ವಾಹನ ಸವಾರರಿಗೆ ಗುಡ್ ನ್ಯೂಸ್| ಶೀಘ್ರದಲ್ಲೇ ಪೆಟ್ರೋಲ್ ದರದಲ್ಲಿ ₹20 ಇಳಿಕೆ ಸಾಧ್ಯತೆ



ಪೆಟ್ರೋಲ್ ಬೆಲೆಯಲ್ಲಿ ಗಮನಾರ್ಹ ಕಡಿತವನ್ನು ನಿರೀಕ್ಷಿಸಲಾಗಿದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ದೇಶಾದ್ಯಂತ ಪೆಟ್ರೋಲ್ ಬೆಲೆಯನ್ನ ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ದೇಶಾದ್ಯಂತ ಲಭ್ಯವಿರುತ್ತದೆ, ಇದು ಗಣನೀಯ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಈ ಪೆಟ್ರೋಲ್ ಶೀಘ್ರದಲ್ಲೇ ಪೆಟ್ರೋಲ್ ಪಂಪ್’ಗಳಲ್ಲಿ ಲಭ್ಯವಾಗಲಿದೆ. ಇದರ ಬೆಲೆ 20 ರೂಪಾಯಿ ಕಡಿಮೆ ಎಂದು ನಿರೀಕ್ಷಿಸಲಾಗಿದೆ.

ಟೊಯೊಟಾ ಈಗಾಗಲೇ ಎಥೆನಾಲ್ ಚಾಲಿತ ಕಾರನ್ನ ಬಿಡುಗಡೆ ಮಾಡಿದೆ. ಇದರ ಇಂಧನ ಬೆಲೆ ಲೀಟರ್ಗೆ ಕೇವಲ 25 ರೂ. ಹೆಚ್ಚಿನ ಎಥೆನಾಲ್ ಚಾಲಿತ ವಾಹನಗಳನ್ನ ಪ್ರಾರಂಭಿಸಲಾಗುವುದು ಎಂದು ಸಾರಿಗೆ ಸಚಿವರು ಘೋಷಿಸಿದರು.

ಫ್ಲೆಕ್ಸ್ ಇಂಧನವು ಪರ್ಯಾಯ ಇಂಧನವಾಗಿದೆ. ಎಥೆನಾಲ್ ಅಥವಾ ಮೆಥನಾಲ್ ಅನ್ನು ಪೆಟ್ರೋಲ್ನೊಂದಿಗೆ ಬೆರೆಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇದು ಪೆಟ್ರೋಲ್ ವೆಚ್ಚವನ್ನ ಕಡಿಮೆ ಮಾಡುವ ನಿರೀಕ್ಷೆಯಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget