ಭಾರತೀಯ ರೈಲ್ವೆಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ #Railway RecruitmentBoard ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಆನ್ ಲೈನ್ ಮೂಲಕ ಅರ್ಜಿ/ನೊಂದಣಿ ಪ್ರಕ್ರಿಯೆ ಆರಂಭವಾಗಿದೆ.
ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ?
ನೇಮಕಾತಿ ಪ್ರಕ್ರಿಯೆಯು, ಆರ್‌ಆರ್'ಬಿ ಮಿನಿಸ್ಟ್ರಿಯಲ್ ಮತ್ತು ಐಸೊಲೇಟೆಡ್ ಕೆಟಗರಿಸ್ ಶೀರ್ಷಿಕೆಯಡಿಯಲ್ಲಿ, ಜೂನಿಯರ್ ಸ್ಟೆನೋಗ್ರಾಫರ್, ಜೂನಿಯರ್ ಟ್ರಾನ್ಸೆಟರ್, ವೆಲ್ವೇರ್ ಇನ್ಸೆಕ್ಟರ್, ಮುಖ್ಯ ಕಾನೂನು ಸಹಾಯಕ, ಅಡುಗೆಯವರು, ಪಿಜಿಟಿ, ಟಿಜಿಟಿ, ದೈಹಿಕ ತರಬೇತಿ ಬೋಧಕ (ಪುರುಷ ಮತ್ತು ಸ್ತ್ರೀ), ಸಹಾಯಕ ಮೇಟ್ರಸ್(ಜೂನಿಯರ್ ಸ್ಕೂಲ್), ಮ್ಯೂಸಿಕ್ ಮೇಟ್ರಸ್, ಡ್ಯಾನ್ಸ್ ಮೇಟ್ರಸ್, ಪ್ರಯೋಗಾಲಯದ ಸಹಾಯಕರು(ಸ್ಕೂಲ್), ಹೆಡ್ ಕುಕ್ ಮತ್ತು ಫಿಂಗರ್ ಪ್ರಿಂಟ್ ಎಕ್ಸಾಮಿನರ್.
ವಯಸ್ಸಿನ ಮಿತಿ
ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ ವಯಸ್ಸಿನ ಮಿತಿಯು ನಿರ್ದಿಷ್ಟ ಸ್ಥಾನದ ಆಧಾರದ ಮೇಲೆ ಬದಲಾಗುತ್ತದೆ, ಗರಿಷ್ಠ 48 ವರ್ಷಗಳು.
ಅಭ್ಯರ್ಥಿಗಳು ಹುದ್ದೆಯ ಅವಶ್ಯಕತೆಗಳಿಗೆ ಅನುಗುಣವಾಗಿ 12 ನೇ ತರಗತಿ, ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಅಂತಿಮ ಫಲಿತಾಂಶಗಳಿಗಾಗಿ ಕಾಯುತ್ತಿರುವವರು ಅಪ್ಲಿಕೇಶನ್ ಗಡುವಿನ ಮೊದಲು ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
• ಹಂತ 1: www.rrbapply.gov.in % 3 #RRB ವೆಬ್'ಸೈಟ್'ಗೆ ಭೇಟಿ ನೀಡಿ.
• ಹಂತ 2: ವೈಯಕ್ತಿಕ ಬಳಕೆದಾರ ಹೆಸರು ಮತ್ತು ಪಾಸ್ ವರ್ಡ್ ರಚಿಸಲು ಒಂದು-ಬಾರಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
• ಹಂತ 3: ನಿಮ್ಮ ಬಳಕೆದಾರಹೆಸರು ಮತ್ತು ಪಾಸ್ ವರ್ಡ್ ಬಳಸಿ ಲಾಗ್ ಇನ್ ಮಾಡಿ.
• ಹಂತ 4: RRB ಮಿನಿಸ್ಟ್ರಿಯಲ್, ಐಸೊಲೇಟೆಡ್ ಕೆಟಗರಿ ಶಿಕ್ಷಕರ ಖಾಲಿ ಹುದ್ದೆ 2025 ಗೆ ಅರ್ಜಿ ಸಲ್ಲಿಸಿ ಶೀರ್ಷಿಕೆಯ ಲಿಂಕ್ ಅನ್ನು ಕ್ಲಿಕ್ ಮಾಡಿ.
• ಹಂತ 5: ನಿಖರವಾದ ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ನಂತರ ಸಲ್ಲಿಸಿ.
• ಹಂತ 6: ಪೂರ್ಣಗೊಂಡ ಅರ್ಜಿ ನಮೂನೆಯನ್ನು ಡೌನ್ಹೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಮುದ್ರಿತ ಪ್ರತಿಯನ್ನು ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದು?
ಈಗಾಗಲೇ ಆನ್ ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 6, 2025 ರವರೆಗೆ ಅರ್ಜಿ ಸಲ್ಲಿಸಬಹುದು. ಒಟ್ಟು 1,036 ಹುದ್ದೆಗಳನ್ನು ಈ ನೇಮಕಾತಿ ಡ್ರೈವ್ ಮೂಲಕ ಭರ್ತಿ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
RRB ಮಿನಿಸ್ಟ್ರಿಯಲ್ ಮತ್ತು ಐಸೊಲೇಟೆಡ್ #Isolated ವರ್ಗಗಳ ನೇಮಕಾತಿ ಪ್ರಕ್ರಿಯೆಯು ಏಕ-ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) ಒಳಗೊಂಡಿರುತ್ತದೆ.
ಸ್ಟೆನೋಗ್ರಫಿ ಸ್ಕಿಲ್ ಟೆಸ್ಟ್ (ಎಸ್'ಎಸ್'ಟಿ), ಅನುವಾದ ಪರೀಕ್ಷೆ (ಟಿಟಿ), ಕಾರ್ಯಕ್ಷಮತೆ ಪರೀಕ್ಷೆ (ಪಿಟಿ), ಟೀಚಿಂಗ್ ಸ್ಕಿಲ್ ಟೆಸ್ಟ್ (ಟಿಎಸ್'ಸಿ) ಸೇರಿದಂತೆ ನಿರ್ದಿಷ್ಟ ಹುದ್ದೆಗಳಿಗೆ ಸಂಬಂಧಿಸಿದಂತೆ ಅವಲಂಭಿತವಾಗಿವೆ.
ನಿಗದಿತ ಹುದ್ದೆಗಳಿಗೆ ಪರೀಕ್ಷೆಯ ನಂತರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಬಹುದು www.rrbapply.gov.in
Post a Comment