ಕೌಂಡಿಕ್ಕಾನ ಮಹತೋಭಾರ ಮಹಾಲಿಂಗೇಶ್ವರ ಮಹಾವಿಷ್ಣುವಿನಾಯಕ ದೇಗುಲದಲ್ಲಿ ನಡೆಯುತ್ತಿದ್ದ ವೈಭವದ ಶ್ರೀ ಕೌಂಡಿಕ್ಕಾನ ಯಾತ್ರಾ ಮಹೋತ್ಸವ ಮೂಲ ಸ್ಥಾನದಿಂದ ಮೃತ್ತಿಕೆಯನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು 42 ವರ್ಷಗಳ ಬಳಿಕ ಮತ್ತೆ ತಂದು ಶ್ರೀ ಬಿಂಬ ಚೈತನ್ಯ ವೃದ್ಧಿಯೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ಮುಂಜಾನೆ 3 ಗಂಟೆಗೆ ನಡೆ ತೆರೆದು, ಕೊಡಿಮರದಡಿಯಲ್ಲಿ ಮಹಾಪ್ರಾರ್ಥನೆ ನಡೆಸಲಾಯಿತು. ಅನಂತರ ಮುಂಜಾನೆ 3.45ಕ್ಕೆ ದಕ್ಷಿಣ ದ್ವಾರದ ಮೂಲಕ ಎಡವಳ ವಿಭಾಗದವರ ಸಹಿತ ಶ್ರೀ ಕೌಂಡಿಕ್ಕಾನ ಯಾತ್ರೆ ಆರಂಭ ಗೊಂಡಿತು. ಈ ಸಂದರ್ಭ 1500 ಮಂದಿ ವ್ರತಧಾರಿ ಭಕ್ತರು ಬರಿಗಾಲಲ್ಲಿ ನಡೆದು 5 ಕಿ.ಮೀ. ಸಾಗಿದರು. ಕೌಂಡಿಕ್ಯಾನದಲ್ಲಿ 1008 ಸೀಯಾಳವನ್ನು ಉಪಯೋಗಿಸಿ ತಂಬಿಲ ಸೇವೆ ನಡೆಸಿದ ನಂತರ 8.15ರ ಹೊತ್ತಿಗೆ ಮೂಲ ಸ್ಥಾನದತ್ತ ಮೃತ್ತಿಕಾ ಸಂಗ್ರಹಕ್ಕಾಗಿ ತೆರಳಲಾಯಿತು. ಎಡವಳ ಬೆಳ್ಳಿಯಪ್ಪ ಕರಿಕೆ ದಾರಿ ತೋರಿಸುತ್ತಾಮುಂದೆ ಸಾಗಿದರು. ಅನಂತರ ದೀಪ ಹಿಡಿದುಕೊಂಡು ಶಶಿಧರನ್ ನಂಬೀಶ, ಅವರ ನಂತರ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಜತೆಗೆ ಬ್ರಹ್ಮಶ್ರೀ ರವೀಶ ತಂತ್ರಿಯವರು ಸಾಗಿದರು. ಬೆಳಗ್ಗೆ 10.30ಕ್ಕೆ ಮೃತ್ತಿಕೆಯನ್ನು ಶ್ರೀ ಮೂಲ ಸ್ಥಾನದಿಂದ ಸಂಗ್ರಹಿಸಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಹಿಂತಿರುಗಿ ಕೌಂಡಿಕ್ಕಾನ ಪ್ರದೇಶಕ್ಕೆ ಬಂದರು.
ಕಾತುರದಿಂದ ಕಾಯುತ್ತಿದ್ದ ಸಾವಿರಾರು ವ್ರತಧಾರಿ ಭಕ್ತರು ಓಂ ನಮಃ ಶಿವಾಯ ಮಂತ್ರ ಜಪಿಸಿದರು. ಗೋವಿಂದ ನಾಮ ಸ್ಮರಣೆ ಮಾಡಿದರು. ವಾದ್ಯ ಮೇಳಗಳೊಂ ದಿಗೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದರು. ಈ ಸಂದರ್ಭಸಹಸ್ರಾರು ಭಕ್ತರು ದೇಗುಲಲ್ಲಿ ಇವರ ಆಗಮನವನ್ನು ಕಾಯುತ್ತಾ ಮಂತ್ರ ಪಠಣ, ಭಜನೆ ನಡೆಸಿದರು. ಶ್ರೀ ಕ್ಷೇತ್ರದಲ್ಲಿ ಬಿಂಬ ಚೈತನ್ಯ ವೃದ್ಧಿ ಧನು ಪೂಜೆ, ಸಹಸ್ರ(1008) ಕುಂಭಾಭಿಷೇಕ, ಪಲ್ಲ ಪೂಜೆ ನಡೆಯಿತು. ಸಂಜೆ ಎಲ್ಲ ಭಕ್ತರಿಗೂ ಮೂಲ ಮೃತ್ತಿಕಾ ಪ್ರಸಾದ ವಿತರಣೆ ನಡೆಯಿತು. ಅನಂತರ ನಡೆದ ಧಾರ್ಮಿಕ ಸಭಾ ಕಾಠ್ಯಕ್ರಮದಲ್ಲಿ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯ ವರಿಗೆ ಗೌರವಾ ರ್ಪಣೆ ಮಾಡಲಾಯಿತು. ರಾತ್ರಿ ಶ್ರೀ ದೇವರ ಉತ್ಸವ ಬಲಿ ನಡೆಯಿತು.
ಹಬ್ಬದ ವಾತಾವರಣ: ಅಡೂರು ದೇಗುಲದ ಕೌಂಡಿಕ್ಕಾನ ಯಾತ್ರಾ ಮಹೋತ್ಸವ ಹಬ್ಬದ ವಾತಾವರಣವನ್ನುಉಂಟು ಮಾಡಿದೆ. ಕಳೆದ 12 ದಿನಗಳಿಂದ ವ್ರತಧಾರಿಗಳಾಗಿ ದೇಗುಲದ ಈ ಪುಣ್ಯ ಸಂದರ್ಭಕ್ಕಾಗಿ ಕಾದು ಕುಳಿತ ಭಕ್ತಾದಿಗಳು ಈ ಸಂದರ್ಭದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಪುನೀತರಾದರು. ಮಂಗಳವಾರ ಸುಮಾರು 15 ಸಾವಿರ ಮಂದಿ ಈ ಕಾರ ಕ್ರಮದಲ್ಲಿ ಪಾಲ್ಗೊಂಡಿದ್ದರು. ತಳಿರು ತೋರಣಗಳಿಂದ ಅಡೂರು ಶೃಂಗಾರ ಗೊಂಡು ಕಾಠ್ಯಕ್ರಮದ ಯಶಸಿಸ್ಸಿಗಾಗಿ 34 ಪ್ರದೇಶಿಕ ಸಮಿತಿಗಳ ಸ್ವಯಂ ಸೇವಕರ ತಂಡಗಳು ಅಹರ್ನಿಶಿ ದುಡಿದರು. ಭಜನೆ | ಸಂಕೀರ್ತನೆ, ಶಿವ ನಾಮಸ್ಮರಣೆ, ಗೀತಾ ಪಾರಾಯಣದ ಮೂಲಕ ಇಡೀ ಅಡೂರು ಭಕ್ತಿ ಸಾಂದ್ರವಾಗಿತ್ತು.
Post a Comment