ರೈಲ್ವೆ ನಿಲ್ದಾಣ ಸೇರಿದಂತೆ ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಗವಿಸಿದ್ದೇಶ್ವರರ ಹೆಸರನ್ನು ನಾಮಕರಣ ಮಾಡಬೇಡಿ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ಯಾವುದರಲ್ಲಿಯೂ ಎಳೆದು ತರಬೇಡಿ ಎನ್ನುತ್ತಾ ಗವಿದ್ದೇಶ್ವರ ಮಹಾಸ್ವಾಮೀಜಿಯವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆಯಿತು.
ನಗರದ ಗವಿಮಠದಕೈಲಾಸಮಂಟಪದಲ್ಲಿ ಶುಕ್ರವಾರ ರಾತ್ರಿ ಜರುಗಿದಜಾತ್ರೆಯಸಮಾರೋಪಸಮಾರಂಭದಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿ ಹೇಳಬಾರದು ಅಂದುಕೊಂಡಿದ್ದೆ. ಆದರೆ, ಅನಿವಾರ್ಯವಾಗಿ ಹೇಳುತ್ತಿದ್ದೇನೆ. ಗವಿಸಿದ್ದಪ್ಪಜ್ಜನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಕೆಲ ಸಂಘಟನೆಗಳು ಮನವಿ ಕೊಟ್ಟರು. ದಯವಿಟ್ಟು ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆಕರೆದುಕೊಂಡು ಹೋಗಬೇಡಿ. ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್ ಮಾರ್ಟಮ್ ಮಾಡುತ್ತೀರಿ ಅಷ್ಟೆ ಎಂದು ಭಾವುಕರಾದರು.
ಅಲ್ಲದೆ, ಗವಿಮಠವನ್ನು ಇನ್ನೊಂದು ಮಠದ ಜತೆ ಹೋಲಿಸುವುದು, ಗವಿಮಠದ ಸ್ವಾಮೀಜಿಯವರನ್ನು ಬೇರೆ ಸ್ವಾಮೀಜಿ ಜತೆಗೆ ಹೋಲಿಸುವುದು, ಅದಕ್ಕೆ ಪೋಸ್ಟ್ ಹಾಕುವುದು ಬೇಡ. ಇಡೀ ನಾಡಿನ ಎಲ್ಲ ಶರಣರ ಪಾದದ ಧೂಳಾಗಿ ನಾನಿದ್ದೇನೆ ಅಷ್ಟೆ. ನನ್ನನ್ನು ಯಾರಿಗೂ ಹೋಲಿಸಬೇಡಿ ಎಂದು ಮನವಿ ಮಾಡಿದರು.
ಅಜ್ಜಾರಿಗೆ ಆ ಪ್ರಶಸ್ತಿ ಕೊಡ್ರಿ, ಈ ಪ್ರಶಸ್ತಿ ಕೊಡ್ರಿ ಎಂದು ಹೇಳೋಕೆ ಶುರು ಮಾಡ್ತೀರಿ. ಬರುವ ಪ್ರಶಸ್ತಿ ತಿರಸ್ಕರಿಸುವಷ್ಟು ದೊಡ್ಡವ ನಾನಲ್ಲ. ಅದನ್ನು ಸ್ವೀಕರಿಸುವ ಅರ್ಹತೆಯೂನನಗಿಲ್ಲ ಎಂಬ ವಿನಯತೆ, ವಿನಮ್ರತೆಇದೆ. ಇನ್ನು ಮುಂದೆ ಯಾರೂ ಈ ಮೂರು ವಿಷಯ ಕುರಿತು ಮಾತಾಡಬೇಡಿ ಎಂದು ನಮಸ್ಕಾರ ಮಾಡಿ ಹೊರಟರು. ಈ ವೇಳೆ ಅವರ ಕಣ್ಣಂಚಲ್ಲಿ ನೀರಿತ್ತು.
Post a Comment