ಅಮೆರಿಕದಲ್ಲಿ ಶೀತ ಗಾಳಿ ತೀವ್ರ: ಸುಮಾರು 6 ಕೋಟಿ ಜನರಿಗೆ ಸಂಕಷ್ಟ

 


ವಾಷಿಂಗ್ಟನ್: ಪೂರ್ವ ಮತ್ತು ಮಧ್ಯ ಅಮೆರಿಕದ ಭಾಗಗಳಲ್ಲಿ ಹಿಮಪಾತ, ಶೀತ ಗಾಳಿ ತೀವ್ರವಾಗಿದ್ದು, ಲಕ್ಷಾಂತರ ಅಮೆರಿಕನ್ನರು ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಕೆಂಟುಕಿ ಮತ್ತು ವರ್ಜೀನಿಯಾದಲ್ಲಿ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ವಿಪರೀತ ಹಿಮ ಬೀಳುತ್ತಿರುವ ಕಾರಣ ವಿಮಾನ ಹಾರಾಟದಲ್ಲಿ ವ್ಯತ್ಯಯಗೊಂಡಿದೆ. ದೇಶದಾದ್ಯಂತ 2 ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, 25 ಸಾವಿರ ವಿಮಾನಗಳು ತಡವಾಗಿ ಹಾರಾಟ ನಡೆಸಿವೆ. ಅಲ್ಲದೆ, ರಸ್ತೆಗಳು ಹಿಮದಿಂದ ಆವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಸಾಧ್ಯವಾಗದಂತಾಗಿದೆ.

ಚಳಿಗಾಲದ ಈ ಹವಾಮಾನ ಪರಿಸ್ಥಿತಿಯ ಕಾರಣ ಅಮೆರಿಕದ ಸುಮಾರು 6 ಕೋಟಿ (60 ಮಿಲಿಯನ್) ಜನರು ಸಂಕಷ್ಟದಲ್ಲಿದ್ದಾರೆ ಎಂದು ಹವಾಮಾನಶಾಸ್ತ್ರಜ್ಞ ರಿಚ್ ಬೆನ್ ತಿಳಿಸಿರುವುದಾಗಿ ವರದಿಯಾಗಿದೆ.

ವರ್ಜಿನಿಯಾ, ಪೆನ್ಸಿಲ್ವೆನಿಯಾ ಸೇರಿ ಹಲವು ರಾಜ್ಯಗಳಲ್ಲಿ 1 ಇಂಚಿನಿಂದ 1 ಅಡಿವರೆಗೆ ಹಿಮ ಆವೃತವಾಗಿದೆ. ಇದು ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget