ಮಹಾಕುಂಭ ಮೇಳ: ಪ್ಲಾಸ್ಟಿಕ್‌ ಬಳಕೆ ತಪ್ಪಿಸಲು “ಒಂದು ಪ್ಲೇಟ್- ಒಂದು ಬ್ಯಾಗ್' ಅಭಿಯಾನ

 


ಮಹಾಕುಂಭ ನಗರ: ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ ಮಹಾಕುಂಭ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ಒಂದು ಪ್ಲೇಟ್, ಒಂದು ಬ್ಯಾಗ್' ಅಭಿಯಾನವನ್ನು ಆರ್‌ಎಸ್‌ಎಸ್‌ ಆರಂಭಿಸಿದೆ.

ಪ್ಲಾಸ್ಟಿಕ್ ಚೀಲಗಳು ಮತ್ತು ಬಿಸಾಡುವ ವಸ್ತುಗಳನ್ನು ತಪ್ಪಿಸಲು ಬಟ್ಟೆ ಚೀಲಗಳು, ಸ್ಟೀಲ್ ಪ್ಲೇಟ್‌ಗಳು ಮತ್ತು ಸ್ಟೀಲ್ ಗ್ಲಾಸ್‌ಗಳನ್ನು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೃಷ್ಣ ಗೋಪಾಲ್ ತಿಳಿಸಿದ್ದಾರೆ.


ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಗೋಪಾಲ್‌ ಅವರು, 'ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಲು ಎಲ್ಲರ ಪ್ರಯತ್ನ ಅಗತ್ಯ. ಹೀಗಾಗಿ ಎಲ್ಲರೂ ಬಟ್ಟೆಯ ಚೀಲವನ್ನು ಬಳಸಿ' ಎಂದು ಒತ್ತಾಯಿಸಿದ್ದಾರೆ.


'ಭೇಟಿ ನೀಡುವವರಿಗೆ ಬಟ್ಟೆಯ ಚೀಲಗಳನ್ನು ನೀಡಲಾಗುತ್ತಿದೆ. ಈಗಾಗಲೇ ಆರು ಕೇಂದ್ರಗಳ ಮೂಲಕ 70 ಸಾವಿರ ಜನರಿಗೆ ನೀಡಲಾಗಿದೆ. ದೇಶದಾದ್ಯಂತ ಒಟ್ಟು 2 ಲಕ್ಷ ಸ್ಟೀಲ್ ಪ್ಲೇಟ್‌ಗಳನ್ನು ಸಂಗ್ರಹಿಸಲಾಗಿದೆ. ಈ ಸ್ಟೀಲ್‌ ಪ್ಲೇಟ್ ಮತ್ತು ಗ್ಲಾಸ್‌ಗಳನ್ನು ಎಲ್ಲಾ ಸಮುದಾಯದ ಅಡುಗೆ ಮಾಡುವವರಿಗೆ ಮತ್ತು ಆಹಾರದ ಮಳಿಗೆಗಳನ್ನು ಇಟ್ಟುಕೊಂಡವರಿಗೆ ಹಂಚಲಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

ಜ.14 ರಂದು ಸಂಕ್ರಾಂತಿಯ ಶುಭಗಳಿಗೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 'ಅಮೃತ ಸ್ನಾನ' ಕೈಗೊಂಡು, ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಅಳವಡಿಸಿಕೊಳ್ಳಿ, ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget