ಕಠ್ಮಂಡು: ಇಂದು ಬೆಳಿಗ್ಗೆ ಟಿಬೆಟ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 90 ಅಧಿಕ ಮಂದಿ ಮೃತಪಟ್ಟಿದ್ದು 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
7.1 ತೀವ್ರತೆಯ ಭೂಕಂಪವು ಟಿಬೆಟ್ ಪ್ರದೇಶದಲ್ಲಿ ಸುಮಾರು 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಹೇಳಿದೆ. ಹಿಮಾಲಯದ ಉತ್ತರದ ತಪ್ಪಲಿನಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಭಾರತ, ನೇಪಾಳ ಮತ್ತು ಭೂತಾನ್‌ನ ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು ಕಟ್ಟಡಗಳು ಕಂಪಿಸಿವೆ ಎಂದು ಸ್ಥಳೀಯ ನಿವಾಸಿಗಳು ಹೇಳಿಕೆ ನೀಡಿದ್ದಾರೆ ಅಲ್ಲದೆ ಕಟ್ಟಡ ಕಂಪಿಸುತ್ತಿದ್ದಂತೆ ಕಟ್ಟಡ, ಮನೆಯ ಒಳಗಿದ್ದ ಜನ ಹೊರ ಓಡಿ ಬಂದಿದ್ದಾರೆ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ.
ಭೂಕಂಪನದಿಂದ ಟಿಬೆಟ್ ನಲ್ಲಿ ಕೆಲ ಕಟ್ಟಡಗಳು ನೆಲಸಮಗೊಂಡಿದ್ದು ರಕ್ಷಣಾ ತಂಡ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮೊದಲ ಭೂಕಂಪನ ಬೆಳಿಗ್ಗೆ 6.45ರ ಸುಮಾರಿಗೆ ಸಂಭವಿಸಿದ್ದು ಈ ವೇಳೆ 7.1 ತೀವ್ರತೆ ದಾಖಲಾಗಿತ್ತು, ಇದಾದ ಬಳಿಕ ಎರಡನೇ ಬಾರಿ 7 ಗಂಟೆಗೆ 4.7ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದರೆ, 7.7 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ.
ಭೂಕಂಪದಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ, ಸದ್ಯ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ.
Post a Comment