ಯೂಕ್ರೇನ್-ರಷ್ಯಾ ಯುದ್ಧ ರಷ್ಯಾ ಪರ ಹೋರಾಡುತ್ತಿದ್ದ 12 ಭಾರತೀಯರು ಹತ, 16 ಮಂದಿ ನಾಪತ್ತೆ: MEA ಮಾಹಿತಿ

 


ನವದೆಹಲಿ: ರಷ್ಯಾ-ಯೂಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅದಾಂಜು 12 ಭಾರತೀಯರು ಸಾವನ್ನಪ್ಪಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.

ಮೃತ ಭಾರತೀಯರು ರಷ್ಯಾದ ಪರವಾಗಿ ಹೋರಾಡುತ್ತಿದ್ದರು ಎಂದು ಸಚಿವಾಲಯ ಮಾಧ್ಯಮಗಳಿಗೆ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

MEA ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಇಂದಿನವರೆಗೆ 126 ಪ್ರಕರಣಗಳು (ರಷ್ಯಾದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪ್ರಜೆಗಳು) ಇವೆ. ಈ 126 ಪ್ರಕರಣಗಳಲ್ಲಿ, 96 ಜನರು ಭಾರತಕ್ಕೆ ಮರಳಿದ್ದಾರೆ ಮತ್ತು ರಷ್ಯಾದ ಸಶಸ್ತ್ರ ಪಡೆಗಳಿಂದ ಬಿಡುಗಡೆಗೊಂಡಿದ್ದಾರೆ. ರಷ್ಯಾದ ಸೇನೆಯಲ್ಲಿ 18 ಭಾರತೀಯ ಪ್ರಜೆಗಳು ಉಳಿದುಕೊಂಡಿದ್ದು, ಅವರಲ್ಲಿ 16 ವ್ಯಕ್ತಿಗಳು ಎಲ್ಲಿದ್ದಾರೆಂದು ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಬಿನಿಲ್ ಬಾಬು ಸಾವಿನ ಬಗ್ಗೆ MEA ಹೇಳಿದಿಷ್ಟು?

ಯೂಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಕೇರಳದ ಬಿನಿಲ್ ಬಾಬು ಕೊಲ್ಲಲ್ಪಟ್ಟದ್ದಾರೆ ಎಂದು ವರದಿಯಾಗಿದೆ. ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಭಾರತೀಯ ರಾಯಭಾರ ಕಚೇರಿ ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಮತ್ತೊಬ್ಬ ಭಾರತೀಯ ಪ್ರಜೆ ಜೈನ್ ಟಿಕೆ ಮಾಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎಂದು MEA ಮಾಹಿತಿ ನೀಡಿದೆ.

ನಮ್ಮ ಸಚಿವಾಲಯದ ಅಧಿಕಾರಿಗಳು ಮಾಸ್ಕೋದ ರಾಯಭಾರ ಕಚೇರಿಯ ಇಬ್ಬರು ಭಾರತೀಯರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಲಾಗುತ್ತಿದೆ ಎಂದು MEA ವಕ್ತಾರ ರಣಧೀ‌ರ್ ಜೈಸ್ವಾಲ್ ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget