ಇಂದು ಸುಮಾರು ಆರು ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಎನ್ನೊಂಟರ್ಗೆ ಬಲಿಯಾಗಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಸುಗುಣ, ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ ಪರಿಹಾರ ಆದರೂ ನೀಡಿ ಎಂದು ಮನವಿ ಮಾಡಿದ್ದಾರೆ
ಉಡುಪಿ, ಜ 08: ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದಿದ್ದ ನಕ್ಸಲ್
ನಾಯಕ ವಿಕ್ರಂ ಗೌಡ ಎನ್ನೊಂಟರ್ನಿಂದ ರಾಜ್ಯದಲ್ಲಿ ನಕ್ಸಲರು ಭಯಭೀತರಾಗಿದ್ದಾರೆ. ಇಂದು ಸುಮಾರು ಆರು ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಎನ್ನೊಂಟರ್ಗೆ ಬಲಿಯಾಗಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಸಹೋದರಿ ಸುಗುಣ, ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ ಪರಿಹಾರ ಆದರೂ ನೀಡಿ ಎಂದು ಮನವಿ ಮಾಡಿದ್ದಾರೆ
ನಕ್ಸಲರ ಶರಣಾಗತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸುಗುಣ, ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ನಮ್ಮ ದಿನ ಸಾಗೋದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಸರೆಂಡರ್ ಆಗುವ ನಕ್ಸಲರಿಗೆ ಕೊಡುವ ಪರಿಹಾರವನ್ನು ನಮಗೂ ಕೊಡಿ ಸಾಕು. ನನ್ನ ಅಣ್ಣನ ಜೀವ ಕೊಡಲು ಸಾಧ್ಯವಿಲ್ಲ. ಎಂಟರ್ ಆಗಿದೆ, ಅವರ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡುವ ಪರಿಹರ ನಮಗೆ ಕೊಟ್ಟರೆ ಸಾಕು. ನಾವು ಕಷ್ಟದಲ್ಲಿದ್ದೇವೆ ಎಂದು ಸುಗುಣ ಹೇಳಿದರು.
ಇಂದು ನಕ್ಸಲ ಶರಣಾಗತಿ ಸಾಧ್ಯತೆ ;
ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ಜನ ನಕ್ಸಲರು ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಕ್ಸಲ್ ಶರಣಾಗತಿಗೆ ದಿನಾಂಕ ಫಿಕ್ಸ್ ಆಗಿದೆ. ಇಂದು (ಜ.8) ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ನಕ್ಸಲರು ಶರಣಾಗತಿಯಾಗುವ ಸಾಧ್ಯತೆಯಿದೆ. ಇವರು ದಕ್ಷಿಣ ಭಾರತದ 4 ರಾಜ್ಯಗಳಿಗೆ ಬೇಕಾಗಿದ್ದಾರೆ. ಈ ತಂಡದ ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ ಸೇರಿದಂತೆ ಪ್ರಮುಖ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ. ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ, ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಶರಣಾಗಲಿದ್ದಾರೆ ಎನ್ನಲಾಗಿದೆ. ಮಾಜಿ ನಕ್ಸಲ್ ನೂರ್ ಜುಕರ್ ಶ್ರೀಧರ್ ನೇತೃತ್ವದಲ್ಲಿ ಶರಣಾಗತಿಗೆ ಮುಂದಾಗಿದ್ದಾರೆ.
Post a Comment