ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress) ಡಿನ್ನರ್ ಪಾಲಿಟಿಕ್ಸ್ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಿಜೆಪಿಯಲ್ಲಿಯೂ (BJP) ಡಿನ್ನರ್ ಪಾಲಿಟಿಕ್ಸ್ ಶುರುವಾಗಿದೆ.ಇದನ್ನೂ ಓದಿ: ನಕ್ಸಲರು ಚೀನಾ, ಪಾಕ್‌ನಿಂದ ಸಹಾಯ ಪಡೆದಿದ್ದಾರೆ: ಸಿ.ಟಿ ರವಿ ಗಂಭೀರ ಆರೋಪ
ನಾಳೆ (ಜ.10) ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೋಜನ ಕೂಟ ಆಯೋಜಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು, ಬಳಿಕ ಔತಣಕೂಟ ನಡೆಯಲಿದೆ. ಮಾಜಿ ಶಾಸಕರು, ಮಾಜಿ ಸಂಸದರನ್ನು ಆಹ್ವಾನಿಸಿದ್ದಾರೆ.
ಸಭೆಯಲ್ಲಿ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ತಯಾರಿ ಕುರಿತು ಚರ್ಚೆ ಮಾಡಲಿದ್ದಾರೆ. ಜೊತೆಗೆ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚಿಸಲಿದ್ದಾರೆ. ಈ ಮೂಲಕ ಮಾಜಿಗಳ ವಿಶ್ವಾಸಗಳಿಸಲು ವಿಜಯೇಂದ್ರ ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
Post a Comment