‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆಯ ಶೇ. 80 ಅನುದಾನ ಜಾಹೀರಾತಿಗೆ ಬಳಕೆ: ಮಲ್ಲಿಕಾರ್ಜುನ ಖರ್ಗೆ

 


ಹೊಸದಿಲ್ಲಿ: 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ. 80 ಅನುದಾನವನ್ನು ಜಾಹೀರಾತುಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ.

'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ 10ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಹಿಳಾ ಸುರಕ್ಷೆಗೆ ಸಂಬಂಧಿಸಿದ ಅವರ ಹೇಳಿಕೆ ಹಾಗೂ ಕ್ರಮಗಳ ನಡುವಿನ ವ್ಯತ್ಯಾಸವನ್ನು ಅವರು 'ಎಕ್ಸ್‌'ನ ತನ್ನ ಪೋಸ್ಟ್‌ನಲ್ಲಿ ಗಮನ ಸೆಳೆದಿದ್ದಾರೆ.

ಹಾಥರಸ್, ಉನ್ನಾವೋ ಹಾಗೂ ಮಹಿಳಾ ಕುಸ್ತಿ ಪಟುಗಳ ಪ್ರಕರಣಗಳನ್ನು ಉಲ್ಲೇಖಿಸಿ ಮಹಿಳೆಯರ ರಕ್ಷಣೆಯ ಬದಲು ಅಪರಾಧಿಗಳಿಗೆ ರಕ್ಷಣೆ ನೀಡುವಲ್ಲಿ ಬಿಜೆಪಿ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.“ಈ ದೇಶದಲ್ಲಿ ಪ್ರತಿ ಗಂಟೆಗೆ ಮಹಿಳೆಯ ವಿರುದ್ಧದ 43 ಅಪರಾಧದ ಪ್ರಕರಣಗಳು ಯಾಕೆ ದಾಖಲಾಗುತ್ತವೆ? ಪ್ರತಿದಿನ ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ 22 ಅಪರಾಧದ ಪ್ರಕರಣಗಳು ದಾಖಲಾಗುತ್ತಿವೆ. ಮುಖ್ಯವಾಗಿ ದುರ್ಬಲ ದಲಿತರು ಹಾಗೂ ಬುಡಕಟ್ಟು ಸಮುದಾಯದವರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಮೋದಿ ಅವರು ಆಗಾಗ ಮಹಿಳಾ ರಕ್ಷಣೆ ಕುರಿತು ಮಾತನಾಡುತ್ತಿರುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ಅಂತರ ಯಾಕೆ?" ಎಂದು ಅವರು ಪ್ರಶ್ನಿಸಿದ್ದಾರೆ.


"ಬೇಟಿ ಬಚಾವೊ, ಬೇಟಿ ಪಡಾವೊ" ಯೋಜನೆಗೆ ಸಂಬಂಧಿಸಿದ ದತ್ತಾಂಶ ಪ್ರಸ್ತುತಪಡಿಸಿರುವುದನ್ನು ನಿಲ್ಲಿಸಿರುವುದಕ್ಕಾಗಿ ಅವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಮಂಜೂರಾದ ಸುಮಾರು ಶೇ. 80 ನಿಧಿಯನ್ನು ಜಾಹೀರಾತುಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಸದೀಯ ಸ್ಥಾಯಿ ಸಮಿತಿ ಇದನ್ನು ಬಹಿರಂಗಪಡಿಸಿದ ಬಳಿಕ ಈ ಯೋಜನೆಗಾಗಿ ಒದಗಿಸಲಾಗಿದ್ದ ಅನುದಾನವನ್ನು 2018-19 ಹಾಗೂ 2022-23ರ ನಡುವೆ ಶೇ. 63ರಷ್ಟು ಇಳಿಕೆ ಮಾಡಲಾಯಿತು. ಅನಂತರ 'ಮಿಷನ್ ಶಕ್ತಿ' ಅಡಿಯ 'ಸಂಬಲ್' ಯೋಜನೆಯಲ್ಲಿ ವಿಲೀನಗೊಳಿಸಿದ ಬಳಿಕ ಮೋದಿ ಸರಕಾರ ಈ ಯೋಜನೆಯ ವೆಚ್ಚದ ದತ್ತಾಂಶವನ್ನು ಒದಗಿಸುವುದನ್ನು ನಿಲ್ಲಿಸಿತು. 2023-24ರಲ್ಲಿ 'ಸಂಬಲ್‌ಗೆ ಮಂಜೂರು ಮಾಡುವ ಅನುದಾನವನ್ನು ಕೂಡ ಶೇ. 30 ಇಳಿಕೆ ಮಾಡಿತು. ಈ ದತ್ತಾಂಶ ತಿರುಚುವ ಉದ್ದೇಶವಾದರೂ ಏನು? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget