ರಾಜ ರಾಜೇಶ್ವರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿ ಟಿಯು ಬೆಳಗಾವಿಯಿಂದ ಡಾ. ಉಜ್ವಲ್ ಯುಜೆ ನೇಮಕ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು, ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು, ವಿಶ್ವವಿದ್ಯಾಲಯದ ಮಾಲ್ ಪ್ರಾಕ್ಟಿಸ್ ಕೇಸಸ್ ಕನ್ಸಿಡರೇಶನ್ ಕಮಿಟಿ (MPCC) ಅಧ್ಯಕ್ಷರು, ಆರ್.ವಿ. ಇಂಜಿನಿಯರಿಂಗ್ ಕಾಲೇಜ್, ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರು ಅಲ್ಲದೆ ಎಲ್.ಐ.ಸಿ. ಚೇರ್‌ಮೆನ್, ವಿ.ಟಿ.ಯು. ಬೆಳಗಾವಿ ಆಗಿರುವ ಡಾ. ಉಜ್ವಲ್ ಊರುಬೈಲು ಇವರು ರಾಜ ರಾಜೇಶ್ವರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು (ಸ್ವಾಯತ್ತ) ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ವಿಟಿಯು ಬೆಳಗಾವಿಯಿಂದ ಮಾನ್ಯ ಉಪಕುಲಪತಿಗಳ ನಿರ್ದೇಶನದಂತೆ ಮುಂದಿನ 2 ವರ್ಷಗಳ ಅವಧಿಗೆ ನಾಮನಿರ್ದೇಶನಗೊಂಡಿರುತ್ತಾರೆ. ಇವರನ್ನು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಚೇರ್‌ಮೆನ್ ಕಮಿಟಿ ‘ಬಿ’ ಎ.ಒ.ಎಲ್.ಇ.(ರಿ) ಡಾ. ರೇಣುಕಾಪ್ರಸಾದ್ ಕೆ.ವಿ, ಡಾ. ಜ್ಯೋತಿ ಆರ್. ಪ್ರಸಾದ್, ಸೆಕ್ರೆಟರಿ ಕಮಿಟಿ ‘ಬಿ’ಎ.ಒ.ಎಲ್.ಇ.(ರಿ) ಮತ್ತು ಕಾಲೇಜಿನ ಪ್ರಾಂಶುಪಾಲರು ಡಾ. ಸುರೇಶ ವಿ. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
Post a Comment