ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಒಟ್ಟು 24 ಮಂದಿ ಕಣದಲ್ಲಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ ಪಡೆದು ಮತ್ತೆ ಅಧಿಕಾರ ತಮ್ಮದಾಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೊಯಿಂಗಾಜೆ ಯವರು ಗೆಲುವು ಸಾಧಿಸಿದ್ದಾರೆ.ಬಿಜೆಪಿ ಬೆಂಬಲಿತ 12 ಮಂದಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 12 ಮಂದಿ ಕಣದಲ್ಲಿದ್ದು ನೇರ ಸ್ಪರ್ಧೆ ಏರ್ಪಟ್ಟಿತ್ತು.
ಈಗಾಗಲೇ ಫಲಿತಾಂಶ ಲಭಿಸಿದ್ದು ಒಟ್ಟು 11 ಸ್ಥಾನವನ್ನು ಬಿಜೆಪಿ ಗಳಿಸಿಕೊಂಡು ಅಧಿಕಾರವನ್ನು ಉಳಿಸಿಕೊಂಡಿದೆ.
ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಪತಿ ಭಟ್ ಮಜಿಗುಂಡಿ 549 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅತ್ಯಧಿಕ ಮತಗಳನ್ನು ಪಡೆದ ಕರುಣಾಕರ ಹಾಸ್ಪಾರೆ 663 ಮತ ಪಡೆದರು. ಜಯಪ್ರಕಾಶ್ ಕುಂಚಡ್ಕ ರವರು 701 ಮತ ಪಡೆದರು. ಸುಧಾಕರ ಆಲೆಟ್ಟಿ 564 ಪಡೆದರು. ಹರಿಪ್ರಸಾದ್ ಕಾಪುಮಲೆ 616 ಮತ ಹಾಗೂ ಚಿದಾನಂದ ಕೋಲ್ಟಾರು 556 ಮತ ಪಡೆದು ಸಾಮಾನ್ಯ ಕ್ಷೇತ್ರದಲ್ಲಿ 6 ಸ್ಥಾನ ಉಳಿಸಿಕೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಂದ್ರಕಾಂತ ನಾರ್ಕೋಡು 496, ತೇಜಕುಮಾರ್ ಬಡ್ಡಡ್ಕ 390, ದಯಾನಂದ ಪಾತಿಕಲ್ಲು 298, ನಾರಾಯಣ ರೈ ಅರಂಬೂರು 214, ಮುತ್ತಪ್ಪ ಪೂಜಾರಿಮೊರಂಗಲ್ಲು 450, ಸತ್ಯಕುಮಾರ್ ಆಡಿಂಜ 402 ಮತಗಳನ್ನು ಪಡೆದು ಪರಾಭವಗೊಂಡರು.
ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿದ್ಯಾ ಕುಡೆಕಲ್ಲು 679 ಮತ ಪಡೆದು ವಿಜಯಿಯಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೀನಾಕ್ಷಿ 267 ಮತ ಪಡೆದು ಸೋಲು ಕಂಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಪಾಲಡ್ಕ 567 ಮತ ಪಡೆದು ಜಯಗಳಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೀತಾ ಕೋಲ್ಟಾರು 516 ಮತ ಪಡೆದು ಪರಾಭವಗೊಂಡರು.
ಪ.ಪಂಗಡ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ನಾಯ್ಕ ಮಜಿಗುಂಡಿ 574 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರಿಪ್ರಸಾದ್ ಗಬ್ಬಲ್ಕಜೆ 492 ಮತ ಪಡೆದು ಪರಾಭವಗೊಂಡರು.
ಪ.ಜಾತಿ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮದಾಸ ಮೊರಂಗಲ್ಲು 633 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೊರಗಪ್ಪ ಮೊರಂಗಲ್ಲು 429 ಮತ ಪಡೆದು ಸೋಲನುಭವಿಸಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಎ' ಮೀಸಲು ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾಧರ ಬಿ. ಕೆ ಬಡ್ಡಡ್ಕ 586 ಮತ ಪಡೆದು ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಧಾಕೃಷ್ಣ ಪರಿವಾರಕಾನ 466 ಮತ ಪಡೆದು ಪರಾಭವ ಹೊಂದಿದರು.
ಹಿಂದುಳಿದ ವರ್ಗ ಪ್ರವರ್ಗ ಬಿ' ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೊಯಿಂಗಾಜೆ 566 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಗಂಗಾಧರ ಎನ್.ಎ.ನೆಡ್ಡಿಲು ರವರು 501 ಮತ ಪಡೆದು ಪರಾಭವಗೊಂಡರು.ಚುನಾವಣಾಧಿಕಾರಿಯಾಗಿ ವಿಲಾಸ್ ರವರು ಚುನಾವಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಬೆಳಗ್ಗಿನಿಂದ ನಡೆದ ಮತದಾನವು ಯಾವುದೇ ಗೊಂದಲವಿಲ್ಲದೆ ಅತ್ಯಂತ ಶಾಂತಿಯುತವಾಗಿ ನಡೆಯಿತು. ಸಂಘದ ಸಿ.ಇ.ಒ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
Post a Comment