ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದರೆ, ದುಡ್ಡು ಕೊಡ್ತೀರಾ.. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದರೆ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ?
ಬೆಂಗಳೂರು: ಬಸ್ ಟಿಕೆಟ್ ದರ ಶೇ.15ರಷ್ಟು ಹೆಚ್ಚಳ ಮಾಡಿರುವ ನಿರ್ಧಾರದ ವಿರುದ್ಧ ಜನತೆ ಟೀಕೆಗೆಳ ನಡುವಲ್ಲೇ ರಾಜ್ಯ ಸರ್ಕಾರದ ನಡೆಯನ್ನು ಸಚಿವ ಚಲುವರಾಯಸ್ವಾಮಿ ಅವರು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ಪ್ರಯಾಣ ದರ ಏರಿಕೆಗೂ ಗ್ಯಾರಂಟಿ ಯೋಜನೆಗೂ ಸಂಬಂಧವಿಲ್ಲ. ಬಸ್ ಟಿಕೆಟ್ ದರ ಹೆಚ್ಚಳ ಮಾಡಿ 10 ವರ್ಷ ಆಗಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದ್ದೇವೆ. ಆಂಧ್ರ, ಕೇರಳ, ತಮಿಳುನಾಡಿನಲ್ಲಿ ಬಸ್ ಟಿಕೆಟ್ ದರ ಹೆಚ್ಚಿದ್ದು, ನಮ್ಮಲ್ಲಿಯೇ ಕಡಿಮೇ ಇದೆ. 10-15 ವರ್ಷಗಳಿಂದ ಟಿಕೆಟ್ ದರ ಪರಿಷ್ಕರಣೆ ಆಗಿಲ್ಲ. ಇದಲ್ಲದೇ 7ನೇ ವೇತನ ಆಯೋಗ ಜಾರಿ ಇದ್ದು, ನೌಕರರಿಗೂ ವೇತನ ಹೆಚ್ಚಳವಾಗಿದೆ. ದರ ಏರಿಕೆ ಮಾಡದಿದ್ದರೆ ಸಂಸ್ಥೆಗಳನ್ನು ಹೇಗೆ ನಿಭಾಯಿಸುವುದು ಹೇಗೆ? ಎರಡ್ಮೂರು ವರ್ಷಕ್ಕೊಮ್ಮೆ ಹೆಚ್ಚಳ ಮಾಡಿದರೆ ಸಮಸ್ಯೆ ಆಗಲ್ಲ ಎಂದು ಹೇಳಿದರು.
ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದರೆ, ದುಡ್ಡು ಕೊಡ್ತೀರಾ.. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದರೆ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ? ಎಂದು ಪ್ರಶ್ನಿಸಿದರು.
ಇದೇ ವೇಳೆ ಇನ್ನೂ ಸಂಕ್ರಾಂತಿಗೆ ಸರ್ಕಾರ ಇರಲ್ಲ ಎಂಬ ಹೆಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿಬಾರಿ ದೇವೇಗೌಡರು ಈ ಸರ್ಕಾರ ಇರಲ್ಲ ಅಂತಿದ್ದರು. ಅಪ್ಪನ ಚಾಳಿ ಮಗನಿಗೆ ಬಂದಿದೆ. ಸರ್ಕಾರವನ್ನು ಕುಮಾರಸ್ವಾಮಿ ನಿರ್ಧಾರ ಮಾಡ್ತಾರಾ..? ಜನರು ತೀರ್ಮಾನ ಮಾಡೋದು. ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ನಮಗೆ ಜನರ ಸರ್ಟಿಫಿಕೇಟ್ ಅಷ್ಟೇ ಬೇಕು. ಮೂರು ಚುನಾವಣೆಗಳಲ್ಲಿ ಜನ ಏನು ತೀರ್ಪು ಕೊಟ್ರು? ನೀವೇ ಇದರ ಬಗ್ಗೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಇದರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ, ಎಲ್ಲರೂ ನಮಗೆ ಸ್ನೇಹಿತರೇ. ಹಾಗಾಗಿ ಏನು ಮಾತನಾಡಬೇಕೋ ಗೊತ್ತಿಲ್ಲ ಎಂದರು.
ಹೆಚ್.ಸಿ.ಮಹದೇವಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಬದಲಾವಣೆ ಅಂತ ಯಾರು ಹೇಳಿದರು? ನೀವೇನಾದ್ರೂ ಹೇಳಿದಿರಾ? ನಮ್ಮಲ್ಲಿ ಹೈಕಮಾಂಡ್ ಇದೆ. ಸಿದ್ದರಾಮಯ್ಯ ಎಲ್ಲರ ಜೊತೆ ಅಪಸ್ವರ ಇಲ್ಲದೆ ಮುಂದೆ ಸಾಗುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅಣ್ಣ-ತಮ್ಮಂದಿರಂತೆ ಅನ್ಯೋನ್ಯ ವಾಗಿದ್ದಾರೆ ಎಂದರು.
ಯಾರಿಗೆ ಅಧಿಕಾರ ನೀಡಬೇಕು ಎಂಬ ಬಗ್ಗೆ ಖರ್ಗೆ, ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಇದ್ದಾರೆ. ಅವರು ತೀರ್ಮಾನ ತೆಗೆದುಕೊಳ್ತಾರೆ, ಕಾಫಿ ತಿಂಡಿಗೆ ಸೇರಿದರು ಎಂದರೆ ಏನರ್ಥ. ಸೇರಬಾರದು ಅಂತ ಏನಾದ್ರೂ ಇದ್ಯಾ? ನಾವು ಲಿಂಗಾಯತ, ಅಹಿಂದದವರ ಸಭೆ ಮಾಡಿದ್ದೆ. ಪಕ್ಷ ಬಲಪಡಿಸೋಕೆ ಮಾಡಿದ್ದೆವು. ಅದನ್ನ ಬೇರೆ ಅರ್ಥ ಮಾಡಿಕೊಂಡರೆ ಹೇಗೆ? ನಿನ್ನೆ ಸಿಎಂ ನಮ್ಮ ಜೊತೆ ಮಾತನಾಡಿದ್ದಾರೆ. ಯೋಜನೆಗಳು, ಬಜೆಟ್ ಬಗ್ಗೆ ಮಾತನಾಡಿದ್ದಾರೆ, ನಮಗೆ ಜನ ಅಧಿಕಾರ ಕೊಟ್ಟಿದ್ದಾರೆ. ನಾವು ಅವರ ವಿಶ್ವಾಸ ಉಳಿಸಿಕೊಳ್ಳಬೇಕಲ್ಲ ಎಂದು ಹೇಳಿದರು.
Post a Comment