ಪತ್ರದಲ್ಲಿ ಬಿಜೆಪಿ ಹಣದ ಹಂಚಿಕೆ ಕುರಿತು ಪ್ರಶ್ನಿಸಿರುವ ಎಎಪಿ , ಮತಕೊಳ್ಳಲು ಮುಂದಾಗಿರುವ ಬಿಜೆಪಿಗೆ ಆರ್ಎಸ್ಎಸ್ ಬೆಂಬಲವಿದ್ಯಾ ಎಂದು ಕೂಡಾ ಕೇಳಿದೆ.
ನವದೆಹಲಿ: ದೆಹಲಿ ಚುನಾವಣೆಗೆ ಭರದ ಸಿದ್ದತೆ ನಡೆಸಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರ್ಎಸ್ಎಸ್ ಚಿಂತಿಸುತ್ತಿದ್ಯಾ ಎಂಬುದು ಸೇರಿದಂತೆ ಅನೇಕ ವಿಚಾರಗಳ ಕುರಿತು ಪ್ರಶ್ನಿಸಿದ್ದಾರೆ.
ಪತ್ರದಲ್ಲಿ ಬಿಜೆಪಿ ಹಣದ ಹಂಚಿಕೆ ಕುರಿತು ಪ್ರಶ್ನಿಸಿರುವ ಎಎಪಿ , ಮತಕೊಳ್ಳಲು ಮುಂದಾಗಿರುವ ಬಿಜೆಪಿಗೆ ಆರ್ಎಸ್ಎಸ್ ಬೆಂಬಲವಿದ್ಯಾ ಎಂದು ಕೂಡ ಕೇಳಿದೆ. ಜೊತೆಗೆ ದಲಿತ ಮತ್ತು ಪುರ್ವಾಂಚಲಿ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಎಪಿ, ಆರ್ಎಸ್ಎಸ್ ಪ್ರಜಾಪ್ರಭುತ್ವದ ಹಕ್ಕಿನಲ್ಲಿ ನಂಬಿಕೆ ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಬಿಜೆಪಿ ಏನೆಲ್ಲಾ ನಡೆಸಿತ್ತೋ ಅದಕ್ಕೆ ಆರ್ಎಸ್ಎಸ್ ಬೆಂಬಲವಿತ್ತಾ? ಬಿಜೆಪಿ ನಾಯಕರು ಮುಕ್ತವಾಗಿ ಹಣ ಹಂಚುತ್ತಿದ್ದು, ಆರ್ಎಸ್ಎಸ್ ಮತಕೊಳ್ಳಲು ಬೆಂಬಲಿಸುತಿದೆಯಾ ಎಂದು ಸಾಮಾಜಿಕ ಜಾಲತಾಣದ ಮೂಲಕ ಅರವಿಂದ್ ಕೇಜ್ರಿವಾಲ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಮತ ತಿರುಚುವ ಯತ್ನವನ್ನು ನಡೆಸುತ್ತಿದೆ ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಸೋಮವಾರ ಆರೋಪಿಸಿದ್ದರು. ವಿಶೇಷವಾಗಿ ಶಹಾದರ್ ಕ್ಷೇತ್ರದಲ್ಲಿ ಬಿಜೆಪಿ ನಾಯಕ ವಿಶಾಲ್ ಭರಧ್ವಾಜ್ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು. ದೆಹಲಿಯಲ್ಲಿನ ಪುರ್ವಾಂಚಲಿಯಲ್ಲಿನ ನಿವಾಸಿಗಳ ಹೆಸರನ್ನು ಬಿಜೆಪಿ ಮತಪಟ್ಟಿಯಿಂದ ತೆಗೆಯುತ್ತಿದೆ. ಮತದಾರರ ಪಟ್ಟಿ ಅಳಿಸಲು ಬಿಜೆಪಿ ನಾಯಕರೇ ಅರ್ಜಿ ಸಲ್ಲಿಸುತ್ತಿದ್ದಾರೆ. ನಾವು ಈ ಕುರಿತು ಧ್ವನಿ ಎತ್ತಿದ ಬಳಿಕ ಅವರು ಇದನ್ನು ನಿಲ್ಲಿಸಿದ್ದಾರೆ ಎಂದು ಕಕ್ಕರ್ ತಿಳಿಸಿದರು.
ಬಳಿಕ ಬಿಜೆಪಿ ನಾಯಕ ಪರ್ವೇಶ್ ಶರ್ಮಾ ಕೂಡ ನವದೆಹಲಿಯ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುವ ಮೂಲಕ ಮತಕೊಳ್ಳಲು ಮುಂದಾಗಿದ್ದಾರೆ ಎಂದರು.
ಬಿಜೆಪಿ ಮತ ತಿರುಚುವಿಕೆಗೆ ಮುಂದಾಗಿದೆ ಎಂದು ಭಾನುವಾರ ಕೇಜ್ರಿವಾಲ್ ಆರೋಪಿಸಿದ್ದರು. ಈ ನಡುವೆ ದೆಹಲಿ ಮುಖ್ಯ ಚುನಾವಣಾಧಿಕಾರಿ ಮತದಾರರ ಪಟ್ಟಿಗೆ ಸಂಬಂಧಿಸಿದ ಎಲ್ಲ ಆಕ್ಷೇಪಣೆಗಳು ಮತ್ತು ಹಕ್ಕುಗಳನ್ನು ಡಿಸೆಂಬರ್ 24 ರೊಳಗೆ ಪರಿಹರಿಸಲಾಗಿದೆ. ಅಂತಿಮ ಪಟ್ಟಿಯನ್ನು ಜನವರಿ 6, 2025 ರಂದು ಪ್ರಕಟಿಸಲಾಗುವುದು ಎಂದು ಸ್ಙಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಎಎಪಿ ಮತ್ತು ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೋಡಗಿಸಿಕೊಂಡಿವೆ.
Post a Comment