ಕೆ.ಜಿಯಿಂದ ಪಿ.ಜಿವರೆಗೆ ಶಿಕ್ಷಣ ಉಚಿತ: ಸಂಕಲ್ಪ ಪತ್ರ ಭಾಗ-2ರಲ್ಲಿ ಬಿಜೆಪಿ ಘೋಷಣೆ

ನವದೆಹಲಿ ಚುನಾವಣೆ: 'ಸಂಕಲ್ಪ ಪತ್ರ' ಭಾಗ-2ರಲ್ಲಿ ಬಿಜೆಪಿ ಘೋಷಣೆ.



ನವದೆಹಲಿ : ಬಿಜೆಪಿಯು ದೆಹಲಿ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯ ಎರಡನೇ ಭಾಗವನ್ನು ಬಿಡುಗಡೆ ಮಾಡಿದ್ದು, ಬಡವರ ಮಕ್ಕಳಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ (ಪಿ.ಜಿ) ವರೆಗೆ ಉಚಿತ ಶಿಕ್ಷಣದ ಘೋಷಣೆ ಮಾಡಿದೆ.

'ಸಂಕಲ್ಪ ಪತ್ರ'ದ ಮುಂದುವರಿದ ಭಾಗವನ್ನು ಮಂಗಳವಾರ ಬಿಡುಗಡೆ ಮಾಡಿದ ಬಿಜೆಪಿ ಮುಖಂಡ ಅನುರಾಗ್ ಠಾಕೂ‌ರ್, ಆಟೊ ಚಾಲಕರು ಮತ್ತು ಮನೆಕೆಲಸದವರಿಗೆ ₹10 ಲಕ್ಷ ಮೊತ್ತದ ವಿಮೆ ಮತ್ತು ₹5 ಲಕ್ಷದ ಅಪಘಾತ ವಿಮೆ ಜಾರಿಗೊಳಿಸುವ ಭರವಸೆಯನ್ನೂ ನೀಡಿದರು.

ದೆಹಲಿಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಎಲ್ಲಾ 'ಅಕ್ರಮಗಳು ಮತ್ತು ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗುವುದು ಎಂದು ಹೇಳಿದರು.

'ಮಹಿಳಾ ಸಮೃದ್ಧಿ ಯೋಜನೆ'ಯಡಿ ಮಹಿಳೆಯರಿಗೆ ಮಾಸಿಕ ₹ 2,500 ನೆರವು ನೀಡುವುದಾಗಿ ಬಿಜೆಪಿಯು 'ಸಂಕಲ್ಪ ಪತ್ರ' ಭಾಗ- 1ರಲ್ಲಿ ಘೋಷಿಸಿತ್ತು.

ನವದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಫೆಬ್ರುವರಿ 5ರಂದು ನಡೆಯಲಿದೆ. ಬಿಜೆಪಿ ಅಲ್ಲದೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಎಎಪಿಯು ಈಗಾಗಲೇ ಮತದಾರರಿಗೆ ಹಲವು

'ಉಚಿತ ಕೊಡುಗೆ'ಗಳ ಭರವಸೆ ನೀಡಿವೆ.

ಇತರ ಭರವಸೆಗಳು...

* ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ₹ 15 ಸಾವಿರ ನೆರವು; ಪ್ರಯಾಣ ಭತ್ಯೆ

* ನವದೆಹಲಿಯ ಪಾಲಿಟೆಕ್ನಿಕ್‌ಗಳು ಮತ್ತು ಕೌಶಲಾಭಿವೃದ್ಧಿ ಕೇಂದ್ರಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳಿಗೆ ಮಾಸಿಕ ₹1000 ನೆರವು ನೀಡಲು 'ಡಾ.ಬಿ.ಆರ್ ಅಂಬೇಡ್ಕರ್ ಸ್ಟೈಪೆಂಡ್ ಯೋಜನೆ' ಜಾರಿ

* ಆಟೊ ಚಾಲಕರು ಮತ್ತು ಮನೆಕೆಲಸ ವೃತ್ತಿ ಮಾಡುವವರ ಶ್ರೇಯೋಭಿವೃದ್ಧಿಗಾಗಿ ಮಂಡಳಿ ರಚನೆ

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget