಲಿ ಪ್ರದರ್ಶನಗೊಳ್ಳಲಿದ್ದು, ಸ್ಟಾರ್ಟಪ್ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ, ಮಾರ್ಗದರ್ಶನ ಪಡೆಯುವುದಕ್ಕೆ ಉತ್ತಮ ವೇದಿಕೆಯಾಗಿದೆ. ಹೀಗಾಗಿ, ಎಲ್ಲ ಯುವಜನರು ಕೂಡ ಈ ಇಂಡಿಯಾ ಎನರ್ಜಿ ವೀಕ್ ಗೆ ಭೇಟಿ ನೀಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಕರೆ ನೀಡಿದ್ದಾರೆ.

 ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನಕ್ಸಲ್​ ಶರಣಾಗತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.



ಮಂಗಳೂರು (ದಕ್ಷಿಣ ಕನ್ನಡ) : ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ಶರಣಾಗತಿ, ಎನ್‌ಕೌಂಟರ್ ಬಗ್ಗೆ ಅನುಮಾನ ಮೂಡುತ್ತಿದೆ. ಇಲ್ಲಿ ರಾಜಕೀಯ ಮೈಲೇಜ್ ಪಡೆಯಲು ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆಪಾದಿಸಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ನಿಯಮ ಬಹಳ ದೊಡ್ಡಮಟ್ಟದ ಪ್ರಕ್ರಿಯೆ. ಶರಣಾಗತಿ ಸಂದರ್ಭದಲ್ಲಿ ಕೆಲವೊಂದು ನಿಯಮಗಳಿರುತ್ತವೆ. ಆದರೆ, ಕರ್ನಾಟಕದಲ್ಲಿ ಮೊನ್ನೆ ನಡೆದ ನಕ್ಸಲ್ ಶರಣಾಗತಿ ಸ್ವಲ್ಪ ಅನುಮಾನ ಮೂಡಿಸುತ್ತಿದೆ. ನಕ್ಸಲ್ ಮುಖಂಡ ವಿಕ್ರಮ್ ಗೌಡನ ಎನ್‌ಕೌಂಟರ್‌ನಲ್ಲೂ ಅನುಮಾನವಿದೆ. ಎನ್‌ಕೌಂಟರ್ ಆದ ತಕ್ಷಣ ನಕ್ಸಲ್ ಶರಣಾದರು ಎಂದು ಸರ್ಕಾರ ಹೇಳುತ್ತಿದೆ. ನಕ್ಸಲರು ಶರಣಾಗುವಂತೆ ಯಾರು ಮಾತುಕತೆ ನಡೆಸಿದರು‌ ಎಂಬುದು ಗೊತ್ತಿಲ್ಲ. ನಕ್ಸಲ್ ತಂಡದೊಳಗಡೆ ಇರುವ ಆಂತರಿಕ ರಾಜಕೀಯವನ್ನು ಕಾಂಗ್ರೆಸ್ ದುರ್ಬಳಕೆ ಮಾಡುತ್ತಿದೆಯೇ? ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು.

ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ನಕ್ಸಲರ ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹಸಚಿವರೇ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ‌ ಎಂದು ಹೇಳಿದರು.

ಹಿಂದಿ ಮಾತ್ರವಲ್ಲ, ಭಾರತದ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಗಳು - ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಅವರು ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಹೇಳಿಕೆಯ ವಿಚಾರದಲ್ಲಿ ಮಾತನಾಡಿದ ಅವರು, ಹಿಂದಿಭಾಷೆ ಭಾರತದ ಒಂದು ಅಫಿಶಿಯಲ್ ಲ್ಯಾಂಗ್ವೇಜ್.‌ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಎಲ್ಲಾ ಭಾಷೆಯೂ ರಾಷ್ಟ್ರೀಯ ಭಾಷೆ ಎಂದು ಬಹಳಷ್ಟು ಕಡೆ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಪ್ರಕಾರ ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ. ಪ್ರಧಾನಿ ಕನ್ನಡ, ತಮಿಳು ಭಾಷೆಗಳಿಗೆ ಬಹಳ ಮರ್ಯಾದೆ ಕೊಡುತ್ತಾರೆ ಎಂದರು.


ಅಶ್ವಿನ್ ಒಂದು ದೃಷ್ಟಿಕೋನದಲ್ಲಿ ಹೇಳಿದ್ದಾರೆ. ಎಲ್ಲಿ ಕೂಡಾ ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆ. ಆ ಅರ್ಥದಲ್ಲಿ ಅಶ್ವಿನ್ ಹೇಳಿದ್ದಾರೆ ಅಷ್ಟೇ, ಬೇರೇನೂ ವಿಚಾರವಿಲ್ಲ ಎಂದು ಹೇಳಿದರು.

 ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಮಾಜಿ ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರ ಸಭೆ ನಡೆಯಿತು.



ಬೆಂಗಳೂರು: ಪಕ್ಷ ಬಲವರ್ಧನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಇಂದು ಬಿಜೆಪಿ ಮಾಜಿ ಶಾಸಕರು ಮತ್ತು ಮಾಜಿ ಪರಿಷತ್ ಸದಸ್ಯರ ಮಹತ್ವದ ಸಭೆ ನಡೆಯಿತು.


ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ವಿ.ಕೃಷ್ಣ ಭಟ್ ಮತ್ತಿತರರು ಭಾಗವಹಿಸಿದ್ದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಪಕ್ಷದ ಕೆಲವು ಪದಾಧಿಕಾರಿಗಳಿಗೆ ಮಾತ್ರ ಭೋಜನಕೂಟಕ್ಕೆ ಆಹ್ವಾನ ಕೊಡಲಾಗಿತ್ತು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಭೋಜನಕೂಟಕ್ಕೆ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್‌ ಸದಸ್ಯರು, ಪಕ್ಷದ ಪ್ರಮುಖರು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.


ಮುಂಬರುವ 2028ರ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ನಾಯಕತ್ವ ಬದಲಾವಣೆ ಮಾಡಬಾರದು. ಅವರ ಮುಂದಾಳತ್ವದಲ್ಲೇ ಚುನಾವಣೆ ಎದುರಿಸೋಣ. ಸಾಧ್ಯವಾದರೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ: ನಾನು ಅಧ್ಯಕ್ಷನಾದ ಮೇಲೆ ಕೆಲಸದ ಒತ್ತಡ, ಬೇರೆ ಬೇರೆ ಕಾರಣಕ್ಕೆ ಸಭೆ ಮಾಡಲು ಆಗಿರಲಿಲ್ಲ. ಹಾಗಾಗಿ, ಮಾಜಿ ಶಾಸಕರು ಹಾಗೂ ಎಂಎಲ್​ಸಿಗಳ ಸಭೆ ಕರೆಯಲಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲಾ, ತಾಲೂಕು ಹಾಗೂ ಬಿಬಿಎಂಪಿ ಚುನಾವಣೆ ಎದುರಿಸಬೇಕೆಂದು ಚರ್ಚೆ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಣ್ಣ ಪುಟ್ಟ ಗೊಂದಲ, ವ್ಯತ್ಯಾಸಗಳು ಇರುತ್ತವೆ. ಅದೆಲ್ಲವನ್ನೂ ವರಿಷ್ಠರು ಗಮನಿಸುತ್ತಿದ್ದಾರೆ. ಯಡಿಯೂರಪ್ಪ ಸೇರಿ ಹಿರಿಯರು ಎಲ್ಲಾ ಮಾರ್ಗದರ್ಶನ ಕೊಟ್ಟಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇವತ್ತಿನ ಸಭೆ ಯಾವುದೇ ಬಲ ಪ್ರದರ್ಶನ, ಯಾರನ್ನೋ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಅಂತಾ ಮಾಡಿರುವುದಲ್ಲ ಎಂದರು.


ಇವತ್ತಿನ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗುವ ಬಗ್ಗೆ ಚರ್ಚೆ ಆಗಿದೆ. ಸರ್ಕಾರದ ವಿರುದ್ಧ ಹೋರಾಟದ ಬಗ್ಗೆಯೂ ಚರ್ಚಿಸಿದ್ದೇವೆ. ಪಕ್ಷವನ್ನು ಹೇಗೆ ಸರಿಪಡಿಸಬೇಕು ಎನ್ನುವ ಪ್ರಜ್ಞೆ ನನಗೂ ಇದೆ. ಈ ನಿಟ್ಟಿನಲ್ಲಿ ಹಿರಿಯರು ನಮಗೆ ಸಲಹೆ ಕೊಟ್ಟಿದ್ದಾರೆ. ಇದೆಲ್ಲ ಬದಿಗಿಟ್ಟು ಪಕ್ಷದ ಸಂಘಟನೆಗೆ ಒತ್ತು ಕೊಟ್ಟು ಈ ಸಭೆ ನಡೆಸಲಾಗಿದೆ ಎಂದರು.

ಕಾಂಗ್ರೆಸ್ ಒಳ ಪಾಲಿಟಿಕ್ಸ್​ಗೆ ವಿಜಯೇಂದ್ರ ಟಾಂಗ್ : ಅಧಿಕಾರವನ್ನು ಒದ್ದು ಕಿತ್ಕೋಬೇಕು ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಅವರ ಗುರುಗಳು ಹಿಂದೊಮ್ಮೆ ಹೇಳಿದ್ದರಂತೆ. ಈ ಮಾತನ್ನು ಚಳಗಾಲದ ಅಧಿವೇಶನದಲ್ಲಿ ಡಿಕೆಶಿ ನೆನಪಿಸಿಕೊಂಡರು. ಈ ಮಾತಿನ ಮರ್ಮ, ಅರ್ಥ ಏನು ಅಂತ ಅರ್ಥ ಮಾಡ್ಕೊಳ್ಳಿ. ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಬೇಕು. ಆದರೆ, ನಮಗಿರುವ ಮಾಹಿತಿ ಸಿದ್ದರಾಮಯ್ಯ ಅವಧಿ ಮುಗಿಯುತ್ತಿದೆ. ಹಾಗಾಗಿ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ. ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಮಾಡಿಸ್ತಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ ಎಂದು ಹೇಳಿದರು.

 


ನಾಗುರ: ಮುಂಬರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಶಿವಸೇನಾ (ಯುಬಿಟಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ರಾಜ್ಯಸಭಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂಡಿಯಾ ಬಣ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ.

'ಮೈತ್ರಿ ಮಾಡಿಕೊಂಡರೆ, ಪಕ್ಷಗಳ ಕಾರ್ಯಕರ್ತರಿಗೆ ಅವಕಾಶ ಸಿಗುವುದಿಲ್ಲ. ಇದರಿಂದ ಪಕ್ಷದ ಬೆಳಗವಣಿಗೆಗೆ ತೊಡಕುಂಟಾಗಲಿದೆ. ನಾವು ಮುಂಬೈ, ಠಾಣೆ, ನಾಗುರ ಸೇರಿ ಇತರ ಮುನ್ಸಿಪಲ್ ಕಾರ್ಪೊರೇಷನ್‌ಗಳು, ಜಿಲ್ಲಾ ಪಂಚಾಯತ್ ಹಾಗೂ ಇತರ ಪಂಚಾಯತ್‌ಗಳಲ್ಲಿ ನಮ್ಮ ಬಲದಿಂದಲೇ ಸ್ಪರ್ಧೆ ಮಾಡುತ್ತೇವೆ' ಎಂದು ರಾವುತ್ ಹೇಳಿದ್ದಾರೆ.


ಏಕಾಂಗಿಯಾಗಿ ಸ್ಪರ್ಧೆ ಮಾಡಬೇಕು ಎಂದು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟವೇ ಸೋಲಿಗೆ ಕಾರಣ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್ ಅವರಿಗೆ ತಿರುಗೇಟು ನೀಡಿದ ರಾವುತ್, ಒಮ್ಮತ ಮತ್ತು ಹೊಂದಾಣಿಕೆಯಲ್ಲಿ ನಂಬಿಕೆ ಇಲ್ಲದವರಿಗೆ ಮೈತ್ರಿ ಮಾಡಿಕೊಳ್ಳುವ ಹಕ್ಕಿಲ್ಲ ಎಂದು ಹೇಳಿದ್ದಾರೆ.


ಲೋಕಸಭೆ ಚುನಾವಣೆಯ ನಂತರ ಇಂಡಿಯಾ ಮೈತ್ರಿಕೂಟ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.


'ನಮಗೆ ಇಂಡಿಯಾ ಮೈತ್ರಿಕೂಟಕ್ಕೆ ಸಂಚಾಲಕರನ್ನು ನೇಮಿಸಲು ಸಾಧ್ಯವಾಗಲಿಲ್ಲ. ಅದು ಒಳ್ಳೆಯದಲ್ಲ. ಮೈತ್ರಿಕೂಟದ ದೊಡ್ಡ ಪಕ್ಷವಾಗಿ, ಸಭೆಯನ್ನು ಕರೆಯುವುದು ಕಾಂಗ್ರೆಸ್‌ನ ಜವಾಬ್ದಾರಿಯಾಗಿದೆ' ಎಂದು ಅವರು ಹೇಳಿದ್ದಾರೆ.

 


ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಈಗಾಗಲೇ ಉತ್ತರಪ್ರದೇಶ ಸರ್ಕಾರವು ಸಕಲ ತಯಾರಿ ನಡೆಸಿದ್ದು, ಈ ಬಾರಿ 40 ಕೋಟಿ ಜನ ಭಾಗಿಯಾಗುವ ನಿರೀಕ್ಷೆ ಇದೆ. ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರವು 6 ಸಾವಿರಕ್ಕೂ ಅಧಿಕ ಪೊಲೀಸರನ್ನು (Police) ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆಯನ್ನು ವಹಿಸಿದೆ. ಇನ್ನೂ ಕಾರ್ಯಕ್ರಮದ ಕುರಿತಾಗಿ ಮಾತನಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಸನಾತನ ಧರ್ಮವನ್ನು ನಂಬುವವರಿಗೆ ಸ್ವಾಗತ ಎಂದು ಹೇಳಿದ್ದಾರೆ.

ಮಹಾಕುಂಭಮೇಳ ತಯಾರಿ ಸಂಬಂಧ ನಡೆದ ಸಭೆ ಬಳಿಕ ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಸನಾತನ ಸಂಪ್ರದಾಯವನ್ನು ಪಾಲಿಸುವ ಮತ್ತು ಭಾರತದ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳುವ ಮುಸ್ಲಿಮರನ್ನು ನಾವು ಮಹಾಕುಂಭ ಮೇಳಕ್ಕೆ ಸ್ವಾಗತಿಸುತ್ತೇನೆ. ತಪ್ಪು ತಿಳುವಳಿಕೆಯನ್ನು ಇಟ್ಟುಕೊಂಡು ಬಂದಿರುವವರಿಗೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ತಮ್ಮ ಪೂರ್ವಜರು ಒತ್ತಡದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಭಾವಿಸುವ ಮುಸ್ಲಿಮರು ತಮ್ಮ ಗೋತ್ರವನ್ನು ಭಾರತೀಯ ಋಷಿಗಳೊಂದಿಗೆ ಸಂಪರ್ಕಿಸುವ ಸನಾತನಿ ಎಂದು ಭಾವಿಸುತ್ತಾರೆ. ಸಾಂಪ್ರದಾಯಿಕ ರೀತಿಯಲ್ಲಿ ಸಂಗಮಕ್ಕೆ ಬಂದು ಸ್ನಾನ ಮಾಡಲು ಮುಕ್ತರಾಗಿದ್ದಾರೆ. ಅಂತಹ ಜನರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ಹೇಳಿದ್ದಾರೆ.

ಮಹಾಕುಂಭಮೇಳಕ್ಕೆ ಮುಸ್ಲಿಮರ ಪಾಲ್ಗೊಳ್ಳುವಿಕೆಗೆ ನಿರ್ಬಂಧ ಹೇರುವಂತೆ ಆಗ್ರಹಿಸಿ ಅಖಾರಾ ಪರಿಷತ್‌ ಮನವಿ ಮಾಡುವ ಮೂಲಕ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿತ್ತು. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದು, ಭುಗಿಲೆದ್ದಿರುವ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

 


ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಅವರು 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಗೆಲುವಿನ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (‌RSS) ಕೆಲಸವನ್ನು ಶ್ಲಾಘಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿದ್ದ ಬಿಜೆಪಿ ಸ್ಪರ್ಧೆ ಮಾಡಿದ್ದ 149 ಕ್ಷೇತ್ರಗಳಲ್ಲಿ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ ಇಂಡಿಯಾ ಬ್ಲಾಕ್‌ ನ ಭಾಗವಾಗಿದ್ದ ಶರದ್‌ ಪವಾರ್‌ ಅವರ ಎನ್‌ ಸಿಪಿ ಕೇವಲ 10 ಸ್ಥಾನಗಳನ್ನು ಗೆದ್ದುಕೊಂಡಿದೆ.

ಮೂಲಗಳ ಪ್ರಕಾರ, ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಆರ್‌ಎಸ್‌ಎಸ್‌‌ ನ ಕಾರ್ಯ ವಿಧಾನ ಮತ್ತು ಅದರ ಆಕ್ರಮಣಕಾರಿ ಹಿಂದುತ್ವ ಪ್ರಚಾರವು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳು ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ ಉತ್ತಮ ಮತ ಪಡೆದಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು.

ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಿಸಿದ ಪವಾರ್, ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಎನ್‌ಸಿಪಿ (ಶರದ್‌ ಪವಾರ್‌ ಬಣ) ಸಂತೃಪ್ತವಾಯಿತು, ಆದರೆ ಅವರ ವಿರೋಧ ಪಕ್ಷಗಳು ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದರು ಎಂದರು.


ಆರ್‌ಎಸ್‌ಎಸ್ ಕಾರ್ಯಕರ್ತರ ಬಗ್ಗೆ ಉದಾಹರಣೆ ನೀಡಿದ ಅವರು ತಳಮಟ್ಟದವರೆಗೂ ಸಂಘಟನೆಯ ನಿಖರ ಕೆಲಸವನ್ನು ಪವಾರ್ ಶ್ಲಾಘಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಸ್ಥಾನಗಳನ್ನು ನೀಡುವ ಗುರಿಯನ್ನು ಪಕ್ಷ ಹೊಂದಿದೆ ಎಂದು ಅವರು ಹೇಳಿದರು.

 


ಬೆಂಗಳೂರು: ಬಿಗ್ ಬಾಸ್ ಸೀಸನ್ -11 ಮನೆಗೆ ಮೊದಲ ಫೈನಾಲಿಸ್ಟ್ ಸಿಕ್ಕಿದ್ದಾರೆ. ನೀವು ಫಿನಾಲೆ ಟಾಸ್ಕ್ ಗೆ ಅರ್ಹರಾಗಿದ್ದೀರಿ ಎಂದು ಗೌತಮಿ ಅವರು ಮಂಜು ಅವರಿಗೆ ಹೇಳಿದ್ದಾರೆ. ಆ ಬಳಿಕ ದೊತ್ಮನೆಯಲ್ಲಿ ಫಿನಾಲೆ ಟಾಸ್ಕ್ ಶುರುವಾಗಿದೆ.

ರಜತ್, ಹನುಮಂತು, ಭವ್ಯ ಹಾಗೂ ತಿವಿಕ್ರಮ್ ಅವರಿಗೆ ಸಾಹಸಮಯ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಯಾರು ತುಂಬಾ ಬೇಗ ಟಾಸ್ಕ್ ಪೂರ್ತಿಗೊಳಿಸುತ್ತಾರೋ ಅವರು ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ.

ಅದರಂತೆ ನಾಲ್ವರು ತೀವ್ರ ಪೈಪೋಟಿ ನೀಡಿ ಟಾಸ್ಕ್ ಪೂರ್ತಿಗೊಳಿಸಿದ್ದಾರೆ. 'ಭೂ ಮಂತರ್' ಸಿನಿಮಾದ ಪ್ರಚಾರಕ್ಕೆ ಬಂದ ಶರಣು ಹಾಗೂ ಚಿತ್ರದ ನಾಯಕಿ ಅದಿತಿ ಅವರು ಬಿಗ್ ಬಾಸ್ ಮನೆಗೆ ಬಂದು ಫಿನಾಲೆ ಟಿಕೆಟ್ ಕೊಟ್ಟಿದ್ದಾರೆ.

ಭವ್ಯ ಅವರು ಟಾಸ್ಕ್ ಪೂರ್ತಿಗೊಳಿಸಲು 3 ನಿಮಿಷ 22 ಸೆಕೆಂಡ್ ಗಳನ್ನು ತೆಗೆದುಕೊಂಡಿದ್ದಾರೆ. ರಜತ್ ಅವರು 3 ನಿಮಿಷ 49 ಸೆಕೆಂಡ್, ತ್ರಿವಿಕ್ರಮ್ ಅವರು 2 ನಿಮಿಷ 29 ಸೆಕೆಂಡ್ ಗಳನ್ನು ತೆಗೆದುಕೊಂಡಿದ್ದಾರೆ. ಹನುಮಂತು ಅವರು 2 ನಿಮಿಷ 27 ಸೆಕೆಂಡ್ ಗಳಲ್ಲಿ ಟಾಸ್ಕ್ ಪೂರ್ತಿಗೊಳಿಸಿದ್ದಾರೆ.

ಟಾಸ್ಕ್ ವೇಗವಾಗಿ ಪೂರ್ತಿಗೊಳಿಸಿದ ಹನುಮಂತು ಅವರಿಗೆ ಶರಣ್‌ ಫಿನಾಲೆ ಟಿಕೆಟ್ ಹಸ್ತಾಂತರ ಮಾಡಿದ್ದಾರೆ. ಫಿನಾಲೆಗೆ ಹೋದ ಸ್ಪರ್ಧಿ ಮನೆಯ ಕೊನೆಯ ಕ್ಯಾಪ್ಟನ್ ಆಗಿಯೂ ಆಯ್ಕೆ ಆಗಿದ್ದಾರೆ.


ನಾನು ಅನ್ನೊಂಡಿರಲಿಲ್ಲ ಇದನ್ನು ಸಾಧಿಸುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದವೆಂದು ಹನುಮಂತು ಹೇಳಿದ್ದಾರೆ.ಇನ್ನು ಈ ವಾರ ಕಳಪೆಯನ್ನು ಮಂಜು ಅವರಿಗೆ ಮನೆಮಂದಿ ನೀಡಿದ್ದಾರೆ.


ಚೈತ್ರಾ, ಹನುಮಂತು, ಗೌತಮಿ, ರಜತ್, ಮೋಕ್ಷಿತಾ ಅವರು ಮಂಜು ಅವರಿಗೆ ಕಳಪೆ ನೀಡಿದ್ದಾರೆ. ಕಳಪೆ ಬಟ್ಟೆಯನ್ನು ತೊಟ್ಟು ಮಂಜು ಜೈಲಿಗೆ ಹೋಗಿದ್ದಾರೆ.

 ಬ್ರಹ್ಮರಥೋತ್ಸವ ಕಣ್ತುಂಬಿಕೊಳ್ಳಲು ಬಂದ ಸಹಸ್ರಾರು ಭಕ್ತರು 


ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಜ.10 ರಂದು ರಾತ್ರಿ ಶ್ರೀ ಚೆನ್ನಕೇಶವ ದೇವರ ವೈಭವದ ಬ್ರಹ್ಮರಥೋತ್ಸವ ನಡೆಯಿತು. ನೂತನ ಬ್ರಹ್ಮರಥದಲ್ಲಿ ನಡೆದ ವೈಭವದ ರಥೋತ್ಸವವನ್ನು ನೆರೆದ ಭಕ್ತ ಸಮೂಹ ಭಕ್ತಿ, ಸಂಭ್ರಮದಿಂದ ಕಣ್ತುಂಬಿಕೊಂಡರು. ಸಾವಿರಾರು ಮಂದಿ ಭಕ್ತರ ಕಂಠದಿಂದ ಹೊರ ಹೊಮ್ಮಿದ ಚೆನ್ನಕೇಶವನಿಗೆ ಗೋವಿಂದ.. ಗೋವಿಂದ.. ಜಯ ಘೋಷದ ಮಧ್ಯೆ ಬ್ರಹ್ಮ ರಥೋತ್ಸವ ರಥಬೀದಿಯಲ್ಲಿ ಸಾಗಿತು. ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ, ಪಲ್ಲಕ್ಕಿ ಉತ್ಸವ ನಡೆದು ಚೆನ್ನಕೇಶವ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು. ರಥದಲ್ಲಿ ವಿಶೇಷ ಪೂಜೆಯ ಬಳಿಕ ರಥವು ರಥಬೀದಿಯಲ್ಲಿ ಸಾಗಿತು. ಕಲ್ಕುಡ ದೈವ ಮತ್ತು ಕಾನತ್ತಿಲ ದೈವದ ಕೋಲಗಳು ರಥದ ಜೊತೆಯಲ್ಲಿ ಆಗಮಿಸಿದವು. ಸಾವಿರಾರು ಭಕ್ತರ ಮುಗಿಲು ಮುಟ್ಟಿದ ಜಯ ಘೋಷದ ಉದ್ಘಾರದ ಮಧ್ಯೆ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಪ್ರಭೆಯಲ್ಲಿ ವೈಭವೋಪೇತವಾಗಿ ರಥಬೀದಿಯಲ್ಲಿ ಸಾಗಿ ಬಂದ ರಥವು ಮುಖ್ಯ ರಸ್ತೆಯ ದ್ವಾರದ ಬಳಿಯ ರಥೋತ್ಸವ ಕಟ್ಟೆಯ ಬಳಿಗೆ ಆಗಮಿಸಿತು. ಚೆನ್ನಕೇಶವ ದೇವರನ್ನು ರಥದಿಂದ ಇಳಿಸಿ ಶೃಂಗರಿಸಿದ್ದ ಕಟ್ಟೆಯಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆ ನಡೆದು ಪ್ರಸಾದ ವಿತರಿಸಿದ ಬಳಿಕ ದೇವರು ರಥದಲ್ಲಿ ದೇವಾಲಯಕ್ಕೆ ಹಿಂತಿರುಗಿತು. ಸುಳ್ಯದ ಒಡೆಯ ಶ್ರೀ ಚೆನ್ನಕೇಶವನ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆದ ವರ್ಣ ವೈಭವದ ರಥೋತ್ಸವವನ್ನು ಊರ ಹಾಗೂ ಪರವೂರಿನಿಂದ ಆಗಮಿಸಿದ ಸಹಸ್ರಾಸರು ಮಂದಿ ಕಣ್ತುಂಬಿಕೊಂಡರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ , ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಕುಟುಂಬಸ್ಥರು ಚೆನ್ನಕೇಶವನಿಗೆ ನೂತನ ಬ್ರಹ್ಮರಥ ನೀಡಿದ್ದರು. ಚೆನ್ನಕೇಶವನಿಗೆ ನೂತನ ಬ್ರಹ್ಮರಥ ಸಮರ್ಪಣೆಯಾದ ಬಳಿಕ ನಡೆದ ನಡೆದ ಮೊದಲ ಬ್ರಹ್ಮ ರಥೋತ್ಸವ ನಡೆಯಿತು.

 ರಾಜ್ಯ ಸರ್ಕಾರ ಪ್ರಸ್ತುತ ತೆರಿಗೆ ಸಂಗ್ರಹದಲ್ಲಿ ಬಜೆಟ್ ಗುರಿ ತಲುಪಲು ಸಾಧ್ಯವಾಗಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶಗಳ ವಿವರ ಈ ಕೆಳಗಿನಂತಿದೆ.



ಬೆಂಗಳೂರು: ಪಂಚ ಗ್ಯಾರಂಟಿ ಹಾಗೂ ಗರಿಷ್ಠ ಬದ್ಧ ವೆಚ್ಚದ ಹೊರೆಯ ಮಧ್ಯೆ ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಗೆ ಕಸರತ್ತು ನಡೆಸುತ್ತಿದೆ. ಆದರೆ ಆರ್ಥಿಕ ವರ್ಷದ 9 ತಿಂಗಳು ಕಳೆದರೂ ಸ್ವಂತ ರಾಜಸ್ವ ಬಜೆಟ್ ಗುರಿ ತಲುಪಲು ಸಾಧ್ಯವಾಗಿಲ್ಲ. ಈವರೆಗಿನ ರಾಜ್ಯಸ್ವ ತೆರಿಗೆ ಸಂಗ್ರಹದ ಸ್ಥಿತಿಗತಿಯ ಬಗ್ಗೆ ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶಗಳ ವರದಿ ಇಲ್ಲಿದೆ.


ಪ್ರಸಕ್ತ ಬಜೆಟ್ ವರ್ಷದ ಅಂತಿಮ ತ್ರೈಮಾಸಿಕದಲ್ಲಿರುವ ಕಾಂಗ್ರೆಸ್ ಸರ್ಕಾರ ಇದೀಗ ಮುಂದಿನ ಆರ್ಥಿಕ ವರ್ಷದ ಬಜೆಟ್ ಸಿದ್ಧತೆ ಆರಂಭಿಸಿದೆ. ಬಜೆಟ್ ವರ್ಷದ 9 ತಿಂಗಳು ಕಳೆದಿದ್ದು, ಸಿಎಂ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಬಜೆಟ್ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ‌ ಬಜೆಟ್​​​ಗೆ ತಯಾರಿ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಆದಾಯ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿಎಂ ಕಳೆದ ನವೆಂಬರ್​​ನಲ್ಲಿ ಸಭೆ ನಡೆಸಿ ಬಜೆಟ್ ಗುರಿಯಂತೆ ತೆರಿಗೆ ಸಂಗ್ರಹಿಸುಂತೆ ಸೂಚಿಸಿದ್ದರು. ಆದರೆ, ವಾಸ್ತವದಲ್ಲಿ ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ಬಜೆಟ್ ವರ್ಷದ ಮೂರು ತ್ರೈಮಾಸಿಕ ಕಳೆದರೂ ರಾಜಸ್ವ ಸಂಗ್ರಹದ ಬಜೆಟ್ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.‌ ಡಿಸೆಂಬರ್​​ವರೆಗೆ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳು ಬಜೆಟ್ ನಿರೀಕ್ಷೆಯ ಮುಂದೆ ಸುಮಾರು 10 ರಿಂದ ಶೇ15ರಷ್ಟು ಆದಾಯ ಸಂಗ್ರಹ ಕೊರತೆ ಎದುರಿಸುತ್ತಿವೆ. ಕಳೆದ ಬಾರಿಯೂ ಬಜೆಟ್ ಗುರಿಯಂತೆ ಆದಾಯ ಸಂಗ್ರಹವಾಗುವಲ್ಲಿ ವಿಫಲವಾಗಿತ್ತು. ಆಗ ತೀವ್ರ ಬರದ ಹಿನ್ನೆಲೆ ಆದಾಯವು ನಿರೀಕ್ಷಿತ ಗುರಿ ತಲುಪಲಿಲ್ಲ. ಆದರೆ ಈ ಬಜೆಟ್ ವರ್ಷದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಪ್ರಗತಿ ಕಂಡಿದೆ. ಆದರೆ, ಈ ಬಾರಿ ಉತ್ತಮ ಮಳೆ, ಬೆಳೆ ಆದರೂ ಆದಾಯ ಸಂಗ್ರಹ ಬಜೆಟ್ ಗುರಿ ತಲುಪಿಲ್ಲ.


ಈವರೆಗೆ 15,527 ಕೋಟಿ ರೂ. ತೆರಿಗೆ ಸಂಗ್ರಹ ಕುಂಠಿತ: ಆರ್ಥಿಕ ಇಲಾಖೆ ಮಾಹಿತಿ ಪ್ರಕಾರ, ವಾರ್ಷಿಕ ತೆರಿಗೆ ಸಂಗ್ರಹದ ಬಜೆಟ್ ಗುರಿ ಇರುವುದು 1,87,525 ಕೋಟಿ ರೂ. ಆಗಿದೆ. ಆ ಪೈಕಿ ಒಟ್ಟು ನಾಲ್ಕು ಪ್ರಮುಖ ತೆರಿಗೆಗಳ ಮೂಲಕ ಡಿಸೆಂಬರ್​​ವರೆಗೆ 1,25,101 ಕೋಟಿ ರೂ.‌ ರಾಜಸ್ವ ಸಂಗ್ರಹವಾಗಿದೆ. ಅಂದರೆ 66%ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಮಾಸಿಕ ಸರಾಸರಿ 13,900 ಕೋಟಿ ರೂ.ಗಳಂತೆ 9 ತಿಂಗಳಲ್ಲಿ ಒಟ್ಟು ತೆರಿಗೆ ಸಂಗ್ರಹ ಮಾಡಲಾಗಿದೆ. ಅಂದರೆ ಮಾಸಿಕ ಸರಾಸರಿ ಶೇ11.11ರಂತೆ ತೆರಿಗೆ ಸಂಗ್ರಹ ಮಾಡಲಾಗಿದೆ. ಬಜೆಟ್ ಗುರಿಯಂತೆ 9 ತಿಂಗಳಲ್ಲಿ ಸುಮಾರು 1,40,628 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಾಗಿತ್ತು. ಡಿಸೆಂಬರ್​​ವರೆಗೆ ಬಜೆಟ್ ಗುರಿಗಿಂತ ಸುಮಾರು 15,527 ಕೋಟಿ ರೂ. ತೆರಿಗೆ ಸಂಗ್ರಹ ಕುಂಠಿತವಾಗಿದೆ.

ಆರ್ಥಿಕ ವರ್ಷದ ಉಳಿದಿರುವ ಕೊನೆಯ 3 ತಿಂಗಳಲ್ಲಿ ರಾಜ್ಯ ಸರ್ಕಾರ ಬಜೆಟ್ ಗುರಿಯಂತೆ ಸುಮಾರು 62,424 ಕೋಟಿ ರೂ. ತೆರಿಗೆ ರಾಜಸ್ವ ಸಂಗ್ರಹಿಸಬೇಕಾಗಿದೆ. ಅಂದರೆ ಉಳಿದಿರುವ ಮೂರು ತಿಂಗಳಲ್ಲಿ ಮಾಸಿಕ ಸರಾಸರಿ ಅಂದಾಜು 20,808 ಕೋಟಿ ರೂ‌.ಗಳಂತೆ ತೆರಿಗೆ ಸಂಗ್ರಹ ಮಾಡಬೇಕಾಗಿದೆ. ಅದರಂತೆ, ಮಾಸಿಕ ಸರಾಸರಿ ಶೇ33 ರಂತೆ ತೆರಿಗೆಗಳನ್ನು ಸಂಗ್ರಹ ಮಾಡಬೇಕು. ಉಳಿದಿರುವ ಮೂರು ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಕಷ್ಟಸಾಧ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ವಾಣಿಜ್ಯ ತೆರಿಗೆ ಸಂಗ್ರಹ: ವಾಣಿಜ್ಯ ತೆರಿಗೆ ಸಂಗ್ರಹ ಡಿಸೆಂಬರ್​​ವರೆಗೆ 75,753 ಕೋಟಿ ರೂ‌. ಆಗಿದೆ. 9 ತಿಂಗಳಲ್ಲಿ ಬಜೆಟ್ ಗುರಿಯಂತೆ ಮಾಸಿಕ 9,167 ಕೋಟಿ ರೂ.ಗಳಂತೆ ಒಟ್ಟು 82,503 ಕೋಟಿ ರೂ. ಸಂಗ್ರಹವಾಗಬೇಕಿತ್ತು. ವಾರ್ಷಿಕ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ 1,10,000 ಕೋಟಿ ಇದೆ. ಇದರಲ್ಲಿ ತೈಲದ ಮೇಲಿನ‌ ಮಾರಾಟ ತೆರಿಗೆ ರೂಪದಲ್ಲಿ 17,284 ಕೋಟಿ ರೂ. ಸಂಗ್ರಹವೂ ಸೇರಿದೆ. ಅಂದರೆ ಬಜೆಟ್ ಗುರಿ ಮುಂದೆ 69% ಸಂಗ್ರಹವಾಗಿದೆ. ಇನ್ನೂ ಬಜೆಟ್ ಗುರಿಯಂತೆ ಒಟ್ಟು 34,247 ಕೋಟಿ ರೂ. ಸಂಗ್ರಹಿಸಬೇಕಾಗಿದೆ.

ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಸಂಗ್ರಹ: ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರೂಪದಲ್ಲಿ ಈ ವರ್ಷ ಡಿಸೆಂಬರ್​​ವರೆಗೆ 16,993 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಆದರೆ, ಬಜೆಟ್ ವಾರ್ಷಿಕ ಗುರಿ ಇರುವುದು 26,000 ಕೋಟಿ ರೂ., ಅಂದರೆ ಬಜೆಟ್ ಗುರಿಯಂತೆ ಮಾಸಿಕ 2,167 ಕೋಟಿ ರೂ.ಗಳಂತೆ 9 ತಿಂಗಳಲ್ಲಿ 19,503 ಕೋಟಿ ರೂ. ಸಂಗ್ರಹವಾಗಬೇಕಿತ್ತು. ಈವರೆಗೆ ಬಜೆಟ್ ಗುರಿಯ ಶೇ75 ರಷ್ಟು ಮಾತ್ರ ಸಂಗ್ರಹವಾಗಿದೆ. ಬಜೆಟ್ ಗುರಿ ತಲುಪಲು ಇನ್ನೂ 9,007 ಕೋಟಿ ರೂ. ಸಂಗ್ರಹಿಸಬೇಕಾಗಿದೆ. ಜಮೀನು ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯವಾಗಿರುವುದರಿಂದ ಕಳೆದೆರಡು ತಿಂಗಳಿಂದ ಆಸ್ತಿ ನೋಂದಣಿ ಕಡಿಮೆಯಾಗಿದೆ. ಇದರಿಂದ ರಾಜಸ್ವ ಸಂಗ್ರಹ ಪ್ರಮಾಣ ಗಣನೀಯವಾಗಿ ಕುಂಟಿತವಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋಟಾರು ವಾಹನ ತೆರಿಗೆ ಸಂಗ್ರಹ: ಮೋಟಾರು ವಾಹನ ತೆರಿಗೆ ಸಂಗ್ರಹದ ವಾರ್ಷಿಕ ಬಜೆಟ್ ಗುರಿ ಇರುವುದು 13,000 ಕೋಟಿ ರೂಪಾಯಿ. ಈ ತೆರಿಗೆ ರೂಪದಲ್ಲಿ ಡಿಸೆಂಬರ್​​ವರೆಗೆ 8,622 ಕೋಟಿ ರೂ. ಸಂಗ್ರಹವಾಗಿದೆ. ಬಜೆಟ್ ಗುರಿಯಂತೆ 9 ತಿಂಗಳಲ್ಲಿ ಮಾಸಿಕ 1,083 ಕೋಟಿ ರೂ.‌ಗಳಂತೆ ಸುಮಾರು 9,750 ಕೋಟಿ ರೂ‌. ಸಂಗ್ರಹಿಸಬೇಕಿತ್ತು. ಈವರೆಗೆ ಶೇ 66ರಷ್ಟು ಮೋಟಾರು ವಾಹಾನ ತೆರಿಗೆ ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.‌ ಇನ್ನು ಮೂರು ತಿಂಗಳಲ್ಲಿ ಬಜೆಟ್ ಗುರಿಯಂತೆ ಒಟ್ಟು 4,378 ಕೋಟಿ ರೂ. ಸಂಗ್ರಹ ಮಾಡಬೇಕಿದೆ.

ಅಬಕಾರಿ ಸಂಗ್ರಹ: ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರೂ. ಆದಾಯದ ಗುರಿ ನೀಡಿದೆ. ಆದರೆ, ಡಿಸೆಂಬರ್ ಅಂತ್ಯದವರೆಗೆ 23,733 ಕೋಟಿ ರೂ. ಮಾತ್ರ ಅಬಕಾರಿ ಆದಾಯ ಸಂಗ್ರಹವಾಗಿದೆ. ಡಿಸೆಂಬರ್​​ವರೆಗೆ ಶೇ 62ರಷ್ಟು ಅಬಕಾರಿ ಸಂಗ್ರಹವಾಗಿದೆ. ಒಂಬತ್ತು ತಿಂಗಳಲ್ಲಿ ಬಜೆಟ್ ಗುರಿ ಪ್ರಕಾರ ಮಾಸಿಕ 3,208 ರೂ.ಗಳಂತೆ ಒಟ್ಟು 28,872 ಕೋಟಿ ರೂ. ಸಂಗ್ರಹಿಸಬೇಕಾಗಿತ್ತು. ಇನ್ನುಳಿದ ಮೂರು ತಿಂಗಳಲ್ಲಿ ಸುಮಾರು 14,792 ಕೋಟಿ ರೂ. ಆದಾಯ ಸಂಗ್ರಹದ ಸವಾಲು ಅಬಕಾರಿ ಇಲಾಖೆ ಮುಂದಿದೆ.

ಅಬಕಾರಿ ಆಯುಕ್ತರು ಹೇಳುವುದೇನು?: ಈ ಬಗ್ಗೆ ಮಾತನಾಡಿರುವ ಅಬಕಾರಿ ಇಲಾಖೆ ಆಯುಕ್ತ ಆರ್.ವೆಂಕಟೇಶ್ ಕುಮಾರ್, ''ಬಜೆಟ್ ಅಂದಾಜಿನಂತೆ ಆದಾಯ ಸಂಗ್ರಹವಾಗಿಲ್ಲ. ಹೊಸ ಬಿಯರ್ ನೀತಿಯಿಂದ‌ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ಕಟ್ಟುನಿಟ್ಟಿನ ಎನ್​ಫೋರ್ಸ್​​ಮೆಂಟ್ ಮೂಲಕವೂ ಆದಾಯ ಸೋರಿಕೆ ತಡೆಯಲು ಸೂಚಿಸಿದ್ದೇವೆ. ಎಂಆರ್​​ಪಿ ದರ ದುಪ್ಪಟ್ಟು ಮಾಡುವುದು, ನಕಲಿ ಸಾರಾಯಿ, ನಕಲಿ ಬ್ರ್ಯಾಂಡ್ ಹಾಗೂ ಗೋವಾದಿಂದ ಅಕ್ರಮವಾಗಿ ರಾಜ್ಯಕ್ಕೆ ತರುವ ಲಿಕ್ಕರ್ ಮೇಲೆ ನಿಗಾ ಇರಿಸಿ, ಕ್ರಮವಹಿಸಲು ಸೂಚಿಸಲಾಗಿದೆ. ಕಾನೂನು ಪ್ರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ಆದಾಯ ಸೋರಿಕೆ ತಡೆಗಟ್ಟಲು ಕ್ರಮ ವಹಿಸಲಾಗುವುದು. ಆ ಮೂಲಕ ಬಜೆಟ್ ಅಂದಾಜು ಮುಟ್ಟಲು ಎಲ್ಲ ಪ್ರಯತ್ನ ಮಾಡಲಾಗುವುದು'' ಎಂದು ತಿಳಿಸಿದ್ದಾರೆ.

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ 54 ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪ ಲೋಕಾಯುಕ್ತರು ಸೇರಿ ಇತರ ಅಧಿಕಾರಿಗಳು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.



ಬೆಂಗಳೂರು: ರಾಜಧಾನಿಯ ಬಿಬಿಎಂಪಿಯ ಬಹುತೇಕ ಆರ್‌ಓ ಮತ್ತು ಎಆರ್‌ಓ ಕಚೇರಿಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಲೋಪಗಳು ಕಂಡುಬಂದ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ 54 ಕಚೇರಿಗಳ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪ ಲೋಕಾಯುಕ್ತರು ದಾಳಿಯಲ್ಲಿ ಭಾಗಿಯಾಗಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಶುಕ್ರವಾರ ಮಧ್ಯಾಹ್ನದಿಂದ ನಡೆಯುತ್ತಿದ್ದ ತಪಾಸಣೆಯು ಹಲವು ಕಚೇರಿಗಳಲ್ಲಿ ತಡರಾತ್ರಿವರೆಗೂ ಜರುಗಿತು. ಪರಿಶೀಲನೆ ವೇಳೆ ಬಿಬಿಎಂಪಿ ಕಚೇರಿಗಳಲ್ಲಿ ಹಲವು ಲೋಪಗಳು ಕಂಡು ಬಂದಿದೆ.


ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಹೆಬ್ಬಾಳ ಸಬ್ ಡಿವಿಷನ್ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆೆಯಲ್ಲಿರುವ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಆರ್‌ಓ ಕಚೇರಿಗೆ ಖುದ್ದು ಭೇಟಿ ನೀಡಿದ್ದರು. ಕಚೇರಿಯಲ್ಲಿ ಯಾವುದೇ ವಹಿಗಳನ್ನು ಅಂದರೆ ಹಾಜರಾತಿ ವಹಿ, ನಗದು ಘೋಷಣಾ ವಹಿ, ಚಲನಾ-ವಲನಾ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಪತ್ತೆೆಯಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಬ್ಬಾಳ ಸಬ್ ಡಿವಿಷನ್ ಕಚೇರಿಯಲ್ಲಿ ಒಟ್ಟು 22 ಸಿಬ್ಬಂದಿಯಿದ್ದು, ಅದರಲ್ಲಿ 21 ಮಂದಿ ಮಾತ್ರ ಹಾಜರಾತಿ ವಹಿಗೆ ಸಹಿ ಮಾಡಿದ್ದು, ಕಚೇರಿಯಲ್ಲಿ ಕೇವಲ ಮೂರು ಜನ ಮಾತ್ರ ಇದ್ದರು. ಎಆರ್‌ಓ ಸಹ ಕಚೇರಿಯಲ್ಲಿ ಹಾಜರಿರಲಿಲ್ಲ. ಕರೆ ಮಾಡಿ ಕೇಳಿದಾಗ ಬೆಳಗ್ಗೆೆ ಕಚೇರಿಗೆ ಬಂದು ನಂತರ ಮುಖ್ಯ ಕಚೇರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಆದರೆ ಆ ಬಗ್ಗೆೆ ಚಲನ - ವಲನ ವಹಿಯಲ್ಲಿ ನಮೂದು ಮಾಡಿಲ್ಲ. ಎಆರ್‌ಓ ಅವರು ಬೆಳಗ್ಗೆೆ ಕಚೇರಿಗೆ ಬಂದು ಮಧ್ಯಾಹ್ನ ತನಕ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಹಾಜರಾತಿ ವಹಿಯಲ್ಲಿ ಅವರು ಸಹಿ ಮಾಡಿಲ್ಲ. ಇದೇ ಕಚೇರಿಯಲ್ಲಿ ನಗದು ವಹಿ ಮತ್ತು ಚಲನಾ-ವಲನಾ ವಹಿಗಳನ್ನು ಆಗಸ್ಟ್- 2023ರ ನಂತರ ನಿರ್ವಹಣೆ ಮಾಡಿಲ್ಲ. ಈ ಬಗ್ಗೆೆ ಹಾಜರಿದ್ದ ಸಿಬ್ಬಂದಿಯು ಯಾವುದೇ ಸಮರ್ಪಕ ಉತ್ತರ ನೀಡದಿರುವುದು ತಪಾಸಣೆಯಲ್ಲಿ ಕಂಡುಬಂದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ರಿಜಿಸ್ಟರ್ ಬುಕ್​ನಲ್ಲಿ ಎಂಟ್ರಿ ಇಲ್ಲ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರಾದ ನ್ಯಾ.ವೀರಪ್ಪ, ''ಬಿಬಿಎಂಪಿ ಬಗ್ಗೆ ಹಲವು ದೂರುಗಳು ಬಂದಿದ್ದವು. ಬೆಂಗಳೂರಿನಾದ್ಯಂತ 50ಕ್ಕಿಂತ ಹೆಚ್ಚು ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳು ಇರಲಿಲ್ಲ. ಎಲ್ಲಿ ಹೋದರೂ ಎಂದು ಕೇಳಿದರೆ, ವೈಕುಂಠ ಏಕಾದಶಿ ಪೂಜೆಗೆ ಹೋಗಿರುವ ಬಗ್ಗೆ ಉತ್ತರ ಬಂದಿದೆ. ರಿಜಿಸ್ಟರ್ ಬುಕ್​ನಲ್ಲಿ ಎಂಟ್ರಿ ಇಲ್ಲ, ಯಾರು ಯಾವಾಗ ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಏನು ಕೇಳಿದರೂ, ಫುಲ್ ಸೈಲೆಂಟ್ ಆಗಿ ನಿಂತುಕೊಳ್ಳುತ್ತಾರೆ'' ಎಂದರು.

ತಾಯಿ ಬದಲು ಮಗ ಕೆಲಸಕ್ಕೆ ಹಾಜರು: ''ಸೌತ್ ಎಂಡ್​ ಸರ್ಕಲ್ ಬಿಬಿಎಂಪಿ ಕಚೇರಿಗೆ ತೆರಳಿದಾಗ, ಕೇಸ್ ವರ್ಕರ್ ಕವಿತಾ ಬದಲು ಅವರ ಮಗ ನವೀನ್ ಹಾಜರಾಗಿರುವುದು ಕಂಡು ಬಂದಿತ್ತು. ಮಗನ ಜೊತೆ ಸಹಾಯಕ್ಕೆೆ ನಿಯಮ ಉಲ್ಲಂಘಿಸಿ ಗೀತಾ ಎಂಬ ಸಹಾಯಕಿಯನ್ನು ಕವಿತಾ ನೇಮಿಸಿರುವುದು ಬೆಳಕಿಗೆ ಬಂದಿದೆ. ಕಚೇರಿಗೆ ದಾಳಿ ನಡೆಸಿದ ವೇಳೆ ನವೀನ್ ಅವರನ್ನು ಪ್ರಶ್ನಿಸಿದಾಗ ಆತ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ನೇರವಾಗಿ ಕವಿತಾಗೆ ಕರೆ ಮಾಡಿಸಿ ವಿಚಾರಿಸಿದ್ದೇನೆ. ತನ್ನ ತಾಯಿಗೆ ಕಂಪ್ಯೂಟರ್​ ಬಗ್ಗೆ ಗೊತ್ತಿಲ್ಲ, ನನಗೆಲ್ಲವೂ ಗೊತ್ತು ನಾನೇ ಎಲ್ಲವನ್ನೂ ನಿರ್ವಹಣೆ​ ಮಾಡುತ್ತೇನೆ ಎಂದು ಮಗ ಹೇಳುತ್ತಾನೆ. ಆತ ಯಾರ ಅನುಮತಿಯನ್ನೂ ಪಡೆದಿಲ್ಲ. ಆತನೇ ಪ್ರಮುಖ ಅಧಿಕಾರಿ ಎಂಬಂತೆ ಧಿಮಾಕಿನಿಂದ ವರ್ತಿಸುತ್ತಿದ್ದಾನೆ. ನಮಗೆ ಇದೆಲ್ಲದರಿಂದ ಭಾರಿ ಶಾಕ್​ ಆಗಿದೆ'' ಎಂದು ತಿಳಿಸಿದರು.

''ಎಆರ್​ಓ ಸುಜಾತ ಎಂಬವರು ಮಧ್ಯಾಹ್ಬ ಮೂರುವರೆಗೆ ಆಫೀಸ್​​ಗೆ ಬಂದಿದ್ದಾರೆ. ಬಿಬಿಎಂಪಿ ಕಚೇರಿಗಳಿಗೆ ಅಪ್ಪ, ಅಮ್ಮ ಯಾರು ಇಲ್ಲವೇ? ಕಚೇರಿಯನ್ನು ಅಧಿಕಾರಿಗಳು ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ‌. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕರೆಯಿಸುತ್ತೇವೆ. ಸಾಕಷ್ಟು ಜನ ಅಧಿಕಾರಿಗಳು ವೈಕುಂಠ ಏಕಾದಶಿ ಪೂಜೆಗೆ ಹೋಗಿದ್ದಾರೆ. ಎಲ್ಲದರ ಬಗ್ಗೆ ಸರ್ಕಾರದ ಗಮನ ತಂದು ಸೊಮೊಟೊ ಕೇಸ್ ದಾಖಲಿಸುತ್ತೇವೆ'' ಎಂದು ನ್ಯಾ.ವೀರಪ್ಪ ಮಾಹಿತಿ ನೀಡಿದರು.


ಲಾಲ್ ಬಾಗ್ ರಸ್ತೆಯ ಕಚೇರಿ ಭೇಟಿ ವೇಳೆ ಅಧಿಕಾರಿಗಳೇ ಇರಲಿಲ್ಲ. ಅಧಿಕಾರಿಗಳೆಲ್ಲಾ ದೇವಸ್ಥಾನಕ್ಕೆೆ ಹೋಗಿದ್ದಾರೆ ಎಂದು ಸಹಾಯಕರು ಹೇಳಿದ್ದರು. ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆೆ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನಿಸಿದ ಪ್ರಸಂಗವೂ ನಡೆಯಿತು.

ಎಂಜಿನಿಯರ್ ಬಳಿ ದಾಖಲೆ ಇಲ್ಲದ ಹಣ ಪತ್ತೆ: ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿಯೂ ಸಹ ಬಹುತೇಕ ಅಧಿಕಾರಿ ಮತ್ತು ಸಿಬ್ಬಂದಿ ಗೈರು ಹಾಜರಿರುವುದು ಕಂಡುಬಂದಿದೆ. ಬಿಬಿಎಂಪಿ ಕೆ.ಆರ್.ಪುರಂ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ತಪಾಸಣೆ ನಡೆಸಿದಾಗ ಸಹಾಯಕ ಕಾರ್ಯಪಾಲಕ ಅಭಿಯಂತರರ ಬಳಿ ಸುಮಾರು 50 ಸಾವಿರ ರೂ. ನಗದು ಹಾಗೂ ಸಹಾಯಕ ಅಭಿಯಂತರರ ಬಳಿ 43 ಸಾವಿರ ರೂ. ಪತ್ತೆೆಯಾಗಿದೆ. ಈ ಸಂಬಂಧ ಅವರು ನಗದು ಘೋಷಣಾ ವಹಿಯಲ್ಲಿ ತಮ್ಮ ಬಳಿ ಇರುವ ಹಣದ ಬಗ್ಗೆೆ ನಮೂದು ಮಾಡಿಲ್ಲ. ಸದರಿ ನಗದಿನ ಬಗ್ಗೆೆ ಸಮಂಜಸ ಉತ್ತರ ನೀಡಿಲ್ಲ. ಆ ನಗದನ್ನು ಮಹಜರು ಮಾಡಿ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರದಿ ನೀಡಲು ಲೋಕಾಯುಕ್ತರು ಸೂಚಿಸಿದ್ದಾರೆ.



 ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ಭಿನ್ನರ ಮಾತಿನ ಕುರಿತು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.



ಬೆಂಗಳೂರು : ಯಾರೋ ಒಂದಿಬ್ಬರು ಹಗುರವಾಗಿ ಮಾತನಾಡುತ್ತಿರಬಹುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಹೈಕಮಾಂಡ್ ನಾಯಕರು ಕೈಕಟ್ಟಿ ಕೂತಿದ್ದಾರೆ ಎಂದು ಯಾರೂ ಭಾವಿಸಬೇಡಿ ಎಂದು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಪರೋಕ್ಷವಾಗಿ ಭಿನ್ನರ ಬಗ್ಗೆ ಮಾತನಾಡಿದ್ದಾರೆ.


ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಜಿ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಸುಮ್ಮನೆ ಕುಳಿತಿಲ್ಲ. ಆ ರೀತಿ ನೀವು ಭಾವಿಸಿದರೆ ಅದು ತಪ್ಪು. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದನ್ನು ವರಿಷ್ಠರು ಮಾಡ್ತಾರೆ. ನೀವು ಯಾರು ಇನ್ಮೇಲೆ ಅದಕ್ಕೆ ರಿಯಾಕ್ಟ್ ಮಾಡಬೇಡಿ ಎಂದು ಖಡಕ್ ಸಂದೇಶ ನೀಡಿದರು.

ಪ್ರಧಾನಿ ನರೇಂದ್ರ ಮೋದಿ , ಅಮಿತ್ ಶಾ ಅವರು ಯಾರಿಗೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವ ಸಂಶಯ, ಅನುಮಾನ ಇಟ್ಟುಕೊಳ್ಳೋದು ಬೇಡ ಎಂದು ಹೇಳುವ ಮೂಲಕ ಸಭೆಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂಬ ಸುಳಿವು ಕೊಟ್ಟರು.


ಯತ್ನಾಳ್ ತಂಡದ ವಿಚಾರದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಬಾರದು. ಎಲ್ಲವೂ ಹೈಕಮಾಂಡ್ ಗಮನಕ್ಕೆ ಇದೆ. ಹೈಕಮಾಂಡ್​ನವರೇ ಇವರ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಅನಾವಶ್ಯಕ ಮಾತನಾಡಿ ಗೊಂದಲ ಮೂಡಿಸದಂತೆ ಬಿಎಸ್​ವೈ ಸೂಚನೆ ನೀಡಿದರು.


ರಾಜ್ಯಾಧ್ಯಕ್ಷರು ಜಿಲ್ಲಾ ಪ್ರವಾಸಕ್ಕೆ ಬರುತ್ತಾರೆ, ನಾನೂ ಬರುತ್ತೇನೆ. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರನ್ನ ಸೇರಿಸಿ ಸಭೆ ನಡೆಸಬೇಕು. ಹಾಗೂ ಅವರ ಅಹವಾಲನ್ನು ಕೇಳಬೇಕು. ಆ ಮೂಲಕ ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ದರಾಗಬೇಕು ಎಂದು ಹೇಳಿದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.



ಬೆಂಗಳೂರು, ಜ. 10: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.ರಾಜ್ಯ ಸರ್ಕಾರದಿಂದ ಪ್ರತಿ ಮಾಹೆ 5000 ರೂ ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ತಿಂಗಳಿಗೆ ನೀಡಲಾಗುವುದು.

ಪೋರ್ಟಲ್ ಸುಧಾರಣೆಗೆ ಸೂಚನೆ

ಮಾಹಿತಿಯನ್ನು ಪೋರ್ಟಲ್ ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಗೌರವಧನ ನಿಲ್ಲಿಸದೆ ರಜೆ

ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದರು.

ಸರ್ಕಾರ ನಿಮ್ಮೊಂದಿಗಿದೆ

ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ ನಡೆಸಲಾಗುವುದು.ಸರ್ಕಾರ ನಿಮ್ಮೊಂದಿಗಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ ಹೋರಾಟ ಮಾಡುವುದು ಸಂವಿಧಾನ ಬದ್ಧ ಹಕ್ಕು.ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

 


ಚೆನ್ನೈ : ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತದ ಮಾಜಿ ಸ್ಪಿನ್‌ ಮಾಂತ್ರಿಕ ಆರ್ ಅಶ್ವಿನ್‌, ಇದೀಗ ಹಿಂದಿ ರಾಷ್ಟ್ರ ಭಾಷೆ ಕುರಿತಾದ ಚರ್ಚೆಯಲ್ಲಿ ಧುಮುಕಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿರುವ ಅಶ್ವಿನ್‌, ಅದು ಕೇವಲ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅಶ್ವಿನ್‌, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ, ಅದು ರಾಷ್ಟ್ರಭಾಷೆಯಾಗಿರದೇ ಅಸ್ತಿತ್ವದಲ್ಲಿರುವ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ.." ಎಂದು ನುಡಿದರು.


ಭಾಷಣ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ, "ನೀವು ಯಾವ ಭಾಷೆಯಲ್ಲಿ ನನ್ನ ಮಾತು ಕೇಳಲು ಬಯಸುತ್ತೀರಿ..?" ಎಂದು ರವಿಚಂದ್ರನ್‌ ಅಶ್ವಿನ್‌ ಪ್ರಶ್ನಿಸಿದರು. "ಇಂಗ್ಲಿಷ್‌ ಬೇಕೆನ್ನುವರು ಧ್ವನಿ ಮಾಡಿ, ತಮಿಳು ಬೇಕೆನ್ನುವರು ಧ್ವನಿ ಮಾಡಿ.." ಎಂಬ ಆರ್‌. ಅಶ್ವಿನ್‌ ಅವರ ಪ್ರಶ್ನೆಗೆ ಕೆಲವು ವಿದ್ಯಾರ್ಥಿಗಳಿಂದ ಇಂಗ್ಲಿಷ್‌ ಮತ್ತು ಇನ್ನೂ ಕೆಲವು ವಿದ್ಯಾರ್ಥಿಗಳು ತಮಿಳು ಭಾಷೆಗೆ ಬೇಡಿಕೆ ಇಟ್ಟರು. ಮುಂದುವರೆದು, "ನಾನು ಹಿಂದಿಯಲ್ಲಿ ಮಾತನಾಡುವುದನ್ನು ಯಾರು ಇಷ್ಟಪಡುತ್ತೀರಿ.." ಎಂದು ಅಶ್ವಿನ್‌ ಕೇಳಿದಾಗ, ವಿದ್ಯಾರ್ಥಿ ಸಮೂಹದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ತಮಿಳಿನಲ್ಲಿ ಮಾತು ಆರಂಭಿಸಿದ ಅಶ್ವಿನ್‌, "ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ, ಬದಲಿಗೆ ಒಂದು ಅಧಿಕೃತ ಭಾಷೆಯಷ್ಟೇ ಎಂಬುದನ್ನು ನಾನು ಹೇಳಬೇಕಿತ್ತು.." ಎಂದು ಹೇಳಿದರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget